Trainings

        ಸಮಗ್ರ ಶಿಕ್ಷಣವೆಂದರೆ ಕೇವಲ ಭೌತಿಕ ಜಗತ್ತಿನ ವಿಭಿನ್ನ ವಿಷಯಗಳ ಮಾಹಿತಿಯಷ್ಟೇ ಸಾಲದು. ಬದಲಿಗೆ ವ್ಯಕ್ತಿತ್ವದ ಸರ್ವತೋಮುಖ ವಿಕಾಸದಲ್ಲಿ ಉಪಯೋಗಕ್ಕೆ ಬರುವ ಮಾರ್ಗದರ್ಶನವು ಸಮ್ಮಿಳಿತವಾಗಿ, ಬದುಕಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಮಾಧಾನವು ದೊರೆತು, ಪ್ರಗತಿಯ ಪಥದ ಮೇಲೆ ನಿರಂತರ ಮುಂದುವರಿಯಲು ಪ್ರೇರಣೆಯನ್ನು ನೀಡುವ ಬೆಳಕು ಸಿಕ್ಕಾಗಲೇ ಸಮಗ್ರ ಶಿಕ್ಷಣದ ಉಪಲಬ್ಧಿಯಾದಂತಾಗುವುದು. ಈ ದೃಷ್ಟಿಯಿಂದಲೇ ವಿದ್ಯೆಯನ್ನು ಅಮೃತವೆಂದುಕರೆಯಲಾಗಿದೆ. ಒಂದು ವೇಳೆ ಇದನ್ನು ನಿಜಜೀವನದಲ್ಲಿ ಗಳಿಸಲು ಸಾಧ್ಯವಾದರೆಇದರ ಆಶ್ರಯವು ಕಲ್ಪವೃಕ್ಷ ಸದೃಶವಾಗಿ ಎಣಿಕೆಗೆ ನಿಲುಕದಷ್ಟು ಅಭೀಷ್ಟಗಳುಈಡೇರತೊಡಗುತ್ತವೆ.ಪ್ರಾಚೀನ ಕಾಲದ ಗುರುಕುಲಗಳಲ್ಲಿ, ಅರಣ್ಯಗಳಲ್ಲಿ ಮತ್ತುತೀರ್ಥಕ್ಷೇತ್ರಗಳಲ್ಲಿ ನೆಲೆಗೊಂಡಿದ್ದ ಋಷ್ಯಾಶ್ರಮಗಳಲ್ಲಿ ಈ ರೀತಿಯವ್ಯವಸ್ಥೆಗಳಿರುತ್ತಿದ್ದವು. ಈ ಆಶ್ರಮಗಳಿಗೆ ವಿಭಿನ್ನ ವಯೋಮಾನದ ಭಾವನಾಶೀಲಶಿಕ್ಷಾರ್ಥಿಗಳು ಬರುತ್ತಿದ್ದರು. ತಮ್ಮ ವ್ಯಕ್ತಿತ್ವದಲ್ಲಿ ದೇವತ್ವದ ಬೆಳಕನ್ನುಬೆಳಗಿಸಿಕೊಂಡು ಹಿಂದಿರುಗುತ್ತಿದ್ದರು. ಇಂತಹ ಶೈಕ್ಷಣಿಕ ಕೇಂದ್ರಗಳನ್ನು ‘ನರರತ್ನಗಳ’ಖಜಾನೆಗಳೆಂದು ಕರೆದು ಗೌರವಿಸಲಾಗುತ್ತಿತ್ತು. ನಳಂದಾ ಮತ್ತು ತಕ್ಷಶಿಲಾವಿದ್ಯಾಲಯಗಳು ಇದೇ ಸ್ತರದಲ್ಲಿದ್ದವು. ಬೌದ್ಧ ವಿಹಾರ ಹಾಗೂಸಂಘಾರಾಮಗಳಲ್ಲಿಯೂ ಇಂತಹುದೇ ವ್ಯವಸ್ಥೆಯಿದ್ದಿತು. ಇದರ ಪ್ರಭಾವದಿಂದಲೇಭೂಮಿಯ ಮೇಲೆ ಸ್ವರ್ಗ ಸದೃಶ ವಾತಾವರಣವು ಮತ್ತು ಮನುಷ್ಯರಲ್ಲಿ ದೇವತ್ವದಬೆಳಕು ಸರ್ವತ್ರವೂ ಕಂಡುಬರುತ್ತಿದ್ದಿತು. ಋಷಿ ಜ್ಞಾನದ ಪ್ರಭಾವಳಿಯುಪ್ರಧಾನವಾಗಿದ್ದ ಈ ಸಮಯವನ್ನೇ ಸತ್ಯುಗವೆಂದು ಕರೆಯಲಾಗುತ್ತಿತ್ತು.