Our Establishments

ದೇವ ಸಂಸ್ಕೃತಿ ವಿಶ್ವವಿದ್ಯಾಲಯ

                  ದೇವ ಸಂಸ್ಕೃತಿ ದಿಗ್ವಿಜಯ ಅಭಿಯಾನದದಿಯಲ್ಲಿ ಶಾಂತಿಕುಂಜವು ದೇಶ ವಿದೇಶಗಳಲ್ಲಿ 30 ಅಶ್ವಮೇಧ ಮಹಾಯಜ್ಞಗಳನ್ನು, ಒಂದು ವಾಜಪೇಯಿ ಯಜ್ನವನ್ನು, ಎರಡು ವಿರಾಟ್ ಮಹಾಪೂರ್ಣಾಹುತಿ ಕಾರ್ಯಕ್ರಮಗಳನ್ನು ಆವ್ವಲ್ ಖೇಡಾ ಮತ್ತು ಹರಿದ್ವಾರಗಳಲ್ಲಿ ಸಂಪನ್ನಗೊಳಿಸಿದೆ. ಕೇವಲ ಪರಿಸರಕ್ಕೆ ಸಂಬಂಧಿಸಿದಂತೆ ಅಷ್ಟೇ ಅಲ್ಲದೆ ಇನ್ನಿತರೆ ವೈಜ್ಞಾನಿಕ ಪ್ರಯೋಗಗಳಲ್ಲಿಯೂ ಈ ಯಜ್ಞಗಳನ್ನು ಮಹತ್ವಪೂರ್ಣದ್ದೆಂದು ಗುರುತಿಸಲಾಗಿದೆ. ಎನ್ವಯರಮೆಂಟ ಎಂಡ್ ತೆಕ್ನಿಕಲ್ನ ನಿರ್ದೇಶಕರು ಉತ್ತರಪ್ರದೇಶ ಪ್ರದೂಷಣ ನಿಯಂತ್ರಣ ಬೋರ್ಡನ ಸಹಾಯದೊಂದಿಗೆ ಈ ಅಷ್ವಮೇಧಯಜ್ಞಗಳು ಪರಿಸರದ ಮೇಲೆ ಬೀರುವ ಪ್ರಭಾವಗಳು ಕುರಿತು ಸಂಶೋಧನೆ ಮಾಡಿ ಇವುಗಳಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದೆಂದು ತಿಳಿಸಿದ್ದಾರೆ. ಈಗ ಯಜ್ನೋಪತಿ ಪ್ರಯೋಗಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಆಧುನಿಕ ರೂಪ ನೀಡಲಾಗುತ್ತಿದೆ. ಸಂಪೂರ್ಣ ರಾಷ್ಟ್ರದ ಕುಂಡಲಿನೀ ಜಾಗರಣೆಗಾಗಿ ಪರಮ ಪೂಜ್ಯ ಗುರುದೇವರು ಯುಗಸಂಧಿ ಮಹಾಪುರಶ್ಚರಣೆ ಘೋಷಿಸಿದ್ದರು. ಇದರಡಿಯಲ್ಲಿ ಸುಮಾರು 24 ಲಕ್ಷ ಸಾಧಕರು ಪ್ರತಿನಿತ್ಯವೂ 240 ಕೋಟಿ ಗಾಯತ್ರೀ ಮಂತ್ರದ ಮಹಾನುಷ್ಠಾನವನ್ನು ಮಾಡಿದರು. ಇದರ ಪ್ರಥಮ ಪೂರ್ಣಾಹೂತಿಯು ೧೯೯೫ ರ ನವೆಂಬರ್ ೩ ರಿಂದ ೬ ರವರೆಗೆ ಪೂಜ್ಯ ಗುರುದೇವರ ಜನ್ಮಸ್ಥಳ ಆವ್ವಲ್ ಖೇಡಾದಲ್ಲಿ ನಡೆಯಿತು. ಇದರಲ್ಲಿ ಸರಿಸುಮಾರು ೫೦ ಲಕ್ಷ ಪರಿಜನರು ಪಾಲ್ಗೊಂಡಿದ್ದರು. ೨೦೦೦ ದಲ್ಲಿ ಸೃಜನ ಸಂಕಲ್ಪ ವಿಭೂತಿ ಮಹಾಯಜ್ಞದ ರೂಪದಲ್ಲಿ ಎರಡನೆಯ ಪೂರ್ಣಾಹುತಿಯು ಶಾಂತಿಕುಂಜದಲ್ಲಿ ನವಂಬರ್ ೬ ರಿಂದ ೧೧ ರವರೆಗೆ ಸಂಪನ್ನಗೊಂಡಿತು. ಇದಕ್ಕೂ ಮುನ್ನ ನವದೆಹಲಿಯ ಜವಹಾರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ ೨೦೦೦ ಅಕ್ಟೋಬರ ೮ ರಂದು ವಿರಾಟ್ ವಿಭೂತಿ ಜ್ಞಾನಯಜ್ಞವು ಸಂಪನ್ನಗೊಂಡಿತು.

