ನಮ್ಮ ಯುಗ ನಿರ್ಮಾಣ ಸತ್ಸಂಕಲ್ಪ

 (Yug Nirmaan Satsankalp)

ಇದು ಎಲ್ಲಾ ಆದರ್ಶತ್ವಗಳ ಮೂಲ ಗಾಯತ್ರಿ ಪರಿವಾರ ಎಲ್ಲಾ ಮತ್ತು ಯೋಜನೆಗಳ ಮೂಲವಾಗಿದೆ. ಈ ಸಂಕಲ್ಪಗಳು ವ್ಯಕ್ತಿ,ಕುಟುಂಬ ಮತ್ತು ಸಮಾಜದ ಪರಿವರ್ತನೆಗಳಾಗಿವೆ. ಪ್ರತಿಯೊಬ್ಬ ಗಾಯತ್ರಿ ಪರಿವಾರದ ಸದಸ್ಯರು ಇದನ್ನು ಓದಿ ಅರ್ಥ ಮಾಡಿಕೊಂಡು ದೈನಂದಿನ ಕ್ರಿಯೆಗಳಲ್ಲಿ ಪ್ರಯೋಗಿಸಬೇಕು.  ಅವುಗಳು ನಮ್ಮ ಆತ್ಮ ಪರಿವರ್ತನೆಗೆ ನಮ್ಮನ್ನು ಏಕಾಗ್ರಗೊಳಿಸಿ ಪ್ರೋತ್ಸಾಹಿಸುತ್ತದೆ, ಮುನ್ನುಗುವಂತೆ ಮಾಡುವುದು ಪ್ರತಿಯೊಬ್ಬ ಬದಲಾವಣೆ ಪರಿವರ್ತನೆಯ ಉತ್ತಮ ಸಾಮಾಜಿಕ ಕೊಡುಗೆಯಾಗಿದೆ.

1. ನಾವು ಈಶ್ವರನನ್ನು ಸರ್ವವ್ಯಾಪಕ, ನ್ಯಾಯದಾತ ಎಂದು ಒಪ್ಪಿ ಆತನ ಅನುಶಾಸನದಂತೆ ಬದುಕು ಸಾಗಿಸುತ್ತೇವೆ.

2. ಶರೀರವನ್ನು ಭಗವಂತನ ಮಂದಿರವೆಂದು ತಿಳಿದು ಆತ್ಮ ಸಂಯಮ ಮತ್ತು ನಿಯಮಗಳಿಂದ ಆರೋಗ್ಯವನ್ನು ಸಂರಕ್ಷಿಸಿಕೊಳ್ಳುತ್ತೇವೆ.

3. ಮನಸ್ಸನ್ನು ದುರ್ವಿಚಾರ ಮತ್ತು ದುರ್ಭಾವನೆಗಳಿಂದ ರಕ್ಷಿಸಿಕೊಳ್ಳಲು ಸ್ವಾಧ್ಯಾಯ ಮತ್ತು ಸತ್ಸಂಗಗಳನ್ನು ಮಾಡುತ್ತೇವೆ.

4. ಇಂದ್ರಿಯ ಸಂಯಮ, ಅರ್ಥ ಸಂಯಮ, ಸಮಯ ಸಂಯಮ ಮತ್ತು ವಿಚಾರ ಸಂಯಮಗಳನ್ನು ಸತತವಾಗಿ ಅಭ್ಯಸಿಸುತ್ತೇವೆ.

5. ನಮ್ಮನ್ನು ನಾವು ಸಮಾಜದ ಅಭಿನ್ನ ಅಂಗವೆಂದು ಭಾವಿಸುತ್ತೇವೆ ಮತ್ತು ಎಲ್ಲರ ಹಿತದಲ್ಲಿಯೇ ನಮ್ಮ ಹಿತವೂ ಅಡಗಿದೆಯೆಂದು ತಿಳಿಯುತ್ತೇವೆ.

6. ಮರ್ಯಾದೆಗಳನ್ನು ಪಾಲಿಸುತ್ತೇವೆ. ದುಶ್ಚಟಗಳಿಂದ ದೂರವಿರುತ್ತೇವೆ. ನಾಗರೀಕ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ ಮತ್ತು ಸಮಾಜ ನಿಷ್ಠರಾಗಿರುತ್ತೇವೆ.

7. ವಿವೇಕ, ಪ್ರಾಮಾಣಿಕತೆ, ಜವಾಬ್ದಾರಿ ಮತ್ತುಸಾಹಸಗಳನ್ನು ಜೀವನದ ಅವಿಭಾಜ್ಯ ಅಂಗಗಳನ್ನಾಗಿ ಆಳವಡಿಸಿಕೊಳ್ಳುತ್ತೇವೆ.

8. ನಮ್ಮ ಪರಿಸರದ ಸುತ್ತಲೂ ಮಾಧುರ್ಯ, ಸ್ವಚ್ಪತೆ, ಅಚ್ಚುಕಟ್ಟುತನ ಮತ್ತು ಸಜ್ಜನಿಕೆಯ ವಾತಾವರಣವನ್ನು ನಿರ್ಮಿಸುತ್ತೇವೆ.