ಈ ಪ್ರಾಚೀನ ಶಿಕ್ಷಣ ಪದ್ಧತಿಯಿಂದಲೇ ಎಲ್ಲಾ ತತ್ತ್ವಗಳನ್ನು ಸ್ವೀಕರಿಸಿಸಾಧಕರುಗಳಿಗೆ ಅನುಕೂಲವಾಗುವಂತೆ ಶಾಂತಿಕುಂಜವನ್ನು ಒಂದು ಸಾಮೂಹಿಕಶಿಕ್ಷಣ ಹಾಗೂ ಸಾಧನೆಯ ಕೇಂದ್ರವನ್ನಾಗಿ ರೂಪಿಸಲಾಗಿದೆ. ಈ ವ್ಯವಸ್ಥೆಯುಕೇವಲ ಪಠ್ಯಕ್ರಮದಿಂದಲೇ ಪೂರ್ಣಗೊಳ್ಳುವುದಿಲ್ಲ. ಇದಕ್ಕೆ ಯೋಗ್ಯವಾದಪರಿಸರವೂ ಅಷ್ಟೇ ಅಗತ್ಯವಾದದ್ದಾಗಿದೆ. ಸ್ವಾಸ್ಥ್ಯ ಸಂವರ್ಧನ ಕೇಂದ್ರ್ರಕ್ಕಾಗಿ(ಸ್ಯಾನಿಟೋರಿಯಂ) ಅತ್ಯುತ್ತಮವಾದ ಗಾಳಿ, ನೀರು, ಬೆಳಕುಗಳುಳ್ಳ ಸ್ಥಳಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಪರಿಣಾಮವಾಗಿ ಅಲ್ಲಿ ಚಿಕಿತ್ಸೆ ಹೊಂದುವ ಜನರೆಲ್ಲರೂಉಳಿದ ಸ್ಥಾನಗಳ ಅಪೇಕ್ಷೆಗಿಂತಲೂ ಶೀಘ್ರವಾಗಿ ಗುಣಮುಖರಾಗುತ್ತಾರೆ. ಉಚ್ಪಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಇದೇ ಸಿದ್ಧಾಂತವು ಅನ್ವಯಿಸುತ್ತದೆ. ಈದೃಷ್ಟಿಯಿಂದ ಶಾಂತಿಕುಂಜವು ಅನುಪಮ ಸ್ಥಳವಾಗಿದೆ. ಗಂಗೆಯ ಮಡಿಲು,ಹಿಮಾಲಯದ ನೆರಳು, ಸಪ್ತ ಋಷಿಗಳ ತಪೋಭೂಮಿಯೇ ಮೊದಲಾದವುಗಳು,ಪ್ರಾಚೀನ ಕಾಲದಿಂದಲೂ ಸಂಚಿತವಾಗಿರುವ ಅಗಣಿತ ಆಧ್ಯಾತ್ಮಿಕ ಸಂಸ್ಕಾರಗಳಅಲೆಗಳು, ಅಖಂಡ ಅಗ್ನಿಯಿಂದ ನಿತ್ಯವೂ ಪ್ರಜ್ವಲಿಸುವ ಯಜ್ಞಕರ್ಮಗಳು,ಶಾಂತಿಕುಂಜದ ಹುಟ್ಟಿನಿಂದ ಹಿಡಿದು ಇಂದಿನವರೆಗೂ ಸಂಪನ್ನಗೊಳ್ಳುತ್ತಲೇಇರುವ ವಿವಿಧ ಸಾಧನಾ ಶಿಬಿರಗಳ ಲಕ್ಷಾಂತರ ಸಾಧಕರುಗಳ ತಪಃಸಾಧನಾಶಕ್ತಿಯೂ,   ಪರಮಪೂಜ್ಯ ಗುರುದೇವರ 24-ಲಕ್ಷ ಗಳ 24 ಮಹಾಪುರಶ್ಚರಣಗಳಿಗೆಸಾಕ್ಷಿಯಾಗಿ 1926ರಿಂದ ಪ್ರಜ್ವಲಿಸುತ್ತಲೇ ಇರುವ ಅಖಂಡ-ದೀಪದ ಸಾನ್ನಿಧ್ಯವೂ,ಅಖಂಡವಾಗಿ ಸಂಚಾಲಿತವಾಗುತ್ತಿರುವ ಗಾಯತ್ರೀ ಜಪವೂ, ಹಿಮಾಲಯದ ಋಷಿಗಳದಿವ್ಯ ಸಂರಕ್ಷಣೆಯೂ, ಹಾಗೂ ಪರಮಪೂಜ್ಯ ಗುರುದೇವರ ಹಾಗೂ ವಂದನೀಯಮಾತಾಜಿಯವರ ಕಠೋರ ತಪಶ್ಚರ್ಯೆಯ ಪ್ರಭಾವಗಳೂ, ಈ ಎಲ್ಲವೂಸಮ್ಮಿಳಿತಗೊಂಡು ಶಾಂತಿಕುಂಜವು ಅತ್ಯಂತ ವಿಶಿಷ್ಟ ಶಕ್ತಿ ಪ್ರವಾಹದಿಂದ ತುಂಬಿಹರಿಯುತ್ತಿದೆ. ಈ ಕಾರಣದಿಂದಾಗಿಯೇ ತೀರಾ ಸಾಮಾನ್ಯ ವ್ಯಕ್ತಿಯು ಮಾಡಿದಅತ್ಯಂತ ಸಾಧಾರಣ ಸಾಧನೆಗಳಿಗೂ ಕೂಡ ಅತಿ ಶೀಘ್ರದಲ್ಲಿಯೇ ವಿಶೇಷ ಫಲಗಳುನಿಶ್ಚಿತವಾಗಿ ಸಿಗುತ್ತಿರುವುದು ಎಲ್ಲರ ಅನುಭವಕ್ಕೆ ಬರುತ್ತಿದೆ.