2002 ಜನವರಿಯಲ್ಲಿ ಒಂದು ಆಧ್ಯಾದೇಶದ ಮೂಲಕ ಉತ್ತರಾಂಚಲ ಸರಕಾರವು ಒಂದು ಸ್ವಾಯತ್ತ ಸಂಸ್ಥೆಯ ರೂಪದಲ್ಲಿ ಶಾಂತಿಕುಂಜದ ಗಾಯತ್ರೀ ಕುಂಜದ ಪರಿಸರದಲ್ಲಿ ದೇವಸಂಸ್ಕೃತಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಅಧಿಕಾರ ನೀಡಿತು. ಸಾಧನೆ, ಶಿಕ್ಷಣ, ಆರೋಗ್ಯ ಹಾಗೂ ಸ್ವಾವಲಂಬನೆ ಈ ನಾಲ್ಕು ಆಯಾಮಗಳಿಗೆ ಸಂಭಂಧಿಸಿದ ವಿಭಾಗಗಳಲ್ಲಿ ದೇವಸಂಸ್ಕೃತಿ ವಿ.ವಿ.ಯು ಕಾರ್ಯನಿರತವಾಗಿದ್ದು ಇದು ದೇವಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ವಿಸ್ತರಿಸಲು ಪ್ರತಿಬದ್ಧವಾಗಿದೆ. ೨೦೦೧ ನೇ ಇಸವಿಯಲ್ಲಿ ಇಲ್ಲಿ ಮೊದಲಿಗೆ ಯೋಗ ಹಾಗೂ ಆಯುರ್ವೆದಗಳ ಸ್ನಾತಕೋತ್ತರ ತರಗತಿಗಳು ಆರಂಭವಾದವು.

ದೈವೀ ಸತ್ತೆಯ ಮೂಲಕ ಪರೋಕ್ಷ ರೂಪದಿಂದ ಮಿಶನ್ ಸಂಚಾಲನೆಗೊಳ್ಳುತ್ತಿದ್ದು ಲಕ್ಷಾಂತರ ವ್ಯಕ್ತಿಗಳು ಪ್ರತಿನಿತ್ಯವೂ ನೀಡುವ ಒಂದು ಮುಷ್ಠಿ ಧಾನ್ಯ ಹಾಗೂ ಒಂದು ರೂಪಾಯಿ ಮತ್ತು ಒಂದುಗಂಟೆ ಸಮಯದಾನದಿಂದ ಕಳೆದ ೬೦ ವರ್ಷಗಳಿಂದಲೂ ಈ ವಿರಾಟ ಮಿಶನ್ನಿನ ಎಲ್ಲಾ ವ್ಯವಸ್ಥೆಗಳು ನಡೆಯುತ್ತಿವೆ. ನಿಷ್ಠಾವಂತ ಪರಿಜನರು ೧ ರಿಂದ ೪ ಗಂಟೆ ಸಮಯವನ್ನು ಪ್ರತಿನಿತ್ಯವೂ, ಮತ್ತು ಪ್ರತಿತಿಂಗಳಲ್ಲಿ ಒಂದು ದಿನದ ವೇತನವನ್ನು ಈ ಪುಣ್ಯಕಾರ್ಯಕ್ಕಾಗಿ ನೀಡುತ್ತಿದ್ದಾರೆ.

ಸುಮಾರು ಒಂದು ಸಾವಿರ ಉನ್ನತ ಶಿಕ್ಷಣ ಪಡೆದ ಕಾರ್ಯಕರ್ತರು ಶಾಂತಿಕುಂಜದಲ್ಲಿ ಸ್ಥಾಯೀ ರೂಪದಲ್ಲಿ ಪರಿವಾರ ಸಹಿತ ವಾಸಿಸುತ್ತಿದ್ದಾರೆ. ತಮ್ಮ ಜೀವನ ನಿರ್ವಹಣೆಗಾಗಿ ಸಾಮಾನ್ಯ ಭಾರತೀಯನ ಸ್ತರದ ವೇತನ ಪಡೆಯುತ್ತಿದ್ದಾರೆ.

ಈ ಪ್ರಕಾರ ಶಾಂತಿಕುಂಜವು ಒಂದು ವಿಶೇಷ ಸ್ಥಾಪನೆಯಾಗಿದ್ದು ನಿಜವಾದ ಅರ್ಥದಲ್ಲಿ ಯುಗತೀರ್ಥವೆಂದು ಕರೆಸಿಕೊಳ್ಳುತ್ತಿದೆ. ಇಲ್ಲಿಗೆ ಬರುವ ವ್ಯಕ್ತಿಗಳು ಇಲ್ಲಿನ ನೈಸರ್ಗಿಕ ಸೌಂದರ್ಯ ಹಾಗೂ ಆಧ್ಯಾತ್ಮಿಕ ಶಕ್ತಿಯಿಂದ ಪ್ರಭಾವರಾಗುತ್ತಾರೆ.

ಇಂಗ್ಲೀಷರ ಸಮಯದ ಶಿಕ್ಷಣವೆಂದರೆ ಕೇವಲ ಪುಸ್ತಕ ಜ್ಞಾನ; ಪದವಿ; ಉದ್ಯೋಗ; ಹಣ ಸಂಪಾದನೆ; ಇದಿಷ್ಟನ್ನೇ ಕೇಂದ್ರ ಸರಕಾರ ಮುನ್ನಡೆಸಿದ ಕಾರಣ ಇಂದು ದೇಶದ ನಾಗರಿಕರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ರಾಷ್ಟ್ರದ ಬಗ್ಗೆ ತನ್ನ ಕರ್ತವ್ಯ; ಈ ಧೋರಣೆ ಪರಿಪೂರ್ಣ ಮಾಯವಾಗಿದೆ. ವಿದ್ಯಾವಂತನ ಆದರ್ಶ ಕರ್ತವ್ಯ ಕೇವಲ ಸಂಪಾದನೆ ಮತ್ತೆ ಸ್ವಪರಿವಾರಕ್ಕಾಗಿ ಎಂಬ ಸೀಮಿತ ದೃಷ್ಟಿಕೊಣವೇ ಸರ್ವವ್ಯಾಪಿಯಾಗಿದೆ. ಧರ್ಮತಂತ್ರದ ಮಾಧ್ಯಮದಿಂದ ಲೋಕ ಶಿಕ್ಷಣ ನೀಡಬೇಕು. ರಾಷ್ಟ್ರ ಸಂರಕ್ಷಣೆಗೆ ಇದು ಅತ್ಯಾವಶ್ಯವೆಂಬುದನ್ನುವಿವೇಕಾನಂದರು 117 ವರ್ಷಗಳ ಮೊದಲೇ ಘೋಷಿಸಿದ್ದರು. ಇದನ್ನು ಕಾರ್ಯಗತಗೊಳಿಸುವಲ್ಲಿ ಪರಮಪೂಜ್ಯ ರಿತ್ತ ಹೆಜ್ಜೆ ಗಮನಾರ್ಹ. ಭಾರತದ ಸರ್ವ ಭಾಷೆಗಳಲ್ಲಿ 14 ವಿಶ್ವ ವಿದ್ಯಾಲಯಗಳು 500 ಎಕ್ರೆ ಜಾಗದಲ್ಲಿ ನಿರ್ಮಾನಗೊಳ್ಳುತ್ತಿವೆ. ಅಂತೆಯೇವಿದ್ಯಾರ್ಥಿಗಳಿಗಾಗಿ ವಸತಿಗೃಹ ನಿರ್ಮಾನ್ವಾಗುತ್ತಿವೆ. ಸರ್ವವೂ ಧರ್ಮಾರ್ಥ ಸರ್ವರಿಗೂ ಉಪಲಬ್ದ. ಇದೀಗಲೇ ಎರಡು ವಿದ್ಯಾಸಂಸ್ಥೆಗಳು ಶಾಸ್ತ್ರ, ಯೋಗ ವಸಿಶ್ಥಾ ಮತ್ತೆ ಯೋಗ ಸಾಧನಾ ಮನಶಾಸ್ತ್ರ ಮತ್ತೆ (Physiology) ಜೀವಶಾಸ್ತ್ರ ಪದವಿ ಪಡೆಯುವ ವಿದ್ಯಾರ್ಥಿ ಸಮೂಹ ಈ ಆಶ್ರಮದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ರವಿಂದ್ರನಾಥ್ ಟಾಗೋರ್ರವರ ವಿಶ್ವಭಾರತಿ ಮತ್ತೆ ಶ್ರೀನಿಕೆತನದಂತೆ ಇದೆ ಇದು. ಸ್ವಾವಲಂಬನೆ, ಸರಳ ಜೀವನ ನಿರ್ವಹಣೆ ಆದರ್ಶ ಗುಣ ಸಮುಚ್ಚಯದ ವ್ಯಕ್ತಿತ್ವವನ್ನು ನಿರ್ಮಾಣಗೊಳಿಸುವ ಅಂತೆಯೇ ವೈದ್ಯಕೀಯ, ತಂತ್ರಜ್ಞಾನ, ಹಾಗೂ ಅನೇಕಾನೇಕ ಪದವಿ ನೀಡುವ ವಿದ್ಯಾ ಸಂಸ್ಥೆಗಳು ತಯಾರಾಗುತ್ತಿವೆ. (3-3-2003)ರಂದು ಅಖಿಲ ವಿಶ್ವದ ಗಾಯತ್ರೀ ಪರಿವಾರದ ಸಂಚಾಲಕ ಹಾಗೂ ಈ ವಿಶ್ವವಿದ್ಯಾಲಯದ ಉಪಕುಲಪತಿ ಡಾ। ಪ್ರಣವ ಪಾಂಡ್ಯ ಮತ್ತೆ ಅವರ ಧರ್ಮ ಪತ್ನಿ ಗಾಯಿತ್ರಿ ತೀರ್ಥ ಮಾನವ ನಿರ್ಮಾಣ ಕೇಂದ್ರದ ಸಂಚಾಲಕಿ ಶ್ರೀಮತಿ ಶೈಲಪಾಂಡ್ಯ ವಿದ್ಯಾಭ್ಯಾಸದಲ್ಲಿ ವಿಶಿಷ್ಟ ಪರಿವರ್ತನೆಯನ್ನು ತರುವ ಬಗ್ಗೆ ರಾಷ್ಟ್ರಪತಿ – ಅಬ್ದುಲ ಕಲಂನ್ನು ಭೇಟಿಯಾಗಿರುವರು. ಅದನ್ನು ರಾಷ್ಟ್ರಪತಿ ಸಮ್ಮತಿಸಿರುವರು. ಮುಂದಕ್ಕೆ ಈ ವಿದ್ಯಾಮಂದಿರದಿಂದ ಹೊರ ಬರಲಿರುವ ಯುವ ಶಕ್ತಿ ರಾಷ್ಟ್ರ ಗೌರವಾದ ಪ್ರಜೆಗಳೇ ಅಲ್ಲ, ದೇವ ದೇವರುಗಳನ್ನು ಮರೆಯುವ ಇವರನ್ನು ನಿರ್ಮಾಣಗೊಳಿಸಲಾಗುತ್ತಿದೆ. ಸಜ್ಜನತೆ, ಸಚ್ಚಾರಿತ್ರ್ಯ, ಸರಳ ಜೀವನ, ಅನುಶಾಸಿತ ಜೀವನಕ್ರಮ , ಪ್ರಾಮಾಣಿಕತೆ, ಗಾಯತ್ರೀ ಸಾಧನಾ (ಸೂರ್ಯಾರಾಧನೆ) ಜಪ, ಸಾಧನಾ, ಹಾಗೂ ರಾಷ್ಟ್ರೀಯತೆ ಅದೇ ಅವರ ಜಾಗೃತ ಮಂತ್ರ. ಪ್ರತಿಭಾಶಾಲಿ ಚಾರಿತ್ರ್ಯ ಶೀಲ ವಿದ್ಯಾರ್ಥಿಗಳನ್ನು ನಿರ್ಮಣಗೊಳಿಸುವಲ್ಲಿ “ ಉತ್ತಿಷ್ಠ ಜಾಗೃತಃ ಪ್ರಾಪ್ಯವರಾನ್ನಿ ಭೋಧತ “ ಎಂಬ ಧ್ಯೇಯ ಸಾಧನೆಯಲ್ಲಿ ಇಲ್ಲಿಯ ವಿದ್ಯಾರ್ಥಿಗಳನ್ನು ಶಾಂತಿಕುಂಜದ ವಿದ್ಯಾನಿಧಿ ತಪಸ್ವಿಗಳು ತಯಾರಿಸುತ್ತಿರುವರು. ಭಾರತೀಯ ಇತಿಹಾಸದಲ್ಲಿ ನವ ಪ್ರಭಾತ. ನಾವೀನ್ಯತೆಯ ಅರುಣೋದಯ. ಪರಮಪೂಜ್ಯರ ವಿಚಾರಕ್ರಾಂತಿಯಾ ಯಜ್ಞದಲ್ಲಿ ತನ್ನನ್ನು ತಾನೇ ಶುದ್ಧಿಕರಿಸಿಕೊಂಡವನೇ ವಿಭೂತಿ ಪುರುಷ. ಪರಮಪೂಜ್ಯರು ಶತಸೂತ್ರದಲ್ಲಿ ಸಂಯೋಜಿಸಿ ಕೊಂಡಿರುವ ರಚನಾತ್ಮಕ ಸೃಜನಾತ್ಮಕ, ನಿರ್ಮಾಣಾತ್ಮಕ ಕಾರ್ಯ ಇಲ್ಲಿ ಅನುಪ್ರಾಣಿತರಾದ ಜನಾಂಗವೇ ನಿರ್ಮಿಸಲಿದೆ. ಮುಂದಕ್ಕೆ ಭಾರತವೇ ಜಗದ್ಗುರು; ಈ ಪ್ರಚಂಡ ಪ್ರವಾಹ ಭಾರತದ ಆಧ್ಯಾತ್ಮಿಕ ಕ್ಷೇತ್ರಗಳಿಂದಲೇ ವಿಶ್ವದಾದ್ಯಂತ ಪ್ರಸಾರವಾಗಲಿದೆ. ಇಂತಹ ಪರಂಪರೆಯ ನಂದಾದೀಪದೊಂದಿಗೆ ಮುಂದೆ ಸಾಗುವ. ಋಷಿವಾಣಿಯೊಂದಿಗೆ ಆಧುನಿಕ ವಿಜ್ಞಾನದ ಸಮನ್ವಯವೇ ದೇವ ಸಂಸ್ಕೃತಿ ದಿಗ್ವಿಜಯ. ಯುಗ ಪರಿವರ್ತನೆ ಎಂದರೆ ಸಮಗ್ರ ಮಾನವ ಕುಲದ ಆಂತರಿಕ ಪರಿವರ್ತನೆ.

ಇದು ಗುರು ಶಿಷ್ಯ ಪರಂಪರೆಯನ್ನು ಪುನರ್ಜೀವಿಸುವುದರೊಂದಿಗೆ; ಗಾಯತ್ರಿ ಮಹಾ ಮಂತ್ರದ ತತ್ವ ದರ್ಶನದೊಂದಿಗೆ ಪರಿಪೂರ್ಣತೆಯನ್ನು ಪಡೆಯಲಿದೆ. ಪ್ರಾದ್ಯಾಪಕರು ತಮ್ಮ ವಿದ್ಯಾರ್ಥಿಗಳೊಡನೆ ಹಿಂತಿರುಗುವ ಮೊದಲು ಈ ರೀತಿ ತಮ್ಮ ಹೇಳಿಕೆ ನೀಡಿದರು. “ಇಡೀ ದೇಶವು ಈ ವಿಶ್ವವಿದ್ಯಾಲಯದ ವಿದ್ಯಾ ವಿಧಾನವನ್ನು ಅನುಸರಿಸಬೇಕು. ಇಲ್ಲಿನ ವಿದ್ಯಾರ್ಥಿಗಳ ರೀತಿಯ ಆಸಕ್ತಿ, ಉದಾತ್ತ ಭಾವನೆಗಳನ್ನು ಬೇರೆಲ್ಲೂ ಕಾಣಲಾಗದು. ಈ ವಿಶ್ವವಿದ್ಯಾಲಯವು ತನ್ನ ಈ ಕ್ರಾಂತಿಕಾರಿ ವಿದ್ಯಾ ವಿಧಾನವನ್ನು ಮುಂದುವರೆಸಿದರೆ, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇತರೆಡೆಗೆ ಸಾಗಿ ಸಮಾಜದಲ್ಲಿ ಪರಿವರ್ತನೆಯ ಕ್ರಾಂತಿಯನ್ನು ತರುವುದರಲ್ಲಿ ಯಾವ ಸಂಶಯವೂ ಇಲ್ಲ.

