Gayatri and Yagya

ಗಾಯತ್ರಿ

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್.
ಇಪ್ಪತ್ತನಾಲ್ಕು ಅಕ್ಷರಗಳ ಗಾಯತ್ರೀಯ ಮಹಾಮಂತ್ರವನ್ನು ಭಾರತೀಯ ಸಂಸ್ಕೃತಿಯ ವಾಙ್ಮಯದ ‘ನಾಭಿ’ ಎನ್ನಲಾಗುತ್ತದೆ. ಇದರಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಇದು ಜಗತ್ತಿನಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಮತ್ತು ಸಮಗ್ರವಾದ ಧರ್ಮಶಾಸ್ತ್ರವಾಗಿದೆ. ಎಂದಾದರೂ ಭಾರತ ಚಕ್ರವರ್ತಿ, ಜಗದ್ಗುರು ಹೇಳಿಕೆಗೆ ಅನುಗುಣವಾಗಿ ಇದ್ದುದಾದರೆ, ಅದರ ಮೂಲದಲ್ಲಿ ಇದರ ಪಾತ್ರವಿದೆ. ಗಾಯತ್ರೀ ಮಂತ್ರದ ತತ್ವಜ್ಞಾನ ತನ್ನೊಳಗೆ ಎಂತಹ ಉತ್ಕೃಷ್ಟತೆಯನ್ನು ಕೂಡಿಟ್ಟುಕೊಂಡಿದೆ ಎಂದರೆ, ಅದನ್ನು ಕರಗತ ಮಾಡಿಕೊಂಡು ತಮ್ಮ ಬದುಕಿನ ಕ್ರಮದಲ್ಲಿ ಅಳವಡಿಸಿಕೊಂಡರೆ ಜೀವನವು ಪರಿಷ್ಕøತವಾಗುತ್ತಾ ಹೋಗಬಲ್ಲುದು. ನಮ್ಮ ಆದಿಗ್ರಂಥಗಳಾದ ವೇದಗಳ ಸಾರತತ್ತ್ವವು ಗಾಯತ್ರೀ ಮಂತ್ರದ ವ್ಯಾಖ್ಯೆಯಲ್ಲಿ ಕಂಡು ಬರುತ್ತದೆ.
ಗಾಯತ್ರೀ- ತ್ರಿಪದೆ. ಅದರ ಉದ್ಗಮ ಒಂದೇ ಆದರೂ ಅದರೊಂದಿಗೆ ಮೂರು ದಿಕ್ಕಿನ ಸ್ರೋತಗಳು ಕೂಡಿಕೊಳ್ಳುತ್ತವೆ. (1) ಸವಿತಾದ ಭರ್ಗ- ತೇಜಸ್ಸಿನ ಪರಿಷ್ಕøತವಾದ ಪ್ರತಿಭೆ, ಶೌರ್ಯ ಅಥವಾ ಸಾಹಸ. (2) ದೇವತ್ವದ ಆಯ್ಕೆ, ದೇವ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಗೌರವ-ಘನತೆಗಳನ್ನು ಅಂತರಾಳದಲ್ಲಿ ಧಾರಣೆ ಮಾಡಿಕೊಳ್ಳುವುದು. (3) ತನ್ನಲ್ಲಿ ಮಾತ್ರವಲ್ಲ, ಇಡೀ ಗುಂಪಿನಲ್ಲಿ, ಸಮಾಜದಲ್ಲಿ, ಕೊನೆಗೆ ಜಗತ್ತಿನಲ್ಲಿ ಒಳ್ಳೆಯ  ಬುದ್ಧಿಯ ಪ್ರೇರಣೆಯನ್ನು ಚಿಗುರಿಸುವುದು.
ಗಾಯತ್ರೀಯ ಪೂಜೆ-ಉಪಾಸನೆ, ಮತ್ತು ಜೀವನ-ಸಾಧನೆಗಳನ್ನು ಸರಿಯಾದ ಕ್ರಮದಲ್ಲಿ ಮಾಡಲು ಸಾಧ್ಯವಾದರೆ ಅದರ ಋದ್ಧಿ- ಸಿದ್ಧಿಗಳು ಸ್ವರ್ಗ ಮತ್ತು ಮುಕ್ತಿಯ ರೂಪದಲ್ಲಿ. ಅನವರತವಾಗಿ ಸಾಧಕನ ಅಂತರಾಳದಲ್ಲಿ ಅರಳುತ್ತಲೇ ಇರುತ್ತವೆ. ಇಂತಹ ಸಾಧಕ  ಎಲ್ಲೇ ಇದ್ದರೂ, ಅಲ್ಲಿ ಅವನ ವಿಶಿಷ್ಟತೆಗಳ ಸಾಮಥ್ರ್ಯದಿಂದಲೇ ಸ್ವರ್ಗದಂತಹ ವಾತಾವರಣವನ್ನು ಏರ್ಪಡಿಸಿಕೊಳ್ಳುತ್ತಾನೆ. ಎಲ್ಲಿ ಶಿಖಾ- ಸೂತ್ರಕ್ಕೆ ಗಾಯತ್ರೀಯೊಂದಿಗೆ ಬೇರ್ಪಡಿಸಲಾಗದ ಸಂಬಂಧವಿದೆಯೋ, ಅಲ್ಲೇ ಗಾಯತ್ರೀಯ ಪೂರಕವಾಗಿ- ಯಜ್ಞವಿರುತ್ತದೆ. ಎರಡು ಸಂಸ್ಕøತಿಯ ಆಧಾರ ಸ್ತಂಭಗಳು. ಅಪೌರುಷೇಯ ಸ್ತರದಲ್ಲಿ ಅವತರಿಸಿದ ಗಾಯತ್ರೀ ಮಂತ್ರ, ಒಂದು ಹೊಸ ಸೃಷ್ಟಿಯನ್ನು ನಿರ್ಮಿಸಲು ಶಕ್ತವಾಗಿದೆ; ಮತ್ತು ಅದರ ಸಾಮೂಹಿಕ ಜಪ, ಉಚ್ಚಾರಣೆ, ಪ್ರಧಾನ-ಪ್ರಯೋಗ ಒಂದು ಯುಗಸಂಧಿಕಾಲದ ಮಹಾಪುರಶ್ಚರಣದ ರೂಪದಲ್ಲಿ ಇದೇ ಯುಗದಲ್ಲಿ ಸಾಧ್ಯವಾಗಿ ಬಿಟ್ಟಿದೆ. ಗಾಯತ್ರೀ ಪರಿವಾರದಿಂದ ಆಯೋಜಿಸಲ್ಪಟ್ಟ ಈ ಮಹಾ ಪುರುಷಾರ್ಥದ ಪೂರ್ಣಾಹುತಿ 2000-2001ನೇ ಇಸವಿಯಲ್ಲಿ ಮುಕ್ತಾಯಗೊಂಡಿದೆ.