ವಿವಿಧ ಲೌಕಿಕ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ಮತ್ತುಸರಕಾರೇತರ ಶಾಲಾ-ಕಾಲೇಜುಗಳು ಸಾಕಷ್ಟು ಪ್ರಮಾಣದಲ್ಲಿ ವ್ಯಾಪಕವಾಗಿಕಾರ್ಯನಿರ್ವಹಿಸುತ್ತಿರುವುದರಿಂದ ಶಾಂತಿಕುಂಜದಲ್ಲಿ ಇವುಗಳ ಅಧ್ಯಯನಕ್ಕೆ ಪ್ರತ್ಯೇಕವ್ಯವಸ್ಥೆಯನ್ನು ಮಾಡಿಲ್ಲ. ಇಲ್ಲಿ ಜೀವನ ಸಂಜೀವಿನೀ ವಿದ್ಯೆಗೇ ಸಂಪೂರ್ಣ ಒತ್ತುನೀಡಲಾಗಿದೆ. ಬದುಕಿನ ಪ್ರತಿಯೊಂದು ಮಗ್ಗುಲಿನಲ್ಲಿಯೂ ಈ ಜೀವನ ಕಲೆಯುಹೇಗೆ ಸಮ್ಮಿಳಿತವಾಗಬೇಕೆಂಬುದರ ತರಬೇತಿಯನ್ನು ಇಲ್ಲಿನ ಶಿಕ್ಷಣದಲ್ಲಿನೀಡಲಾಗುವುದು.ಪ್ರಸ್ತುತ ಯೋಜನೆಗೆ ಸಂಬಂಧಿಸಿದಂತೆ ಮುಖ್ಯವಾಗಿ ಎರಡು ಪ್ರಕಾರದಶಿಬಿರಗಳು ನಡೆಯುತ್ತವೆ. 1. ಸಾಧನಾ ಪ್ರಧಾನ 2. ತರಬೇತಿ ಪ್ರಧಾನ. ಸಾಧನಾಪ್ರಧಾನ ಶಿಬಿರಗಳಡಿಯಲ್ಲಿ ಈ ದಿನಗಳಲ್ಲಿ ಎರಡು ಪ್ರಕಾರದ ಶಿಬಿರಗಳುನಡೆಯುತ್ತಿವೆ.

  ಒಂಭತ್ತು ದಿನಗಳ ಸಂಜೀವಿನೀ ಸಾಧನಾ ಶಿಬಿರ :

ಈ ಶಿಬಿರವು ಪ್ರತಿತಿಂಗಳೂ 1 ರಿಂದ 9, 11 ರಿಂದ 19, ಮತ್ತು 21ರಿಂದ 29ನೇ ತಾರೀಖಿನ ದಿನಗಳಲ್ಲಿ ವರ್ಷದ ಎಲ್ಲಾ ತಿಂಗಳುಗಳಲ್ಲಿನಡೆಯುತ್ತಿರುತ್ತದೆ.
ಇದರಲ್ಲಿ 24 ಸಾವಿರ ಗಾಯತ್ರಿ ಮಂತ್ರದ ಲಘು ಅನುಷ್ಠಾನವನ್ನುಪೂರ್ಣಗೊಳಿಸಲಾಗುತ್ತದೆ. ಬೆಳಿಗ್ಗೆ 3-30 ಗಂಟೆಗೆ (ಚಳಿಗಾಲದಲ್ಲಿ 4-00 ಗಂಟೆ)ಜಾಗರಣೆಯೊಂದಿಗೆ ದಿನಚರ್ಯೆಯು ಪ್ರಾರಂಭವಾಗುತ್ತದೆ. ಎರಡೂ ಸಮಯಪ್ರಾರ್ಥನೆ ಮತ್ತು ಆರತಿ, ತ್ರಿಕಾಲ ಸಂಧ್ಯೆ, ಮೂರು ಬಾರಿ ಸತ್ಸಂಗ  ಹಾಗು ನಿತ್ಯಯಜ್ಞ, ಅಖಂಡ ದೀಪ ದರ್ಶನದ ನಿಯಮಿತ ಕ್ರಮವಿರುತ್ತದೆ. ಪ್ರತಿದಿನವೂ 30ಮಾಲೆಗಳಂತೆ ಗಾಯತ್ರಿ ಮಂತ್ರ ಜಪವನ್ನು ಮಾಡುವುದು ಕಡ್ಡಾಯವಾಗಿದೆ.ಶಿಬಿರದ ಪೂರ್ವ ಸಂಧ್ಯೆಯಲ್ಲಿ ಅಂದರೆ 10, 20, ಮತ್ತು 30/31 ನೇ ತಾರೀಖಿನಸಂಜೆ ಸಂಕಲ್ಪವನ್ನು ಮಾಡಿಸಲಾಗುತ್ತದೆ. ಈ ಗೋಷ್ಠಿಯಲ್ಲಿ ಸಾಧನೆಯ ಉದ್ದೇಶ,ಆಶ್ರಮದ ಅನುಶಾಸನ ಹಾಗು ದಿನಚರ್ಯೆಯನ್ನು ತಿಳಿಸಿಕೊಡಲಾಗುತ್ತದೆ. ಶಿಬಿರದ9ನೇ ದಿನದಂದು ಅಂದರೆ 9, 19, ಮತ್ತು29ನೇ ತಾರೀಖುಗಳಂದು ಬೆಳಿಗ್ಗೆ 10ಗಂಟೆಗೆ ಶಿಬಿರದ ಸಮಾಪನ ಗೋಷ್ಠಿಯು ನಡೆಯುತ್ತದೆ.