ದೇವ ಸಂಸ್ಕೃತಿ ವಿಶ್ವವಿದ್ಯಾಲಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂದರ್ಶಿಸಿ http://www.dsvv.ac.in/

ವಿಳಾಸ:

Dev Sanskriti Vishwavidyalaya

Shantikunj-Gayatrikunj, Haridwar – 249411

Phone: 01334-261367, 262094 (Ext – 405)

Fax: 01334-260723, 260866

ಬ್ರಹ್ಮ ವರ್ಚಸ್ಸ್

ವೇದಮೂರ್ತಿ ಯುಗ ಋಷಿ ಶ್ರೀರಾಮ ಶರ್ಮಾ ಆಚಾರ್ಯರು ಕೇವಲ ಆಧ್ಯಾತ್ಮಿಕ ತತ್ವದರ್ಶಕರೇ ಅಲ್ಲ. ವಿಶ್ವಸ್ಥ ವಿಜ್ಞಾನಿ ಕೂಡಾ. ಆಧ್ಯಾತ್ಮ ವಿಜ್ಞಾನದ ಪ್ರಯೋಗ ಶಾಲೆಯೊಂದನ್ನು ನಿರ್ಮಿಸಿ ಆರ್ಷೇಯ ತತ್ವದರ್ಶನ, ಗಾಯತ್ರಿ ಮಂತ್ರ ಸಂಪೂರ್ಣ ವಿಜ್ಞಾನ ಸಂಮತವೆಂಬುದನ್ನು ಸಿದ್ಧಪಡಿಸಿರುವರು. ಮಾನವ ಕೋಟಿಯ ಉತ್ಥಾನಕ್ಕೆ ನಿರ್ಮಲ ಅಂತಃಕರಣ, ಪವಿತ್ರ ಚಿತ್ತ, ಮಾನವೀಯ ಸಂವೇದನೆ, ಪ್ರೇಮ, ಜಪ, ಧ್ಯಾನ, ಸಾತ್ವಿಕ ಆಹಾರ, ಸೂರ್ಯಾರಾಧನೆ, ಸತ್ಸಂಗ, ಸ್ವಧ್ಯಾಯ ಯಜ್ಞೀಯ ಜೀವನ ಕ್ರಮ ಅತ್ಯಗತ್ಯ ಎಂಬ ಪರಮ ಸತ್ಯವನ್ನು ಪ್ರಯೋಗದ ಮೂಲಕ ಸಿದ್ಧಪಡಿಸಿ ಆಧುನಿಕ ವಿಜ್ಞಾನ ಪ್ರಪಂಚಕ್ಕೆ ಅಧ್ಯಾತ್ಮ ವಿಜ್ಞಾನದ ಹೊಸ ಅಧ್ಯಾಯವನ್ನು ಸಂಯೋಜಿಸಿರುವರು. ದಿನದ ಪ್ರತಿ ಒಂದು ಘಳಿಗೆಯನ್ನು ಸದುಪಯೋಗಗೊಳಿಸುವ ಮನೋದಾಡ್ಯರ್ತೆಯಿಂದ ಉತ್ಕೃಷ್ಟ ಚಿಂತನೆಯೊಂದಿಗೆ ಮನಸ್ಸನ್ನು ಸಮಾವೆಶಗೊಳಿಸುವುದರಿಂದ ಮಾನವೀಯ ಕಾಯದಲ್ಲಿ ಸುಪ್ತಾವಸ್ಥೆಯಲ್ಲಿ ಪವಡಿಸಿರುವ ಸರ್ವಶಕ್ತಿಯೂ ಜಾಗ್ರತವಾಗಿ ಮಾನವೀಯ ಕಾಯವೇ ವಿಶ್ವ ಶಕ್ತಿಯ ಕೇಂದ್ರ ಬಿಂದುವಾಗಿ  ಮಾರ್ಪಡುವುದು. ಇದನ್ನು ಪ್ರಯೋಗದ ಮೂಲಕ ಸ್ಪಷ್ಟಪಡಿಸಿ ಅನುಸಂಧಾನ ನೀಡುವ ಪ್ರಯೋಗಶಾಲೆಯೊಂದನ್ನು ಪರಮಪೂಜ್ಯರು ಸ್ಥಾಪಿಸಿರುವರು. ಅದರ ಹೆಸರೇ ಬ್ರಹ್ಮ ವರ್ಚಸ್ಸ್ ಎಂದು “ನಭೂತೋ ನಭವಿಷ್ಯತಿ” ಎಂಬಂತಹ ಈ ಪ್ರಯೋಗ ಶಾಲೆ ಕೋಟಿ ಕೋಟಿ ರೂಪಾಯಿಯ ಆಧುನಿಕ ಉಪಕರಣಗಳಿಂದ ಸುಸಜ್ಜಿತವಾಗಿದೆ. ಪ್ರಾಚೀನ ಋಷಿ ಪರಂಪರೆಯ  ತತ್ವದರ್ಶನಹಾಗೂ ಆಧುನಿಕ ವಿಜ್ಞಾನಿಗಳ ಸಂಶೋಧನೆ ಇದರ ಸಮನ್ವತೆಯನ್ನು ಇಲ್ಲಿ ದರ್ಶಿಸಲಾಗುತ್ತಿದೆ. ಶಿಬಿರಾರ್ಥಿಗಳ (ಸಾಧಕರ) ಮನಸ್ಸನ್ನು ಜಪ ಧ್ಯಾನ ಸಾಧನಾಕ್ರಮದ ಮೊದಲು ಪರೀಕ್ಷಿಸಲಾಗುತ್ತಿದೆ. ಅಂತೆಯೇ ಯಜ್ಞ ಜಪ ಧ್ಯಾನ ಸಾಧನಾ ಸತ್ಸಂಗ, ಸ್ವಧ್ಯಾಯ , ಉದ್ಭೋದನೆ ಸಾತ್ವಿಕ ಆಹಾರ ಸೇವಿಸಿದ ಅನಂತರ ಶಿಬಿರ ೯ ನೆಯ ದಿನದಲ್ಲಿ ಪರೀಕ್ಷಿಸಲಾಗುತ್ತದೆ. ಅನಂತರ ಫಲಿತಾಂಶ ನೀಡಲಾಗುವುದು.  ಸಾಧನಾದ ಅನಂತರ ಮಾನವೀಯ ಕಾಯದಲ್ಲಿ ಉಂಟಾಗುವ ಅದ್ಭುತ ಪರಿವರ್ತನೆಯನ್ನು ಕಂಡುಕೊಂಡ ವಿದೇಶಿಯರು ಕೂಡಾ ೨೪ ಅಶ್ವಮೇಧ (ಗಾಯತ್ರಿ) ಮಹಾಯಜ್ಞ ನೆರವೇರಿಸಲಿಕ್ಕೆ ಹಾಗೂ ಗಾಯತ್ರೀ ಮಂತ್ರ ಜಪ ಪ್ರಸಾರಕ್ಕೆ ಅವರ ದೇಶದಲ್ಲಿ ಅನುವು ಮಾಡಿ ಕೊಟ್ಟರು.
ಅದಲ್ಲದೆ ವಾಣಿಯ ವೈಖರಿ ಸಂಗೀತದ ಮಹತ್ವಿಕೆ ಆ ಬಗ್ಗೆ ನಾರದ ಪರಂಪರೆಯನ್ನು ಇಲ್ಲಿ ಪುನರ್ಜೀವಿಸಿರುವರು. ಸಂಗೀತದ ಸ್ವರ ಲಹರಿಯಿಒಂದ ವ್ಯಕ್ತಿಯ ರಕ್ತದ ಕಣ ಕಣಗಳಲ್ಲಿ ಉಂಟಾಗುವ ವೈಶಿಷ್ಥ  ಪೂರ್ಣ  ಬದಲಾವಣೆಯನ್ನು ಪರೀಕ್ಷಿಸಲಾಗುತ್ತಿದೆ ಇಲ್ಲಿ.