9. ಅನೀತಿಯ ಮಾರ್ಗದಿಂದ ಸಫಲತೆಯನ್ನು ಗಳಿಸುವುದಕ್ಕಿಂತ ನೀತಿಯಮಾರ್ಗದಲ್ಲಿಯೇ ನಡೆಯುತ್ತೇವೆ. ಒಂದೊಮ್ಮೆ ಇದರಿಂದ ಅಸಫಲತೆಯೇ ಎದುರಾದರೂ ಅದನ್ನು ವಿನಯದಿಂದ ಅಂಗೀಕರಿಸುತ್ತೇವೆ.

10. ಮನುಷ್ಯನ ಮೌಲ್ಯಾಂಕನದ ಒರೆಗಲ್ಲು ಸಫಲತೆ, ಯೋಗ್ಯತೆ ಮತ್ತು ಸಿದ್ದಿಗಳಲ್ಲ; ಆತನಲ್ಲಿನ ಸದ್ವಿಚಾರ ಮತ್ತು ಸತ್ಕರ್ಮಗಳನ್ನು ಗೌರವಿಸುತ್ತೇವೆ.

11. ಯಾವ ರೀತಿಯ ನಡವಳಿಕೆ ನಮಗೆ ಪ್ರಿಯವೆನಿಸುವುದಿಲ್ಲವೋ ಆ ರೀತಿಯಲ್ಲಿ ನಾವೂ ಬೇರೆಯವರೊಂದಿಗೆ ನಡೆದುಕೊಳ್ಳುವುದಿಲ್ಲ.

12.ಸ್ತ್ರೀ-ಪುರುಷರು ಪರಸ್ಪರ ಪವಿತ್ರಭಾವ ಇರಿಸಿಕೊಳ್ಳುತ್ತೇವೆ.

13. ಜಗತ್ತಿನಲ್ಲಿ ಸತ್ ಪ್ರವೃತ್ತಿಗಳ ಪುಣ್ಯಪ್ರಸಾರಕ್ಕಾಗಿ ನಮ್ಮ ಸಮಯ, ಜ್ಞಾನ, ಪ್ರಭಾವ, ಪುರುಷಾರ್ಥದ ಒಂದು ಅಂಶವನ್ನು ನಿಯಮಿತವಾಗಿ ನೀಡುತ್ತಲೇ ಇರುತ್ತೇವೆ.

14. ಪರಂಪರೆಗಿಂತಲೂ ವಿವೇಕಕ್ಕೆ ಮಹತ್ತ್ವ ನೀಡುತ್ತೇವೆ.

15. ಸಜ್ಜನರನ್ನು ಸಂಘಟಿಸುತ್ತೇವೆ. ಅನೀತಿಯನ್ನು ಎದುರಿಸುತ್ತೇವೆ. ಮತ್ತು ನವಸೃಷ್ಟಿಯ ಕಾರ್ಯಗಳಲ್ಲಿ ಸಂಪೂರ್ಣ ಆಸಕ್ತಿಯಿಂದ ಭಾಗವಹಿಸುತ್ತೇವೆ.

16. ರಾಷ್ಟ್ರೀಯ ಏಕತೆ ಮತ್ತು ಸಮತೆಯ ಬಗ್ಗೆ ನಿಷ್ಠಾವಂತರಾಗಿರುತ್ತೇವೆ. ಜಾತಿ, ಲಿಂಗ, ಭಾಷೆ, ಪ್ರಾಂತ, ಸಂಪ್ರದಾಯ ಮೊದಲಾದವುಗಳನ್ನು ಮುಂದಿಟ್ಟು ಭೇದ-ಭಾವಗಳನ್ನು ತೋರುವುದಿಲ್ಲ.

17. ಮನುಷ್ಯನು ತನ್ನ ಭಾಗ್ಯದ ನಿರ್ಮಾಪಕ ತಾನೇ ಆಗಿದ್ದಾನೆ. ನಾವು ಶ್ರೇಷ್ಠರಾಗುತ್ತೇವೆ. ಇನ್ನುಳಿದವರನ್ನೂ ಶ್ರೇಷ್ಠರನ್ನಾಗಿಸುತ್ತೇವೆ. ಇದು ಆದಾಗಲೇ ನಿಶ್ಚಿತವಾಗಿ ಯುಗವು ಬದಲಾಗುತ್ತದೆ. ಇದೇ ನಮ್ಮ ಅಚಲ ನಂಬಿಕೆಯಾಗಿದೆ.

18. ನಾವು ಬದಲಾಗುತ್ತೇವೆ. ಯುಗ ಬದಲಾಗುತ್ತದೆ. ನಾವು ಸುಧಾರಿಸುತ್ತೇವೆ. ಯುಗ ಸುಧಾರಿಸುತ್ತದೆ. ಈ ಸತ್ಯದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ.