ವೈಜ್ಞಾನಿಕ ಅಧ್ಯಾತ್ಮ

ವೈಜ್ಞಾನಿಕ ಅಧ್ಯಾತ್ಮ

Scientific Spirituality

ವಿಜ್ಞಾನ ಹಾಗೂ ಆಧ್ಯಾತ್ಮಗಳ ಬಗ್ಗೆ ಚರ್ಚೆ ನಡೆದಾಗಲೆಲ್ಲ ಅವುಗಳನ್ನು ಎರಡು ವಿರುದ್ಧ ಬಣಗಳಲ್ಲಿ ಇರುವಂತೆ ಭಾವಿಸಲಾಗುತ್ತದೆ. ಇವೆರಡರ ನಡುವೆ ಪರಸ್ಪರ ಸಾಮರಸ್ಯ ಸಾಧ್ಯವಿಲ್ಲ ಎನ್ನಲಾಗುತ್ತದೆ. ಒಂದು ಪ್ರತ್ಯಕ್ಷವಾದಕ್ಕೆ (ನಮಗೆ ಕಾಣುವ ಪ್ರಪಂಚಕ್ಕೆ) ಪ್ರಾಧಾನ್ಯತೆಯನ್ನು ನೀಡಿದರೆ, ಮತ್ತೊಂದು ಪರೋಕ್ಷ ಪ್ರಪಂಚಕ್ಕೆ ನೀಡುತ್ತದೆ. ಆದರೆ ಈ ಉಹಾಪೋಹಗಳು ದೂರದಿಂದ ನೋಡಿ ಸ್ಥೂಲವಾಗಿ ಯೋಚಿಸುವವರ ಮನಸ್ಸಿನಿಂದ ಹುಟ್ಟಿದೆ. ಆದರೆ ಇಂದು ವೈಜ್ಞಾನಿಕರು ಹಾಗೂ ಆಧ್ಯಾತ್ಮವಾದಿಗಳು ಕ್ರಮಶಃ ಇವೆರಡರಲ್ಲಿ ಅನ್ಯೋನ್ಯ ಸಂಬಂಧ ಇರುವುದನ್ನು ಒಪ್ಪಿಕೊಳ್ಳುತ್ತಾರೆ. ಸರ್ ಜೇಮ್ಸ್, ಜೀನ್ಸ್, ಮ್ಯಾಕ್ಸ್ ಪ್ಲಾಂಕ್ ರಂತಹ ವಿಧ್ವಾಂಸರ ಅಭಿಪ್ರಾಯದಂತೆ ವಿಜ್ಞಾನಕ್ಕೆ ಆಧ್ಯಾತ್ಮಿಕ ಅನುಶಾಸನಗಳ ಅವಶ್ಯಕತೆಯಿದೆ. ಅದೇ ಸಮಯದಲ್ಲಿ ವೈಜ್ಞಾನಿಕ ಮನೋವೃತ್ತಿಯು ಆಧ್ಯಾತ್ಮಿಕತೆಗೆ ಅವಶ್ಯಕವಾಗಿದೆ. ಇದರ ಆಭಾವದಲ್ಲಿ ಆಧ್ಯಾತ್ಮ ದರ್ಶನವು ಇಷ್ಟವಾದ ವಚನಗಳ ತರ್ಕ ಅಥವಾ ವ್ಯಾಖ್ಯೆಯಿಲ್ಲದೆ ಪಾರಾಯಣ ಮಾಡುತ್ತಾ ಅಶ್ರದ್ಧೆಯ ಕೋಪಕ್ಕೆ ತುತ್ತಾಗುವುದನ್ನು ಕಾಣಬಹುದು. ಇನ್ನೊಂದೆಡೆ ಆಧ್ಯಾತ್ಮಿಕ ಮೌಲ್ಯಗಳಿಲ್ಲದ ವಿಜ್ಞಾನವು ವಿಶ್ವಾಸರಾಹಿತ್ಯವನ್ನು ಪ್ರೋತ್ಸಾಹಿಸುತ್ತ, ವಿಧ್ವಂಸವನ್ನು ಹುಟ್ಟುಹಾಕುವುದನ್ನು ಕಾಣುತ್ತೇವೆ.
ವಸ್ತುತಃ ವೈಜ್ಞಾನಿಕ ಮನೋವೃತ್ತಿ ಹಾಗೂ ವೈಜ್ಞಾನಿಕರ ಪ್ರಚಾರ ಇವೆರಡೂ ಬೇರೆ ಬೇರೆ ವಿಷಯಗಾಗಿವೆ. ವೈಜ್ಞಾನಿಕ ಮನೋವೃತ್ತಿಯು ಜ್ಞಾನದ ವಿಕಾಸವನ್ನು ಪ್ರೋತ್ಸಾಹಿಸುತ್ತಾರೆ. ಈ ರೀತಿಯಲ್ಲಿ ಅದು ದರ್ಶನದ ಹತ್ತಿರಕ್ಕೆ ಬರುತ್ತದೆ. ಈ ಬಗೆಯ ಮನೋವೃತ್ತಿಯು ತರ್ಕ, ತಥ್ಯ ಸಮ್ಮತ ಪ್ರತಿಪಾದನೆಗಳನ್ನು ಆಗ್ರಹಿಸುತ್ತದೆ ಹಾಗೂ ಸಮಾಜಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ಬಗೆಗಿನ ನಮ್ಮ ಚಿಂತನೆ ಯನ್ನು ಪ್ರಬಲ ರೂಪದಿಂದ ಪ್ರಭಾವಗೊಳಿಸುತ್ತದೆ.
ಇದೇ ರೀತಿಯಲ್ಲಿ ಧಾರ್ಮಿಕ ಅಥವಾ ಆಧ್ಯಾತ್ಮಿಕ ಮನೋವೃತ್ತಿಯೂ ಧಾರ್ಮಿಕತೆ, ಆಧ್ಯಾತ್ಮಿಕತೆಗಿಂತ ವಿಭಿನ್ನವಾಗಿರುತ್ತದೆ. ಶ್ರೇಷ್ಠತೆಯನ್ನು, ಆದರ್ಶಗಳ ಪರಾಕಾಷ್ಠತೆಯನ್ನು, ಭಗವಂತನ ಬಗ್ಗೆ ವಿಶ್ವಾಸವನ್ನು ಆಧ್ಯಾತ್ಮಿಕತೆಯೆನ್ನುತ್ತಾರೆ. ಇಂತಹ ಆದರ್ಶ ಪಾರಾಯಣ ವೃತ್ತಿಯ ಬಗ್ಗೆ ಜನರನ್ನು ತಲೆ ಬಗ್ಗಿಸಿ ವಂದಿಸುವಂತೆ ಮಾಡುವುದೇ ಆಧ್ಯಾತ್ಮಿಕ ಮನೋವೃತ್ತಿಯಿರುವುದೋ ಆ ವ್ಯಕ್ತಿಯು ಧರ್ಮ ದರ್ಶನ-ಆಧ್ಯಾತ್ಮದ ಮೌಲ್ಯಗಳನ್ನು ಆಳವಾಗಿ ಆಲೋಚಿಸಿ ಅರ್ಥ ಮಾಡಿಕೊಳ್ಳುವುದರಲ್ಲಿ ಸಮರ್ಥರಾಗಿರುತ್ತಾರೆ. ಆತನು ಪರಂಪರೆಗಳ ಹಾಗೂ ಅಶಾಶ್ವತ ಮೌಲ್ಯಗಳನ್ನು ಬಂಧನದಲ್ಲಿ ಸಿಲುಕುವುದಿಲ್ಲ. ಯಾರು ಕೇವಲ ಆಧ್ಯಾತ್ಮಿಕ ಮಾನಸಿಕತೆಯ, ವೈಜ್ಞಾನಿಕತೆಗೆ ಮಹತ್ವ ನೀಡದ ವ್ಯಕ್ತಿಯ ಚಿಂತನೆ ಎಕಾಂಗಿಯಾಗಿರುತ್ತಾರೆ. – ಅಪೂರ್ಣವಾಗಿರುತ್ತಾರೆ.