ಆವಲಖೆಡಾ

ಆವಲಖೆಡಾ ಗ್ರಾಮವು ಗುರುದೇವರ ಜನ್ಮಸ್ಥಳವಾಗಿದೆ. ಇದು ಆಗ್ರಾದಿಂದ 12 ಮೈಲಿ ದೂರದಲ್ಲಿ ಜಲೆಸರ್ ರಸ್ತೆಯಲ್ಲಿ ಇದೆ. ಗುರುದೇವರು ಬಾಲಕಿಯರಿಗಾಗಿ ಪ್ರೌಡಶಾಲೆ, ಕಾಲೇಜು ಮತ್ತು ಒಂದು ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಇದನ್ನು ಈಗ, ಅಖಿಲ ವಿಶ್ವ ಗಾಯತ್ರಿ ಪರಿವಾರದವರು (ಆದರ್ಶ ಗ್ರಾಮ ತೀರ್ಥ ಯೋಜನೆ) ಅಡಿಯಲ್ಲಿ ಅಭಿವೃದ್ಧಿ ಪಡೆಸಿದ್ದಾರೆ. ಇದು ಭಕ್ತರಿಗೆ ಕೇವಲ ಯಾತ್ರಾ ಸ್ಥಳ ಮಾತ್ರವಲ್ಲದೆ ಯುಗ ನಿರ್ಮಾಣ ಯೋಜನೆಯನ್ನು ಪ್ರಚಾರ ಪಡಿಸುತ್ತಾ ಸಾಮಾಜಿಕ ಹಾಗೂ ತಾಂತ್ರಿಕ ರಂಗದಲ್ಲಿ ಮುನ್ನುಡೆಯುತ್ತಿದೆ.