ಅನುಷ್ಠಾನದ ಕಾಲದಲ್ಲಿ ಒಂದೇ ಹೊತ್ತು ಊಟ ಮಾಡಬೇಕು. ದಿನವಿಡೀವ್ಯಸ್ತರಾಗಿರುವಂತೆ ವೇಳಾಪಟ್ಟಿಯಿರುತ್ತದೆ. ಆದ್ದರಿಂದ ಶಾರೀರಿಕವಾಗಿ ಹಾಗುಮಾನಸಿಕವಾಗಿ ಆರೋಗ್ಯವಾಗಿರುವವರಷ್ಟೇ ಶಿಬಿರಗಳಿಗೆ ಬರಬೇಕು. ಕನಿಷ್ಠ ಒಂದುಗಂಟೆ ಬೆನ್ನನ್ನು ನೇರವಾಗಿರಿಸಿ ಕುಳಿತುಕೊಳ್ಳುವ ಹಾಗು 5 ರಿಂದ 11 ಮಾಲೆಗಳಜಪವನ್ನು ಮಾಡುವ ಅಭ್ಯಾಸವಿರಬೇಕು. ಸಾಧ್ಯವಾದರೆ  ಒಂಭತ್ತು ದಿನಗಳಅನುಷ್ಠಾನವನ್ನು ಕೈಗೊಳ್ಳಲಿಕ್ಕೂ ಒಂದೆರಡು ದಿನ ಮುಂಚಿತವಾಗಿಯೇ ತೀರ್ಥಕ್ಷೇತ್ರಕ್ಕೆಬಂದು ದಿನಚರ್ಯೆ, ಅನುಶಾಸನ ಹಾಗು ಸಾಧನೆಯ ಅಭ್ಯಾಸವನ್ನು ಮಾಡಬೇಕು.ತಮ್ಮ ಹಾಗು ತಮ್ಮೊಂದಿಗೆ ಬರುವ ಬಂಧುಗಳ ಹೆಸರು, ವಿಳಾಸ ವಯಸ್ಸು,ಶಿಕ್ಷಣ, ವೃತ್ತಿ ಮೊದಲಾದ ವಿವರಣೆಗಳನ್ನು ನೀಡಿ ಎರಡು ತಿಂಗಳು ಮುಂಚಿತವಾಗಿನಿವೇದನಾ ಪತ್ರವನ್ನು ಕಳುಹಿಸಬೇಕು. ಕೇವಲ ಸಂಖ್ಯೆಯನ್ನಷ್ಡೇ ಬರೆದರೆ ಸ್ವೀಕೃತಿಪತ್ರವನ್ನು ಕಳುಹಿಸಲಾಗುವುದಿಲ್ಲ. ಪತ್ರ ವ್ಯವಹಾರದ ವಿಳಾಸವು ಸ್ಪಷ್ಟವಾಗಿರಬೇಕು

     ಅಂತಃ ಊರ್ಜಾ ಜಾಗರಣ ಶಿಬಿರ :

ಇದು ಮೌನ  ಸಾಧನೆಯ ಶಿಬಿರ. ಇದರ ಅವಧಿ ಐದು ದಿನಗಳು. ಈಶಿಬಿರವು ಆಶ್ವಿಜ ನವರಾತ್ರಿಯ ನಂತರ, ಚೈತ್ರ ನವರಾತ್ರಿಗೂ ಮುನ್ನ (ಅಕ್ಟೋಬರ್- ಏಪ್ರಿಲ್) ಪ್ರತಿ ತಿಂಗಳೂ 1ರಿಂದ 5, 6 ರಿಂದ 10, 11 ರಿಂದ 15, 16 ರಿಂದ 20,21 ರಿಂದ 25 ಮತ್ತು 26 ರಿಂದ 30 ನೇ ತಾರೀಖಿನಂದು ನಡೆಯುತ್ತಿರುತ್ತದೆ.ಎರಡೂ  ನವರಾತ್ರಿಯ ದಿನಗಳಲ್ಲಿ ಹಾಗು ವಸಂತ ಪಂಚಮಿಯ ದಿನಗಳಲ್ಲಿಶಿಬಿರವು ನಡೆಯುವುದಿಲ್ಲ. ಬೇಸಿಗೆಯ ದಿನಗಳಲ್ಲಿ ಈ ಶಿಬಿರವಿರುವುದಿಲ್ಲ. ಸಾಧನೆಯಆರಂಭಕ್ಕೂ ಒಂದು ದಿನ ಮೊದಲೇ ಮಧ್ಯಾಹ್ನಕ್ಕೂ ಮುನ್ನ ಶಾಂತಿಕುಂಜತಲುಪಬೇಕು. ಆ ದಿನ ನೋಂದಾವಣಿ, ಅಭ್ಯಾಸ, ಅನುಶಾಸನ ಗೋಷ್ಠಿಗಳಲ್ಲಿಭಾಗವಹಿಸ ಬೇಕಾಗುತ್ತದೆ. ಐದು ದಿನಗಳವರಗೆ ಕೊಠಡಿಯಲ್ಲಿ ಒಬ್ಬರೇಮೌನದಲ್ಲಿದ್ದು ಕಠಿಣವಾದ ಸಾಧನೆಯನ್ನು ಮಾಡಬೇಕಾಗುತ್ತದೆ.