ಪೌರಾಣಿಕ ಕಥಾ ಪ್ರಸಂಗದಲ್ಲಿ ಒಂದು ಚರ್ಚೆ ಬರುತ್ತದೆ. ಅದರಂತೆ- ಸೃಷ್ಟಿಯ ಪ್ರಾರಂಭದಲ್ಲಿ ಎಲ್ಲೆಲ್ಲೂ ನೀರೇ ತುಂಬಿತ್ತು. ಅದರ ಮಧ್ಯದಲ್ಲೇ ವಿಷ್ಣು ಪರಮಾತ್ಮ ಒರಗಿಕೊಂಡಿದ್ದರು. ವಿಷ್ಣುವಿನ ಹೊಕ್ಕಳಿನಲ್ಲಿ ಕಮಲ ಹುಟ್ಟಿತು. ಕಮಲ ಪುಷ್ಪದ ಮೇಲೆ ಬ್ರಹ್ಮದೇವರು ಅವತರಿಸಿದರು. ಅವರು ಒಬ್ಬಂಟಿಯಾಗಿದ್ದರು; ಆದ್ದರಿಂದ ಈ ಅಸಮಂಜಸತೆಯಿಂದಾಗಿ ಒತ್ತಾಯಿಸತೊಡಗಿದರು. ನನ್ನನ್ನು ಸೃಷ್ಟಿ ಮಾಡಿದ್ದಾದರೂ ಏಕೆ? ನಾನು ಮಾಡಬೇಕಾದ್ದು ಏನು? ಏನು ಮಾಡಬೇಕೆಂದಿದ್ದರೂ ನನ್ನಲ್ಲಿ ಇರಬೇಕಾದ ಸಲಕರಣೆ, ಉಪಕರಣಗಳಾದರೂ ಯಾವುದು? ಅವುಗಳನ್ನು ಪಡೆಯಬೇಕಾದರೂ ಎಲ್ಲಿಂದ? ಈ ಜಿಜ್ಞಾಸೆಗಳಿಗೆ ಉತ್ತರ ಬಂದದ್ದು ಆಕಾಶವಾಣಿಯಿಂದ- ಗಾಯತ್ರೀಯನ್ನು ಮಾಧ್ಯಮವಾಗಿರಿಸಿಕೊಂಡು ತಪಸ್ಸು ಮಾಡು. ಅಗತ್ಯವಾದ ಮಾರ್ಗದರ್ಶನ ನಿನ್ನೊಳಗಿನಿಂದಲೇ ಅರಳಿಕೊಳ್ಳುತ್ತದೆ.’ ಬ್ರಹ್ಮದೇವರು ಆ ಮಾತನ್ನೇ ಶಿರಸಾ ವಹಿಸಿದರು. ಮತ್ತು ಆಕಾಶವಾಣಿ ತಿಳಿಸಿದ ಗಾಯತ್ರೀ ಮಂತ್ರವನ್ನು ತಪಸ್ಸಿನೊಂದಿಗೆ ಸಾಧನೆ ಮಾಡತೊಡಗಿದರು.

ಪೂರ್ಣತೆಯ ಸ್ಥಿತಿ ಲಭಿಸಿತು; ಗಾಯತ್ರೀ ಎರಡು ವಿಭಾಗಗಳಲ್ಲಿ, ದರ್ಶನವನ್ನು ಕೊಡಲು ಮತ್ತು- ವರದಾನ ಮಾರ್ಗದರ್ಶನಗಳಿಂದ ಇಚ್ಛೆಯನ್ನು ಪೂರ್ತಿಗೊಳಿಸಲು, ಇಳಿದು ಬಂದಳು. ಅದರಲ್ಲಿ ಮೊದಲ ಭಾಗವನ್ನು ಗಾಯತ್ರೀ ಎಂದೂ ಎರಡನೇ ಭಾಗವನ್ನು ಸಾವಿತ್ರೀ ಎಂದೂ ನಾಮಕರಣ ಮಾಡಲಾಯಿತು. ಗಾಯತ್ರೀ- ಅಂದರೆ ತತ್ವಜ್ಞಾನಕ್ಕೆ ಸಂಬಂಧಿಸಿದ ಪಕ್ಷ. ಸಾವಿತ್ರೀ – ಅಂದರೆ ಭೌತಿಕ ಅಗತ್ಯಗಳನ್ನು ಪೂರ್ಣಗೊಳಿಸಲು ಬಂದ ಅದೇ ಮಾತೆಯ ಪ್ರಕಟ ರೂಪ. ಜಡ, ಸೃಷ್ಟಿ, ಪದಾರ್ಥ ಸಂರಚನೆಗಳನ್ನು ಸಾವಿತ್ರೀ ಶಕ್ತಿಯ  ಮಾಧ್ಯಮದಿಂದ; ಹಾಗೂ ವಿಚಾರಣೆಗೆ ಸಂಬಂಧಿಸಿದ ಭಾವ- ಸಂವೇದನೆ, ಶ್ರದ್ಧೆ, ಆಕಾಂಕ್ಷೆ, ಕ್ರಿಯಾಶೀಲತೆಗಳಂತಹ ವಿಭೂತಿಗಳ ಉದ್ಭವಗಳನ್ನು ಗಾಯತ್ರೀ ಶಕ್ತಿಯ ಮಾಧ್ಯಮದಿಂದ ಪ್ರಕಟಗೊಂಡವು. ಈ ಜಗತ್ತು, ಜಡ ಮತ್ತು ಚೈತನ್ಯಗಳ, ಪ್ರಕೃತಿ ಮತ್ತು ಪರಬ್ರಹ್ಮಗಳ ಸಂಯೋಗದಿಂದಲೇ ಕಣ್ಣಿಗೆ ಕಾಣಿಸುತ್ತದೆ ಮತ್ತು ಕ್ರಿಯಾಶೀಲವಾಗಿರುತ್ತದೆ.