ಗಾಯತ್ರಿ ತಪೋಭೂಮಿ ಮಥುರಾ

ಇದನ್ನು ಗುರುದೇವರು 1952 ಸ್ಥಾಪಿಸಿದ್ದಾರೆ 24 ಗಾಯತ್ರಿ ಪುರಶ್ಚರಣೆ ಅಂದರೆ ಒಂದು ವರ್ಷದಲ್ಲಿ 2.4 ಕೋಟಿ ಗಾಯತ್ರಿ ಮಂತ್ರವನ್ನು ಜಪಿಸಿ ಇದರ ಸಮಾಪ್ತಿಯ ನಂತರ ನೆನಪಿಗಾಗಿ ಸ್ಥಾಪಿಸಿದ್ದಾರೆ. ಅಖಿಲ ವಿಶ್ವ ಗಾಯತ್ರಿ ಪರಿವಾರವು ನಿರಂತರವಾಗಿ ಬೆಳಗುವ ವ್ರುಕ್ಷವಾಗಳು ಬೇಕಾದ ಬೀಜವನ್ನು ಇಲ್ಲಿ ನಿಟ್ಟಿದಾರೆ. ಇಲ್ಲಿ ಯುಗ ನಿರ್ಮಾಣ ದಿ ಕೇಂದ್ರ, ಸ್ವಾವಲಂಬನೆ ಕೇಂದ್ರ, ವಿದ್ಯಾ ಕಾರ್ಯಾಕ್ರಮ ಮತ್ತು ಪ್ರಕತಗಳು ಇಲ್ಲಿಂದ ಆಗುತ್ತಿವೆ. ಯುಗ ನಿರ್ಮಾಣ ಯೋಜನೆಯ ದೈವಿಕವಾಗಿ ಜನ್ಮ ತಾಳಿದ ಸ್ಥಳ ಇದಾಗಿದೆ.

ಅಖಂಡ ಜ್ಯೋತಿ ಸಂಸ್ಥಾನ , ಮಥುರಾ

ಈ ಸ್ಥಳದಲ್ಲಿ ಗುರುದೇವರು ಮೂರು ದಶಮಾನಗಳ ಕಾಲವಿದ್ದರು ಮತ್ತು ಅವರು ಮಹಾಪುರಶ್ಚರನೆಯನ್ನು ಈ ಸ್ಥಳದಲ್ಲೇ ಸಮಾಪ್ತಿಗೊಳಿಸಿದ್ದಾರೆ. ಜೊತೆಗೆ ಅವರು ಭಾರತದ ಶಾಂತಿಯುತ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ್ದಾರೆ. ಮತ್ತು ಯುಗ ನಿರ್ಮಾಣ ಯೋಜನೆಯ ಪ್ರಮುಖ ಪತ್ರಿಕೆ ಅಖಂಡ ಜ್ಯೋತಿಯನ್ನು ಇಲ್ಲೇ ಆರಂಭಿಸಿದ್ದಾರೆ. ಇದು ದಿವ್ಯ ಜ್ಯೋತಿಯನ್ನು ಪಸರಿಸುವ ಮೂಲ ಪತ್ರಿಕೆಯಾಗಿದೆ. ಈಗ ಇದು ಅಖಂಡ ಜ್ಯೋತಿಯ ಪ್ರಕಾಶನದ ಮುಖ್ಯ ಸ್ಥಳವಾಗಿದೆ ಜೊತೆಗೆ ಇದರ ಅನುವಾದಿತ ಆವೃತ್ತಿಗಳು ಹಲವಾರು ಭಾಷೆಗಳಲ್ಲೂ ಪ್ರಕಟವಾಗಿ ಕೋಟ್ಯಾಂತರ ಮಂದಿಗೆ ತಲುಪುತ್ತಿದೆ.