ಅಂತಃ ಊರ್ಜಾ ಜಾಗರಣದ ಸಾಧನೆಯು ಒಂದು ವಿಧದಲ್ಲಿಪಂಚಕೋಶಗಳ ಜಾಗರಣದ ಉಚ್ಚಸ್ತರೀಯ ಗಾಯತ್ರಿ ಸಾಧನೆಯಾಗಿದೆ. ಇದರಲ್ಲಿಅನ್ನಮಯ ಕೋಶದ ಪರಿಷ್ಕಾರವನ್ನು ವಿಶೇಷ ಹವಿಷ್ಯಾನ್ನದ ಆಹಾರವು ಮಾಡುತ್ತದೆ.ಸೋ$ಹಂ ಸಾಧನೆ ಹಾಗು ಪ್ರಾಣಾಯಾಮವು ಪ್ರಾಣಮಯ ಕೋಶದ ಜಾಗರಣೆಯಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ತ್ರಾಟಕ ಸಾಧನೆಯು  (ಬಿಂದು ಯೋಗ)ಮನೋಮಯ ಕೋಶದ ಜಾಗೃತಿಗೆ ಸಹಾಯಕವಾಗಿದೆ. ಆತ್ಮಬೋಧ- ತತ್ತ್ವಬೋಧಮತ್ತು ದರ್ಪಣ ಸಾಧನೆಗಳಿಂದ ವಿಜ್ಞಾನಮಯ ಕೋಶವು ಜಾಗೃತವಾಗುತ್ತದೆ.ಸ್ವಾಧ್ಯಾಯ ಮತ್ತು ಗುರುದೇವರ ಅಮೃತವಾಣಿಯು ಸಾಧನೆಗೆ ಹೆಚ್ಚಿನಪೋಷಣೆಯನ್ನು ನೀಡುತ್ತದೆ. ನಾದಯೋಗ ಮತ್ತು ಖೇಚರಿ ಮುದ್ರೆಯಸಾಧನೆಯಿಂದ ಆನಂದಮಯ ಕೋಶವು ಜಾಗೃತವಾಗುತ್ತದೆ. ಮುಂಜಾನೆಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ನಿಗದಿಪಡಿಸಿರುವ ಎಲ್ಲಾಸಾಧನೆಗಳನ್ನು ಸಂಪೂರ್ಣ ಮಾಡಬೇಕು. ಈ ಎಲ್ಲವುಗಳ ನಿರ್ದೇಶನವನ್ನುಸೌಂಡ್ ಸಿಸ್ಟಮ್ನ ಮೂಲಕ ಕೊಠಡಿಯಲ್ಲಿಯೇ ನೀಡಲಾಗುತ್ತದೆ. ಅಲ್ಲಿಯೇಊಟ ಮತ್ತು ಪಾನೀಯಗಳನ್ನು ಪೂರೈಸಲಾಗುವುದು.ಈ ಸಾಧನೆಯು ಅತ್ಯಂತ ಕಠಿಣವಾದದ್ದಾಗಿದೆ. ಆದ್ದರಿಂದ ಶಾರೀರಿಕವಾಗಿ,ಮಾನಸಿಕವಾಗಿ ಸ್ವಸ್ಥರಾಗಿರುವ ಮತ್ತು ಸಾಧನೆ ಮಾಡುವ ಸ್ಥಿತಿಯಲ್ಲಿರುವವರಿಗಷ್ಟೇಅವಕಾಶ ಕೊಡಲಾಗುತ್ತದೆ. ಕನಿಷ್ಠ ಒಂದಾದರೂ ಜೀವನ ಸಾಧನೆಯ ಶಿಬಿರವನ್ನುಪೂರ್ಣಗೊಳಿಸಿರುವವರು, ಹಾಗೂ ಅಭಿಯಾನಗಳಲ್ಲಿ ಸಕ್ರಿಯವಾಗಿ ಜವಾಬ್ದಾರಿನಿರ್ವಹಿಸುತ್ತಿರುವ ಕಾರ್ಯಕರ್ತರುಗಳು ಮಾತ್ರ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.ತಾವು ಮಾಡುತ್ತಿರುವ ಮಿಶನ್ನಿನ ಕಾರ್ಯವನ್ನು ಉಲ್ಲೇಖಿಸಿ, ನಿವೇದನಾ ಪತ್ರವನ್ನುಶಾಂತಿಕುಂಜ ಹರಿದ್ವಾರದಿಂದ ಪಡೆದುಕೊಳ್ಳಬಹುದು. ಶಿಬಿರದ ಆಕಾಂಕ್ಷಿಗಳು ಆರೇಳು ತಿಂಗಳಿಗೂ ಮುಂಚಿತವಾಗಿಯೇ ಸ್ಪಷ್ಟ ಅಕ್ಷರಗಳಲ್ಲಿ ವಿವರಗಳನ್ನುಬರೆದು ಕಳುಹಿಸಬೇಕು. ಕಾರ್ಯಕರ್ತರ ಸಂಖ್ಯೆಯು ಆಧಿಕವಾಗಿರುವುದರಿಂದಒಬ್ಬರಿಗೆ ಒಮ್ಮೆ ಮಾತ್ರ ಭಾಗವಹಿಸಲು ಅವಕಾಶವಿರುವುದು.