ಈ ಕಥನದ ಸಾರತತ್ವವೆಂದರೆ ಗಾಯತ್ರೀ ದರ್ಶನದಲ್ಲಿ ಸಾಮೂಹಿಕ, ಸದ್ಬುದ್ಧಿಗೆ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಇದನ್ನೇ ಹೇಗಾದರೂ ಮಾಡಿ ತನ್ನದಾಗಿಸಿಕೊಂಡು ಮನುಷ್ಯ ಬುದ್ಧಿವಂತನಾಗುತ್ತಾನೆ, ಪ್ರಾಣವಂತನಾಗುತ್ತಾನೆ. ಭೌತಿಕ ಪದಾರ್ಥಗಳನ್ನು ಪರಿಷ್ಕøತಗೊಳಿಸುವುದು ಹಾಗೂ, ಅದರ ಸದುಪಯೋಗವನ್ನು ಮಾಡಬಲ್ಲ ಭೌತಿಕ ವಿಜ್ಞಾನ, ಸಾವಿತ್ರೀ ವಿದ್ಯೆಯ ಪಕ್ಷದಲ್ಲಿದೆ. ಎರಡನ್ನು ಸೇರಿಸಿದಾಗಲೇ ಸಮಸ್ತ ಬೆಳವಣಿಗೆ ಸಾಧ್ಯವಾಗುತ್ತದೆ. ಪೂರ್ಣ ಅನ್ನಿಸುವುದು ಎರಡೂ ಕಾಲುಗಳಿದ್ದಾಗ, ಎರಡು ಕೈಗಳಿದ್ದಾಗ ಮಾತ್ರ. ಅಂತೆಯೇ ಎರಡು ಪುಪ್ಪಸಗಳು, ಎರಡು ಮೂತ್ರ ಪಿಂಡಗಳು ಅವಶ್ಯ. ಒಂದು ಗಾಡಿ ಎರಡು ಚಕ್ರಗಳ ಆಧಾರದಲ್ಲಿ ಚಲಿಸುತ್ತದೆ. ಅದೇ ರೀತಿಯಲ್ಲಿ ಗಾಯತ್ರೀ ಮಹಾಶಕ್ತಿಯ ಸಮಗ್ರ ಉಪಯೋಗವನ್ನು ಪಡೆಯಬೇಕೆಂದಿದ್ದರೆ, ಅದರ ಎರಡೂ ವಿಭಾಗಗಳನ್ನು ತಿಳಿದುಕೊಳ್ಳುವುದು ಮತ್ತು ತನ್ನದಾಗಿಸುವುದು, ಅತ್ಯಗತ್ಯ.
ಒಂದು ತತ್ವಜ್ಞಾನ ಮಾನ್ಯತೆಗಳ ಮತ್ತು ಭಾವನೆಗಳ ಮೇಲೆ ತನ್ನ ವರ್ಚಸ್ಸನ್ನು ಬೀರುತ್ತದೆ. ಇವುಗಳ ಸ್ಥೂಲರೂಪ ಚಿಂತನೆ, ಚಾರಿತ್ರ್ಯ ಮತ್ತು ವ್ಯವಹಾರಗಳಾಗಿವೆ. ಗಾಯತ್ರೀಯ ತತ್ವಜ್ಞಾನ ಈ ಮಟ್ಟದ ಉತ್ಕøಷ್ಟತೆಗಳನ್ನು ತನ್ನದಾಗಿಸಿಕೊಳ್ಳಬೇಕಿದ್ದರೆ ಶ್ರೇಷ್ಠ ವಿಚಾರಗಳೇ ತುಂಬಿರುವ ನಂಬಿಕೆಗಳನ್ನು ಸ್ವೀಕರಿಸಲು ಪ್ರೇರೇಪಿಸುತ್ತದೆ. ಉತ್ಕøಷ್ಟತೆ, ಆದರ್ಶವಾದಿತ್ವ, ಮರ್ಯಾದೆ, ಕರ್ತವ್ಯನಿಷ್ಠೆ- ಗಳಂತಹ ಮಾನವನ ಘನತೆಗಳನ್ನು ಸಮಗ್ರವಾಗಿ ಹಿಡಿದಿಡುವ ಶ್ರದ್ಧೆಗಳನ್ನೇ ಗಾಯತ್ರೀಯ  ತತ್ವಜ್ಞಾನ ಎನ್ನಬಹುದಾಗಿದೆ.

 ಯಜ್ಞ
ಭಾರತೀಯ ಸಂಸ್ಕತಿಯನ್ನು ದೇವಸಂಸ್ಕತಿಯೆಂದು ಕರೆಯಲಾಗುತ್ತದೆ.‘ಸಾ ಪ್ರಥಮಾ ಸಂಸ್ಕ್ರುತಿವಿಶ್ವವಾರಾ’ ಭಾರತೀಯ ಸಂಸ್ಕತಿಯನ್ನು ವಿಶ್ವದ ಪ್ರಥಮ ಹಾಗೂ ಸರ್ವಶ್ರೇಷ್ಠ ಸಂಸ್ಕೃತಿಯೆಂದು ಹೇಳಲಾಗಿದೆ.ಭಾರತೀಯ ಸಂಸ್ಕøತಿಯ  ತಾಯಿ ಗಾಯತ್ರೀ  ಮತ್ತು ತಂದೆ ಯಜ್ಞವಾಗಿದೆ – ದೇವ ಸಂಸ್ಕೃತಿಯನಿರ್ಮಾತೃ ಯಜ್ಞಪಿತಾ -ಗಾಯತ್ರೀ ಮಾತೆ. ನಮ್ಮ ಋಷಿಗಳು, ಪಂಡಿತರು ದೈನಿಕ ಸಂಧ್ಯೆಯಲ್ಲಿಗಾಯತ್ರಿಯನ್ನು ಮತ್ತು ನಿತ್ಯ  ಕರ್ಮದಲ್ಲಿ ಯಜ್ಞವನ್ನು ಸಮಾವೇಶಗೊಳಿಸಿದರು. ಗೀತೆಯಲ್ಲಿ ಹೀಗೆಹೇಳಲಾಗಿದೆ- ಸಹಾಯಕ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ. ಅನೇನ ಪ್ರಸವಿಷ್ಯಧ್ವಂಏಷ$ವೋಸ್ತ್ವಿಷ್ಟಕಾಮಧುಕ್ ||( ಗೀತಾ 6-10) ಬ್ರಹ್ಮನು ಮನುಷ್ಯನೊಂದಿಗೆ ಅವಳಿ ಸಹೋದರನಂತೆ ಯಜ್ಞವನ್ನು ಪ್ರಕಟಪಡಿಸಿದನು. ನೀವು ಈ ಯಜ್ಞದ ಮೂಲಕ ವೃದ್ಧಿಯನ್ನು ಹೊಂದಿರಿ. ಈ ಯಜ್ಞವುನಿಮ್ಮ ಅಭೀಷ್ಠಗಳನ್ನು ಪೂರ್ಣಗೊಳಿಸುವುದೆಂದು ಹೇಳಿದನು.