ತರಬೇತಿ ಶಿಬಿರಗಳ ಮಾಲೆಯಲ್ಲಿ ಯುಗಶಿಲ್ಪಿ ಶಿಬಿರ, ಪರಿವ್ರಾಜಕಶಿಬಿರ, ರಚನಾತ್ಮಕ ಶಿಬಿರ ಹಾಗೂ ಸಮಯ, ಸಂದರ್ಭಾನುಸಾರವಾಗಿ ವಿವಿಧಸರಕಾರಿ, ಸರಕಾರೇತರ ಸಂಘ-ಸಂಸ್ಥೆಗಳ ಸಿಬ್ಬಂದಿಗಳ ತರಬೇತಿ ಶಿಬಿರಗಳುನಡೆಯುತ್ತಿರುತ್ತವೆ

           ಯುಗಶಿಲ್ಪಿ ಶಿಬಿರ

ಹಿಂದೆ ಗುರುಕುಲಗಳು ಕಿಶೋರಾವಸ್ಥೆಯಿಂದ ಆರಂಭಿಸಿಪ್ರೌಢಾವಸ್ಥೆಯವರೆಗೆ ಸುಸಂಸ್ಕಾರಿತವಾದ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನುಹೊತ್ತಿದ್ದವು. ಈಗ ಆ ಜವಾಬ್ದಾರಿಯು ಅನ್ಯಾನ್ಯ ಸರಕಾರಿ ಹಾಗೂ ಸರಾಕಾರೇತರಸಂಸ್ಥೆಗಳ ಹೆಗಲಿಗೇರಿದ್ದರೂ ಅವುಗಳ ಕ್ಷೇತ್ರವು ಭೌತಿಕ ಶಿಕ್ಷಣಕ್ಕೆ ಮಾತ್ರಸೀಮಿತವಾಗಿಬಿಟ್ಟಿವೆ. ಹಾಗೂ ಇಲ್ಲಿ ಪಡೆದ ಶಿಕ್ಷಣಕ್ಕೂ ಹಾಗೂ ವಾಸ್ತವಿಕಜೀವನಕ್ಕೂ ಯಾವುದೇ ರೀತಿಯ ತಾಳ-ಮೇಳಗಳಿಲ್ಲದಿರುವುದು ಕಂಡುಬರುತ್ತಿದೆ.ಸಮಗ್ರ ಶಿಕ್ಷಣದ ಈ ಕೊರತೆಯನ್ನು ತುಂಬಲಿಕ್ಕಾಗಿಯೇ ಯುಗಶಿಲ್ಪಿ ಶಿಬಿರದಸಂರಚನೆಯನ್ನು ಮಾಡಲಾಗಿದೆ. ಇದರಲ್ಲಿ ಸತ್ಪ್ರವೃತ್ತಿಗಳ ಸಂವರ್ಧನೆ, ದುಷ್ಟವೃತ್ತಿಗಳನಿರ್ಮೂಲನೆ, ಜನಮಾನಸದ ಪರಿಷ್ಕಾರ ಹಾಗೂ ಲೋಕ ಶಿಕ್ಷಣದ ವಿಧಿ-ವಿಧಾನಗಳನ್ನು ಕಲಿಸಿಕೊಡಲಾಗುತ್ತದೆ.ಗುರುಕುಲಗಳ ಪ್ರಣಾಳಿಕೆಯ ರೀತಿಯಲ್ಲಿಯೇ ಶಿಕ್ಷಣ ಪ್ರಕ್ರಿಯೆ ಇದ್ದರೂವರ್ಷಾನುಗಟ್ಟಳೆ ನಡೆಸಲು ಸಮಯದ ಆಭಾವ ಹಾಗೂ ಸ್ಥಾನ, ವ್ಯವಸ್ಥೆಗಳಕೊರತೆಯಿಂದಾಗಿ ಒಂದು ತಿಂಗಳ ಆವಧಿಯಲ್ಲಿಯೇ ಗುಣಾತ್ಮಕ ಶಿಕ್ಷಣದಬೀಜಾರೋಪಣವನ್ನು ಮಾಡಲಾಗುತ್ತದೆ. ಈ ಬೀಜವೇ ಮುಂದೆ ಸಮಯವುಕೂಡಿಬಂದಾಗ ಫಲಿತವಾಗಿ ವ್ಯಕ್ತಿತ್ವವನ್ನು ಪ್ರಖರಗೊಳಿಸುತ್ತದೆ. ಈ ಶಿಬಿರವುಪ್ರತಿತಿಂಗಳೂ 1 ರಿಂದ 29 ನೇ ತಾರೀಖಿನವರೆಗೆ ನಡೆಯುತ್ತದೆ. ಯುಗಶಿಲ್ಪಿಶಿಬಿರಕ್ಕೆ ಕೆಳಕಂಡವರಷ್ಟೇ ನಿವೇದನಾ ಪತ್ರವನ್ನು ಕಳುಹಿಸಬಹುದು.
1. ಶಾಂತಿಕುಂಜದಲ್ಲಿ ಕನಿಷ್ಠ ಒಂದಾದರೂ ಸಂಜೀವನೀ ಸಾಧನಾ ಶಿಬಿರವನ್ನುಮಾಡಿರುವವರು  ಅಥವಾ
2. ತಮ್ಮ ಸ್ತರದಲ್ಲಿ ಒಂದು ಅನುಷ್ಠಾನವನ್ನು ಪೂರೈಸಿದವರು ಮತ್ತು ಮಿಶನ್ನಿನ ಕಾರ್ಯಗಳಲ್ಲಿ ಸಹಕಾರವನ್ನು ನೀಡುತ್ತಿರುವವರು. ಈ ಶಿಬಿರದಲ್ಲಿ ಋಷಿಗಳ ವಿಚಾರವನ್ನು  ಎಲ್ಲಾ ಜನರೆಡೆಗೂತಲುಪಿಸಲಿಕ್ಕಾಗಿ ಡಬಲಿಯನ್ನು (ಕಂಜರ) ಬಾರಿಸುತ್ತಾ ಪ್ರೇರಣಾ ಗೀತೆಗಳನ್ನುಹಾಡುವುದು, ಯಜ್ಞ, ದೀಪಯಜ್ಞ ಹಾಗೂ ವಿಭಿನ್ನ ಪ್ರಕಾರದ ಪ್ರಾಥಮಿಕಸಂಸ್ಕಾರಗಳಿಗೆ ಪ್ರೇರಣೆ ನೀಡುವ ಕರ್ಮಕಾಂಡಗಳು, ಆರೋಗ್ಯ ಸಂರಕ್ಷಣೆ ಹಾಗೂಬೇಕರಿ, ಆಗರಬತ್ತಿ, ಮೊಂಬತ್ತಿ, ಸ್ಕ್ರೀನ್ ಪ್ರಿಂಟಿಂಗ್, ಪ್ಲಾಸ್ಟಿಕ್ ಮೌಲ್ಡಿಂಗ್ಲೆಮಿನೇಶನ್, ಹಣ್ಣಿನ ಸಂರಕ್ಷಣೆ ಮೊದಲಾದ ಗುಡಿಕೈಗಾರಿಕೆಗಳ ತರಬೇತಿಯನ್ನುನೀಡಲಾಗುವುದು.

        ಪರಿವ್ರಾಜಕ ಶಿಬಿರ

ಋಷಿಗಳು ವಿದ್ಯೆಯನ್ನು ಸಕಲ ಜನರವರೆಗೂ ವಿಸ್ತರಿಸಲಿಕ್ಕಾಗಿ ವ್ಯಕ್ತಿತ್ವಸಂಪನ್ನ ಶಿಕ್ಷಕರುಗಳ ನಿರ್ಮಾಣವನ್ನು ಮಾಡುವ ಉದ್ದೇಶದಿಂದ ಅರಣ್ಯಕಪರಂಪರೆಯನ್ನು ಜಾರಿಯಲ್ಲಿಟ್ಟಿದ್ದರು. ಮಹರ್ಷಿ ಅಗಸ್ತ್ಯರ ವೇದಪುರಿ,ಪ್ರಯಾಗದಲ್ಲಿದ್ದ ಭರದ್ವಾಜರ ಪ್ರಶಿಕ್ಷಣ ಶಾಲೆ, ವಿಶ್ವಾಮಿತ್ರರ ಸಿದ್ದಾಶ್ರಮಗಳೇಮೊದಲಾದವುಗಳು ಶ್ರೇಷ್ಠ ವ್ಯಕ್ತಿಗಳನ್ನು ಸಿದ್ದಗೊಳಿಸಿ ಸಮಯದ ಅವಶ್ಯಕತೆಗಳನ್ನುಪೂರೈಸುತ್ತಿದ್ದವು. ತಕ್ಷಶಿಲೆಯಿಂದ ಹೊರಬರುತ್ತಿದ್ದ ಪದವೀಧರರು ಚಾಣಕ್ಯನಸಂಜ್ಞೆಯನ್ನನುಸರಿಸಿ ರಾಷ್ಟ್ರದಾದ್ಯಂತ ಜಾಗರಣದ ಅಲೆಯನ್ನು ಬಡಿದೆಬ್ಬಿಸಿವಿಶಾಲಭಾರತದ ಸಂರಚನೆಯನ್ನು ಮಾಡಿದ್ದರು. ವೈದಿಕ ಸಂಸ್ಕøತಿಯ ಸಂರಕ್ಷಣೆಗಾಗಿಕುಮಾರಿಲಭಟ್ಟರು ನಳಂದಾದಲ್ಲಿ ಬಲಿಷ್ಠವಾದ ಭೂಮಿಕೆಯನ್ನು ಹಾಕಿದ್ದರು.ಅವರಿಟ್ಟ ಅಡಿಗಲ್ಲಿನ ಮೇಲೆಯೇ ಶಂಕರಾಚಾರ್ಯರ ಸಾಂಸ್ಕøತಿಕ ಕ್ರಾಂತಿಯಭವನವು ನಿರ್ಮಿಸಲ್ಪಟ್ಟಿತ್ತು.