ಪರಮ ಪೂಜ್ಯ ಗುರುದೇವ ಪಂ. ಶ್ರೀರಾಮ ಶರ್ಮಾ ಆಚಾರ್ಯರು ಯುಗನಿರ್ಮಾಣ ಯೋಜನೆಯಆಂದೋಳನವನ್ನು ಸಂಘಟಿಸಿ ಮನುಷ್ಯರಲ್ಲಿ ದೇವತ್ವದ ಉದಯ ಹಾಗೂ ಭೂಮಿಯಮೇಲೆ ಸ್ವರ್ಗದ ಅವತರಣದ ಸಂಕಲ್ಪವನ್ನು  ತೊಟ್ಟಿದ್ದಾರೆ. ಈ ಯೋಜನೆಯಡಿಯಲ್ಲಿ ಹಳ್ಳಿ-ಹಳ್ಳಿಗಳಲ್ಲೂ ಯಜ್ಞಕಾರ್ಯ ಹಾಗೂ ಮನೆ-ಮನೆಗಳಲ್ಲಿಯೂ ಗಾಯತ್ರೀ ಉಪಾಸನೆಯ  ಜನಾಂದೋಳನವುನಡೆದಿದೆ. ಈ ಉದ್ದೇಶದ ಪೂರ್ತಿಗಾಗಿ ದೇಶದಾದ್ಯಂತ 4,500 ಕ್ಕೂ ಅಧಿಕ ಶಕ್ತಿಪೀಠಗಳು ಕಾರ್ಯನಿರತವಾಗಿವೆ.ಶಕ್ತಿಪೀಠಗಳ ಸ್ಥಾಪನೆಯ ರಜತ ವರ್ಷದ ನಿಮಿತ್ತ ಸಂಪೂರ್ಣ ದೇಶದಲ್ಲಿ ಗಾಯತ್ರೀ ಯಜ್ಞ ಸರಣಿಹಮ್ಮಿಕೊಳ್ಳಲಾಗಿದ್ದು ಸ್ಥಳೀಯ ಶಕ್ತಿ ಸಾಮಥ್ರ್ಯಗಳಿಗೆ ತಕ್ಕಂತೆ ಈ ಪರಮ ಪವಿತ್ರ ಕಾರ್ಯದಲ್ಲಿತಾವೆಲ್ಲರೂ ಪಾಲ್ಗೊಳ್ಳ ಬೇಕಾಗಿದೆ.ಒಂದು ಕುಂಡದ ಗಾಯತ್ರೀ ಯಜ್ಞಕ್ಕೆ ಬೇಕಾಗುವ ಆವಶ್ಯಕ ವಸ್ತುಗಳುಮಾರುಕಟ್ಟೆಯಲ್ಲಿ ಕೊಳ್ಳಬೇಕಾಗುವ ಸಾಮಗ್ರಿಗಳು.1.ಹವನ ಸಾಮಗ್ರಿ- 1.ಕೆ.ಜಿ. -2.ತುಪ್ಪ- ಅರ್ಧ ಕೆ.ಜಿ.3.ಹೂವು -ಅರ್ಧ ಕೆ.ಜಿ.4.ಸಮಿಧೆ (ಕಟ್ಟಿಗೆ)- 5 ಕೆ.ಜಿ.5.ಕುಂಕುಮ- 10 ಗ್ರಾಂ6. ರಕ್ಷಾಸೂತ್ರ-10 ಗ್ರಾಂ7.ಇಡೀ ಅಡಿಕೆ-10. 8.ಅಗರಬತ್ತಿ-1ಪ್ಯಾಕ್ 9. ಬೆಂಕಿಪೆಟ್ಟಿಗೆ- 1 10. ಹತ್ತಿ ಬತ್ತಿ-5ಜೊತೆ 11.ಯಜ್ಞೋಪವೀತ (ಜನಿವಾರ)-1ಜೊತೆ 12.ಹಳದಿ ಬಟ್ಟೆ- 1.ಮೀಟರ್. 13.ತೆಂಗಿನಕಾಯಿ -1 14.ಪ್ರಸಾದ(ಹಣ್ಣು, ಸಿಹಿ)-ಆವಶ್ಯಕಪ್ರಮಾಣದಲ್ಲಿ 15. ಕೊಬ್ಬರಿ ಗಿಟುಕು- 1 16.ಅಕ್ಷತೆ-200ಗ್ರಾಂ 17. ಕರ್ಪೂರ-10 ಗ್ರಾಂ 18.ವೀಳಿದೆಲೆ -10. 19.ದಕ್ಷಿಣೆಗಾಗಿ ಬಿಡಿ ನಾಣ್ಯಗಳು. 20.ತಟ್ಟೆ -1 21.ಚಿಕ್ಕತಟ್ಟೆ -2 22.ಚಿಕ್ಕ ಬಟ್ಟಲು-2 23.ದೊಡ್ಡ ಬಟ್ಟಲು- 6 24. ಚಮಚ-5 25.ಲೋಟ- 5 26. ಚಿಕ್ಕ ಚಾಪೆಗಳು -8 27. ಬೀಸಣಿಗೆ-1 28.ಹವನ ಕುಂಡಕ್ಕೆ ಇಟ್ಟಿಗೆಗಳು-*** ಕಾಷ್ಠಪಾತ್ರೆ, ಪಂಚಪಾತ್ರೆ, ದೇವಸ್ಥಾಪನಾ ಸೆಟ್, ಮೇಲುಹೊದಿಕೆ ಹಾಗೂ ಸಾಹಿತ್ಯಗಳನ್ನು ಶಾಂತಿಕುಂಜದ ಕಾರ್ಯಕರ್ತರು ತರುವರು.
ಯಜ್ಞದ ಆಯೋಜನೆಯ ಹಿಂದೆ ಜಗತ್ತಿನ ಲೌಕಿಕ ಸುಖ-ಸಮೃದ್ಧಿಗಳನ್ನು ಹೆಚ್ಚಿಸುವ ವಿನಸಮ್ಮತ ಪರಂಪರೆಯಿದೆ. ಇದರಲ್ಲಿ ದೇವಶಕ್ತಿಯ ಆವಾಹನೆ ಮತ್ತು ಪೂಜೆಗಳ ಮಂಗಲಮಯಕ್ರಿಯೆಗಳಿವೆ. ಯಜ್ಞದಿಂದ ಲೋಕಶಕ್ತಿಯ ಸಾಮಗ್ರಿಗಳು ದೊಡ್ಡ ಪ್ರಮಾಣದಲ್ಲಿ ಒಟ್ಟಾಗುತ್ತವೆ. ಮಣಿಕಟ್ಟಿನಬಣ್ಣ ಬಣ್ಣದ ಮಣಿಗಳನ್ನು ತೋರಿಸಿ ಚಿಕ್ಕ ಮಕ್ಕಳಿಗೆ ಎಣಿಕೆ ಕಲಿಸುವಂತೆ ನಮ್ಮ ಜೀವನ ಯಜ್ಞದಿಂದಹೇಗೆ ಪರಿಪೂರ್ಣವಾಗಬೇಕೆಂಬುದನ್ನು ಯಜ್ಞದ ದೃಶ್ಯದ ಮೂಲಕ ಜನರಿಗೆ ತಿಳಿಸಲಾಗುತ್ತದೆ. ನಾವುಯಜ್ಞ ಕಾರ್ಯದಲ್ಲಿ ತೊಡಗಿ ಪರಮಾರ್ಥ ಪಾರಾಯಣರಾಗಬೇಕು. ನಮ್ಮ ಜೀವನವನ್ನು ಯಜ್ಞಪರಂಪರೆಗೆ ಅರ್ಪಿಸಬೇಕು. ನಮ್ಮ ಜೀವನವು ಯಜ್ಞದಂತೆ ಪವಿತ್ರವೂ, ತೀಕ್ಷ್ಣವೂ, ಬೆಳಕಿನದ್ದೂಆಗಬೇಕು. ಗಂಗಾ ಸ್ನಾನದಿಂದ ಪವಿತ್ರತೆ, ಶಾಂತಿ, ಶೀತಲತೆ, ಆದ್ರತೆಗಳನ್ನು ಹೊಂದುವಂತೆ ಯಜ್ಞದಿಂದತೇಜಸ್ಸು, ಪ್ರಖರತೆ, ಪರಮಾರ್ಥ ಪಾರಾಯಣತೆ, ಹಾಗೂ ಉತ್ಕೃಷ್ಟತೆಗಳು ಪ್ರಾಪ್ತವಾಗುತ್ತವೆ. ಯಜ್ಞದಪ್ರಕ್ರಿಯೆಯನ್ನು  ಜೀವನ ಯಜ್ಞದ ಒಂದು ಪೂರ್ವ ಪ್ರದರ್ಶನವೆಂದೂ ಕರೆಯಬಹುದು. ನಮ್ಮಲ್ಲಿನತುಪ್ಪ, ಸಕ್ಕರೆ, ಒಣಹಣ್ಣುಗಳು, ಔಷಧಗಳು üಮೊದಲಾದ ಬಹುಮೂಲ್ಯ ವಸ್ತುಗಳನ್ನು ನಾವು ಪರಮಾರ್ಥಪ್ರಯೋಜನಕ್ಕಾಗಿ ಹೋಮ ಮಾಡುವಂತೆ ನಮ್ಮ ಪ್ರತಿಭೆ, ವಿದ್ಯೆ,ಸಂಪತ್ತು, ಸಾಮಥ್ರ್ಯ ಮುಂತಾದವುಗಳನ್ನುಕೂಡ ವಿಶ್ವ ಮಾನವನ ಚರಣಗಳಡಿಯಲ್ಲಿ ಸಮರ್ಪಣೆ ಮಾಡಬೇಕಾಗಿದೆ. ಈ ನೀತಿಯನ್ನು ಅನುಸರಿಸುವವ್ಯಕ್ತಿ ಸಮಾಜಕ್ಕಷ್ಟೇ ಅಲ್ಲ ಸ್ವಯಂ ಕಲ್ಯಾಣಕ್ಕೂ ಪಾತ್ರನಾಗುತ್ತಾನೆ. ಜಗತ್ತಿನೆಲ್ಲಾ ಮಹಾಪುರುಷರೂ,ದೇವಮಾನವರೂ ಇದೇ ನೀತಿ ಅನುಸರಿಸಿದ್ದಾರೆ. ಉದಾರತೆ, ತ್ಯಾಗ, ಸೇವೆ, ಮತ್ತು ಪರೋಪಕಾರಕ್ಕಾಗಿಹೆಜ್ಜೆ ಮುಂದಿಟ್ಟವರೇ ಜೀವನದಲ್ಲಿ ಶ್ರೇಯ ಹಾಗೂ ಆನಂದಗಳಿಗೆ ಪಾತ್ರರಾಗಿದ್ದಾರೆ.ಯಜ್ಞದ ಪ್ರೇರಣೆಯ ಮಹತ್ವ ತಿಳಿಸುತ್ತಾ ಋಗ್ವೇದದಲ್ಲಿ ಅಗ್ನಿಯನ್ನು ಪುರೋಹಿತನೆಂದುಕರೆಯಲಾಗಿದೆ. ಅದರ ಶಿಕ್ಷಣದಂತೆ ನಡೆದರೆ ಇಹಲೋಕ ಪರಲೋಕಗಳೆರಡೂ ಸುಧಾರಿಸುತ್ತದೆ.ಯಜ್ಞದ  ಶಿಕ್ಷಣವು ಈ ಕೆಳಕಂಡಂತಿದೆ.

1.ಅತ್ಯಮೂಲ್ಯವಾದ ಅದೆಷ್ಟೇ ಪದಾರ್ಥಗಳನ್ನು ಅಗ್ನಿಗೆ ಅರ್ಪಿಸಿದರೂ ಅಗ್ನಿಯು ಅದನ್ನುತನ್ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಬದಲಿಗೆ ಅವೆಲ್ಲವನ್ನೂ ಸರ್ವಸಾಧಾರಣರ ಬಳಕೆಗಾಗಿವಾಯುಮಂಡಲಕ್ಕೆ ವಿತರಿಸುತ್ತದೆ. ಯಜ್ಞ ಪುರುಷನು ತನ್ನ ಕೃತಿಯಿಂದ ತೋರಿಸಿದಂತೆ ನಾವು ಸಹಈಶ್ವರ ಪ್ರದತ್ತ ಸಂಪತ್ತುಗಳನ್ನು ವಿಶ್ವ ಕಲ್ಯಾಣಕ್ಕಾಗಿ ಉಪಯೋಗಿಸಬೇಕು.

2. ಅಗ್ನಿಯು ತನ್ನ ಸಂಪರ್ಕಕ್ಕೆ ಬರುವ ಯಾವುದೇ ವಸ್ತುಗಳನ್ನು ಅವಮಾನಪಡಿಸುವುದಿಲ್ಲ.ಅದನ್ನು ಪೂರ್ಣವಾಗಿ ಸ್ವೀಕರಿಸಿ  ತನ್ನಂತೆ ಮಾಡಿಕೊಳ್ಳುತ್ತದೆ. ನಾವೂ ಸಹ ನಮ್ಮ ಸಂಪರ್ಕಕ್ಕೆಬರುವ ದೀನರೂ, ಹೀನರೂ, ತಿರಸ್ಕøತರೂ ಆದ ವ್ಯಕ್ತಿಗಳನ್ನು ನಮ್ಮೊಂದಿಗೆ ಸೇರಿಸಿಕೊಳ್ಳಬೇಕು.ನಮ್ಮಂತೆ ಅವರಲ್ಲಿಯೂ ಆದರ್ಶಗಳನ್ನು ಬೆಳೆಸಬೇಕು.

3.ಎಷ್ಟೇ ಒತ್ತಡಬಿದ್ದರೂ ಅಗ್ನಿಯು ಎಂದಿಗೂ ಕೆಳಮುಖವಾಗಿ ಉರಿಯುವುದಿಲ್ಲ. ಸದಾಮೇಲ್ಮುಖವಾಗಿಯೇ ಉರಿಯುತ್ತದೆ. ನಮಗೂ ಅದೆಷ್ಟೇ ಪ್ರಲೋಭನೆಗಳು, ಭಯಗಳು ಎದುರಾದರೂನಾವು ನಮ್ಮ ವಿಚಾರ ಮತ್ತು ನಡವಳಿಕೆಗಳು ಅಧೋಗತಿಗೆ ಹೋಗಲು ಬಿಡಬಾರದು. ವಿಷಮಪರಿಸ್ಥಿತಿಯಲ್ಲಿಯೂ ನಮ್ಮ ಸಂಕಲ್ಪ ಹಾಗೂ ಮನೋಬಲಗಳು ಅಗ್ನಿಶಿಖೆಯಂತೆ ಮೇಲ್ಮಖವಾಗಿಯೇಇರಬೇಕು.

4.ಅಗ್ನಿಯು ತಾನಿರುವವರೆಗೂ ಶಾಖ ಹಾಗು ಬೆಳಗುವ ತನ್ನ ಗುಣ ಬಿಡುವುದಿಲ್ಲ. ಅದೇರೀತಿಯಲ್ಲಿ ನಾವೂ ನಮ್ಮ ಕ್ರಿಯಾಶೀಲತೆಯ ಶಾಖ ಹಾಗೂ ಧರ್ಮಪಾರಾಯಣತೆಯ ಬೆಳಕು ಆರಿಹೋಗಲುಬಿಡಬಾರದು. ಬದುಕಿಡೀ ಪುರುಷಾರ್ಥಿಗಳಾಗಿ ಕರ್ತವ್ಯನಿಷ್ಠರಾಗಿ ಬಾಳಬೇಕು.

5.ಅಗ್ನಿಯ ಅವಶೇಷವಾದ ಭಸ್ಮವನ್ನು ಹಣೆಯ ಮೇಲೆ ಧರಿಸುತ್ತಾ ನಾವು ಕಲಿಯಬೇಕಾದುದುಏನೆಂದರೆ ಮಾನವನ ಜೀವನದ ಅಂತ್ಯವು ಮುಷ್ಠಿ ಪ್ರಮಾಣದ ಭಸ್ಮದ ರೂಪದಲ್ಲಿ ಉಳಿಯುತ್ತದೆ.ಆದ್ದರಿಂದ ನಮ್ಮ ಕೊನೆಯನ್ನು ಗಮನದಲ್ಲಿಟ್ಟುಕೊಂಡು ಜೀವನವನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಬೇಕು.

6. ತನ್ನಲ್ಲಿನ ಸ್ವಲ್ಪವೇ ವಸ್ತುವನ್ನು ವಾಯುವಿನ ರೂಪದಲ್ಲಿ ಪರಿವರ್ತಿಸಿ, ಜನರನ್ನು ಧಾರ್ಮಿಕವಾಗಿತನ್ನವರು, ಬೇರೆಯವರು, ಮಿತ್ರರು, ಶತ್ರುಗಳೆಂದು ಭೇದವೆಣಿಸದೆ ಎಲ್ಲಾ ಜಡ-ಚೇತನಾ ಪ್ರಾಣಿಗಳಿಗುಅವುಗಳ ಉಸಿರಾಟದ ಮೂಲಕ ಗುಪ್ತದಾನ ಪಡೆಯುವಂತೆ ಮಾಡುತ್ತದೆ. ಅವುಗಳಿಗಾದರೋ ಯಾವದಾನಿಯಿಂದ ತಮಗೆ ಇಷ್ಟು ಪೌಷ್ಠಿಕವಾದ ಆಹಾರ ದೊರೆಯಿತೆಂಬುದು ಗೊತ್ತಿರುವುದಿಲ್ಲ. ನಿಜಕ್ಕೂಶ್ರೇಷ್ಠ ಬ್ರಾಹ್ಮಣ ಭೋಜನದ ಪುಣ್ಯವು ಬೇಕೆಂದಿದ್ದರೆ ಯಜ್ಞವು ಒಂದು ಅತ್ಯುತ್ತಮ ಉಪಾಯವಾಗಿದೆ.ಯಜ್ಞವು ನಾಗರೀಕತೆಯ ಪ್ರತೀಕವಾಗಿದೆ.

ಅನ್ಯ ಉಪಾಸನಾ ವಿಧಿಗಳು ಅಥವಾ ಧಾರ್ಮಿಕಕ್ರಿಯಾ ಕಲಾಪಗಳು ಹೇಗಿವೆಯೆಂದರೆ ಅವುಗಳನ್ನು ಒಬ್ಬನೇ ವ್ಯಕ್ತಿಯು ಮಾಡಬಹುದಾಗಿದೆ. ಆದರೆಯಜ್ಞಕಾರ್ಯಕ್ಕಾದರೋ ಹೆಚ್ಚಿನಜನರ ಸಹಕಾರದ ಅವಶ್ಯಕತೆ ಇದ್ದೇ ಇದೆ. ಹೋಳೀ ಮುಂತಾದ ದೊಡ್ಡಯಜ್ಞಗಳಂತೂ ಸದಾ ಸಾಮೂಹಿಕ ರೂಪದಲ್ಲೇ ಆಗುತ್ತದೆ. ಯಜ್ಞದ ಆಯೋಜನೆಯಿಂದ ಸಾಮೂಹಿಕತೆ,ಸಹಕಾರ ಮತ್ತು ಐಕ್ಯತೆಯ ಭಾವನೆಗಳು ವಿಕಾಸಗೊಳ್ಳುತ್ತವೆ.ಪ್ರತಿಯೊಂದು ಶುಭ ಕಾರ್ಯದಲ್ಲಿ ಹಬ್ಬ- ಹರಿದಿನಗಳಲ್ಲಿ ಸಂಸ್ಕಾರ ಕ್ರಿಯೆಯು ಯಜ್ಞದೊಂದಿಗೆಸಂಪನ್ನಗೊಳ್ಳುತ್ತದೆ. ಯಜ್ಞವು ಭಾರತೀಯ ಸಂಸ್ಕøತಿಯ ತಂದೆಯಾಗಿದೆ. ಯಜ್ಞವು ಭಾರತದ ಸರ್ವಮಾನ್ಯಹಾಗೂ ಪ್ರಾಚೀನ ವೈದಿಕ ಉಪಾಸನೆಯಾಗಿದೆ. ಭಾವನಾತ್ಮಕ ಐಕ್ಯತೆ ಮತ್ತು ಧಾರ್ಮಿಕ ಐಕ್ಯತೆಗಳನ್ನುತರಲಿಕ್ಕಾಗಿ ಯಜ್ಞವನ್ನು ಸರ್ವಮಾನ್ಯ ಸಾಧನವಾಗಿ ಆಶ್ರಯಿಸುವುದು ಎಲ್ಲಾ ದೃಷ್ಠಿಯಿಂದಲೂ ಸೂಕ್ತವಾಗಿದೆ.ಗಾಯತ್ರಿಯು ಸದ್ಬುದ್ಧಿಯ ದೇವೀ ಹಾಗೂ ಯಜ್ಞವು ಸತ್ಕರ್ಮದ ತಂದೆಯಾಗಿದ್ದಾರೆ. ಸದ್ಭಾವನೆ ಹಾಗೂಸತ್ ಪ್ರವೃತ್ತಿಗಳನ್ನು ಬೆಳೆಸುವಲ್ಲಿ ತಾಯಿ ಸ್ವರೂಪಳಾದ ಗಾಯತ್ರೀ ಹಾಗೂ ತಂದೆ ಸ್ವರೂಪರಾದಯಜ್ಞದ ಜೋಡಿಯು ಎಲ್ಲಾ ದೃಷ್ಠಿಯಿಂದಲೂ ಸಫಲ ಹಾಗೂ ಸಮರ್ಥರೆಂದು ಸಿದ್ಧವಾಗಿದೆ. ಗಾಯತ್ರೀಯಜ್ಞದ ವಿಧಿವಿಧಾನಗಳು ತುಂಬಾ ಸರಳ, ಲೋಕಪ್ರಿಯ ಹಾಗೂ ಆಕರ್ಷಕವಾಗಿದೆ. ಜಗತ್ತಿನ ದುರ್ಬುದ್ಧಿಗ್ರಸ್ತ ಜನಮಾನಸವನ್ನು ಶುದ್ಧಿ ಮಾಡುವಲ್ಲಿ ಸದ್ಬುದ್ಧಿಯ ದೇವಿಯಾದ ಗಾಯತ್ರೀ ಮಹಾಮಂತ್ರದ ಶಕ್ತಿಹಾಗೂ ಸಾಮಥ್ರ್ಯವು ಅದ್ಭುತವೂ ಅದ್ವಿತೀಯವೂ ಆಗಿದೆ.ಜನರನ್ನು ಧಾರ್ಮಿಕವಾಗಿ ಸಂಘಟಿಸಲು ನಗರ- ಹಳ್ಳಿಗಳೆಲ್ಲೆಡೆ ಗಾಯತ್ರೀ ಯಜ್ಞದ ಆಯೋಜನೆಮಾಡಬೇಕಾಗಿದೆ. ಇದನ್ನು ತಪ್ಪು ಕ್ರಮದಲ್ಲಿ ಮಾಡಿದ್ದೇ ಆದರೆ ಅದಕ್ಕಾಗಿ ಭಾರೀ ಬೆಲೆ ತೆರಬೇಕಾಗುತ್ತದೆ.ಶಕ್ತಿಯ ಅಪವ್ಯಯವೂ ಆಗುತ್ತದೆ. ಅದೇ ವೇಳೆ ವಿವೇಕದಿಂದ, ಬುದ್ಧಿಪೂರ್ವಕವಾಗಿ ಮಾಡಿದಲ್ಲಿಯಜ್ಞವನ್ನು ಕಡಿಮೆ ಖರ್ಚಿನಲ್ಲಿ ಹೆಚ್ಚು ಆಕರ್ಷಕವಾಗಿ ಮಾಡಬಹುದಾಗಿದೆ. ಹೆಚ್ಚಿನ ಲಾಭವನ್ನೂಪಡೆಯಬಹುದಾಗಿದೆ.ನಮ್ಮೆಲ್ಲಾ ಕರ್ಮಕಾಂಡಗಳಲ್ಲಿ, ಧರ್ಮಾನುಷ್ಠಾನಗಳಲ್ಲಿ, ಸಂಸ್ಕಾರಗಳಲ್ಲಿ, ಹಬ್ಬಗಳಲ್ಲಿ ಯಜ್ಞದಯೋಜನೆಯು ಮುಖ್ಯವಾದದ್ದಾಗಿದೆ. ಅವುಗಳ ವಿಧಿ ವಿಧಾನಗಳನ್ನು ತಿಳಿದುಕೊಳ್ಳುವುದರಿಂದ ಮತ್ತುಅವುಗಳ ಪ್ರಯೋಜನವನ್ನು ತಿಳಿದುಕೊಳ್ಳುವುದರಿಂದ ಆ ಎಲ್ಲಾ ಧರ್ಮಾಚರಣೆಗಳು ಹೆಚ್ಚು ಅರ್ಥಪೂರ್ಣವಾಗಿಫಲಕಾರಿಯಾಗುತ್ತವೆ.ಲೋಕ ಮಂಗಲಕ್ಕಾಗಿ, ಜನಜಾಗೃತಿಗಾಗಿ, ವಾತಾವರಣದ ಶುದ್ಧೀಕರಣಕ್ಕಾಗಿ ಯುಜ್ಞವನ್ನುಮಾಡಬಹುದಾಗಿದೆ. ಸಂಸ್ಕಾರಗಳಲ್ಲಿ ಮತ್ತಿತರ ಉತ್ಸವಗಳಲ್ಲಿಯೂ ಇದಕ್ಕೆ ಪ್ರಾಧಾನ್ಯತೆಯಿದೆ.ಪ್ರತಿಯೊಬ್ಬ ಭಾರತೀಯ  ಧರ್ಮಾನುಯಾಯಿಗೂ ಯಜ್ಞ ಕ್ರಿಯೆಯ ಪರಿಚಯದ ಅಗತ್ಯವಿದೆ.ಯಜ್ಞದ ಮಹಾತ್ಮೆಪ್ರಾಂಜಂ ಯಜ್ಞಂ ಪ್ರಣಯತಾ ಸಖಾಯಃ | -ಋಗ್ವೇದ 10/101/2ಎಲ್ಲಾ ಶುಭ ಕಾರ್ಯಗಳನ್ನು ಯಜ್ಞದಿಂದ ಆರಂಭಿಸು.ಭದ್ರೋ ನೋ ಅಗ್ನಿರಾಹುತಃ | – ಯಜುರ್ವೇದ1 15/38ಯಜ್ಞದಲ್ಲಿ ಅರ್ಪಿಸಿದ ಆಹುತಿಗಳು ಕಲ್ಯಾಣಕಾರಿಯಾಗುತ್ತವೆ.ಅಯಜ್ಞಿಯೋ ಹತವರ್ಚಾ ಭವತಿ | -ಅಥರ್ವವೇದ 12/2/37ಯಜ್ಞ ಮಾಡದಿರುವವರ ತೇಜಸ್ಸು ನಷ್ಟವಾಗುತ್ತದೆ.
ಅನಾಹೂತೋ$ಧ್ವರಂ ವ್ರಜೇತ್ | – ಯಾಜ್ಞವಲ್ಕ್ಯ ಸ್ಮøತಿ.ಆಮಂತ್ರಣವಿಲ್ಲದಿದ್ದರೂ ಯಜ್ಞಗಳಲ್ಲಿ ಭಾಗವಹಿಸಬೇಕು.ಅಗ್ನಿಹೋತ್ರಂ ತು ಗಾಯತ್ರೀ ಮಂತ್ರೇಣ ವಿಧಿವತ್ ಕೃತಮ್ | ಸರ್ವೇಷ್ವವಸರೇಷ್ವೇವ ಶುಭಮೇವ ಮೈತ್ರಿಹ್ ||-ಗಾಯತ್ರೀ ಸಂಧ್ಯಾಗಾಯತ್ರೀ ಮಂತ್ರದೊಂದಿಗೆ ವಿಧಿಪೂರ್ವಕವಾಗಿ ಮಾಡಿದ ಅಗ್ನಿಹೋತ್ರವನ್ನು ಎಲ್ಲಾ ಸಂದರ್ಭಗಳಿಗೂವಿದ್ವಾಂಸರು ಶುಭವೆಂದು ಒಪ್ಪಿದ್ದಾರೆ.ಇದರ ಅರ್ಥಾತ ಕರ್ಮೋ$ನ್ಯತ್ರ ಲೋಕೋ$ಯಂ ಕರ್ಮಬಂಧನಃ | – ಗೀತಾ 3.1ಯಜ್ಞದ ನಿಮಿತ್ತವಲ್ಲದೆ ಮಾಡುವ ಇತರೆ ಎಲ್ಲಾ ಕಾರ್ಯಗಳು ಮನುಷ್ಯನನ್ನು ಕರ್ಮಬಂಧನದಲ್ಲಿಸಿಲುಕಿಸುತ್ತದೆ.ಅಸುರಾಶ್ಚ ಸುರಾಶ್ಚೈವ ಪುಣ್ಯಹೇತೋರ್ಮಖಕ್ರಿಯಾಮ್ -ಮಹಾಭಾರತಪುಣ್ಯಪ್ರಾಪ್ತಿಗಾಗಿ ದೇವತೆಗಳು ಮತ್ತು ರಾಕ್ಷಸರಿಬ್ಬರೂ ಯಜ್ಞ ಕ್ರಿಯೆಯಲ್ಲಿ ತೊಡಗುತ್ತಾರೆ.ಹೋಮ ಗಜ ಉರಬ ತಪ ಪೂಜಾ | ಕೋಟಿ ತೀರ್ಥ ಇಸನಾನ ಕರೀಜಾ || – ಸಿಖ್ಖ ಧರ್ಮಪವಿತ್ರವಾದ ಹವನ, ಯಜ್ಞ, ತಪಸ್ಸು, ಪೂಜೆ, ತೀರ್ಥ ಸ್ನಾನವೇ ಮುಂತಾದ ಶುಭ ಕರ್ಮಗಳನ್ನುಮನುಷ್ಯರು ಮಾಡಬೇಕು.ಗಾಯತ್ರೀ – ಪಾಪನಾಶಿನಿ. ನಾಲ್ಕೂ ವೇದಮಂತ್ರಗಳಲ್ಲಿ ಗಾಯತ್ರೀ ಮಂತ್ರಕ್ಕೆ ಸಮನಾದ ಮಂತ್ರ ಮತ್ತೊಂದಿಲ್ಲ. -ಋಷಿ ವಿಶ್ವಾಮಿತ್ರ.ಗಾಯತ್ರೀಗೆ ಸಮನಾದ ಜಪ ಯಾವುದೂ ಇಲ್ಲ.ಗಾಯತ್ರೀ ಸದ್ಗತಿ ಮತ್ತು ಶ್ರೇಷ್ಠ ಪದವಿಯನ್ನುನೀಡುವವಳಾಗಿದ್ದಾಳೆ. – ಋಷಿ ವಶಿಷ್ಠಗಾಯತ್ರಿಗಿಂತ ಮಿಗಿಲಾದ ಪವಿತ್ರಗೊಳಿಸುವಂತಹ ಮಂತ್ರ ಮತ್ತೊಂದಿಲ್ಲ.- ಭಗವಾನ್ ಮನುಗಾಯತ್ರಿಯು ನಾಲ್ಕೂ ವೇದಗಳ ತಾಯಿಯಾಗಿದ್ದಾಳೆ. – ಮಹಾಭಾರತ.ಛಂದಸಸ್ಸುಗಳಲ್ಲಿ ನಾನು ಗಾಯತ್ರಿಯಾಗಿದ್ದೇನೆ. -ಭಗವದ್ಗೀತೆಗಾಯತ್ರಿಯ ವರ್ಣನೆ ಮಾಡುವುದು ಮಾನುಷ ಶಕ್ತಿಗೆ ಮೀರಿದ್ದಾಗಿದೆ. – ಜಗದ್ಗುರು ಶಂಕರಾಚಾರ್ಯದೀರ್ಘಸಾಧನೆಗಿಂತಲೂ ಗಾಯತ್ರಿಯ ಚಿಕ್ಕ ಸಾಧನೆಯು ಹೆಚ್ಚಿನ ಸಿದ್ಧಿಯನ್ನು ನೀಡುತ್ತದೆ.- ರಾಮಕೃಷ್ಣಪರಮಹಂಸ.ಗಾಯತ್ರೀ ಮಂತ್ರವು ಆಧ್ಯಾತ್ಮಿಕ ಹಾಗೂ ಭೌತಿಕ ಲಾಭಗಳೆರಡನ್ನೂ ನೀಡುತ್ತದೆ.- ಮಹರ್ಷಿ ರಮಣಗಾಯತ್ರಿಯು ಸದ್ಬುದ್ಧಿಯ ಮಂತ್ರವಾಗಿದೆ. ಆದ್ದರಿಂದ ಇದು ಮಂತ್ರಗಳ ಮುಕುಟಮಣೀಯಾಗಿದೆ. -ಸ್ವಾಮಿ ವಿವೇಕಾನಂದಗಾಯತ್ರೀ ಸಾಧನೆಯಿಂದ ಹೃದಯ ಪವಿತ್ರವಾಗುತ್ತದೆ. ಬುದ್ಧಿ ನಿರ್ಮಲವಾಗುತ್ತದೆ. ನಾಲ್ಕೂ ವೇದಗಳಮೂಲವಾದ ಇದು ಗುರುಮಂತ್ರ. ಇದು ಸರ್ವಶ್ರೇಷ್ಠ ಮಂತ್ರ. ಪ್ರಾಚೀನ ಕಾಲಗಳಲ್ಲಿ ಎಲ್ಲಾ ಋಷಿಮುನಿಗಳು ಇದರ ಜಪ ಮಾಡುತ್ತಿದ್ದರು. – ಋಷಿ ದಯಾನಂದ .ಗಾಯತ್ರಿಯ ನಿರಂತರ ಜಪವು ರೋಗನಾಶಕವೂ, ವಿಘ್ನನಾಶಕವೂ ಹಾಗೂ ಆತ್ಮೋನ್ನತಿಗೆಉಪಯೋಗಕಾರಿಯೂ ಆಗಿದೆ. ಆಪತ್ತು ಹಾಗೂ ಸಂಕಟಗಳನ್ನು ದೂರಮಾಡುತ್ತದೆ. -ಮಹಾತ್ಮ ಗಾಂಧೀ.