ಇಂತಹುದೇ ದಿವ್ಯ ಅರಣ್ಯಕವು ಇಲ್ಲಿ ಸ್ಥಾಪಿತವಾಗಿದೆ. ಇಲ್ಲಿ ಸಮಾಜಸೇವಕ ಪರಿವ್ರಾಜಕರ ತರಬೇತಿಯು ನಡೆಯುತ್ತದೆ. ಯುಗಶಿಲ್ಪಿ ಶಿಬಿರದಲ್ಲಿವ್ಯಕ್ತಿತ್ವ ನಿರ್ಮಾಣ ಮಾಡಲಾಗುತ್ತದೆ. ಪರಿವ್ರಾಜಕ ಶಿಬಿರದಲ್ಲಿ ಈ ಸಿದ್ಧವ್ಯಕ್ತಿತ್ವವನ್ನು,ಪ್ರತಿಭೆಯನ್ನು ಲೋಕಹಿತಕ್ಕಾಗಿ ಸಮರ್ಪಣೆ ಮಾಡುವುದನ್ನು ಕಲಿಸಲಾಗುತ್ತದೆ.ಶಿಕ್ಷಣದ ಪ್ರಕ್ರಿಯೆಯು ಯುಗಶಿಲ್ಪಿಯಂತೆಯೇ ಇರುತ್ತದೆ. ಆದರೆ ಇವುಗಳನ್ನೇಮತ್ತಷ್ಟು ಆಳವಾಗಿ ಕಲಿಸಿಕೊಡುವುದರೊಂದಿಗೆ ಜನಸಂಪರ್ಕ, ಶಕ್ತಿಪೀಠದವ್ಯವಸ್ಥೆಯೇ ಮೊದಲಾದ ಮಾಹಿತಿಗಳ್ನು ವಿವರವಾಗಿ ನೀಡಲಾಗುತ್ತದೆ. ಸಮಾಜಸೇವಕರ ಆಚಾರ-ಸಂಹಿತೆ, ದೇವಾಲಯದಲ್ಲಿನ ಪೂಜೆ, ಆರತಿ, ಮೂರ್ತಿಶೃಂಗಾರ,ವ್ಯವಸ್ಥೆ, ಉದ್ಯಾನಗಳ ಸಂರಕ್ಷಣೆ ಹಾಗೂ ಎಲ್ಲಾ ಷೋಡಶ ಸಂಸ್ಕಾರಗಳ ವ್ಯವಹಾರಿಕ ತರಬೇತಿಯನ್ನು ನೀಡಲಾಗುತ್ತದೆ. ಯುಗಶಿಲ್ಪಿ ಶಿಬಿರವನ್ನು ಸಫಲತಾಪೂರ್ವಕವಾಗಿಪೂರ್ಣಗೊಳಿಸಿರುವವರು ಹಾಗೂ ಕನಿಷ್ಠ 3 ತಿಂಗಳ ಆವಧಿಸಮಾಜಸೇವೆಗಾಗಿ ಕೊಡಲಿಚ್ಫಿಸುವವರೇ ಈ ಪರಿವ್ರಾಜಕ ಶಿಬಿರದಲ್ಲಿ ಪ್ರವೇಶಪಡೆಯಬಹುದು. ತರಬೇತಿಯ ಸಂದರ್ಭದಲ್ಲಿನ ವ್ಯಕ್ತಿಗತ ವೆಚ್ಚ ಮತ್ತುದಾರಿ ಖರ್ಚಿನ ಹಣವನ್ನು ಸ್ವತಃ ಭರಿಸಬೇಕು. ಈ ಶಿಬಿರವು ಪ್ರತಿ ತಿಂಗಳೂ1ನೇ ತಾರೀಖಿನಿಂದ 28 ರವರೆಗೆ ನಡೆಯುವುದು. ವಯಸ್ಕ ವ್ಯಕ್ತಿಗಳಷ್ಟೇಶಿಬಿರದಲ್ಲಿ ಪಾಲ್ಗೊಳ್ಳಬಹುದು. ಒಂಟಿ ಮಹಿಳೆಯರಿಗೆ ಶಿಬಿರಕ್ಕೆ ಪ್ರವೇಶವಿಲ್ಲ.

         ರಚನಾತ್ಮಕ ಶಿಬಿರ

ಮಿಶನ್ನಿನಲ್ಲಿ ರಚನಾತ್ಮಕ ಅಭಿಯಾನಗಳಲ್ಲೊಂದಾದ ಸ್ವಾವಲಂಬೀಗ್ರಾಮವಿಕಾಸ ಯೋಜನೆಗೆ ಪೂರಕವಾಗುವಂತೆ 9 ದಿವಸಗಳ 2 ತರಬೇತಿಶಿಬಿರಗಳನ್ನು ಪ್ರತಿ ತಿಂಗಳೂ ನಿಯಮಿತರೂಪದಲ್ಲಿ ನಡೆಸಲಾಗುತ್ತದೆ.ಶಾಂತಿಕುಂಜದಲ್ಲಿ ಗ್ರಾಮವಿಕಾಸ ಆಂದೋಳನವನ್ನು ಯುಗನಿರ್ಮಾಣಯೋಜನೆಯ ಮುಂದಿನ ಚರಣವಾಗಿ ಪ್ರಾರಂಭ ಮಾಡಲಾಯಿತು. ಇದರ ಲಕ್ಷ್ಯವೆಂದರೆ ರಾಷ್ಟ್ರದ ಬಹುಸಂಖ್ಯಾತ ಸಮಾಜವನ್ನು (ಗ್ರಾಮೀಣಜನಸಮುದಾಯ) ಅಭಾವ ಮತ್ತು ಸಂಕಟಗಳಿಂದ ಮುಕ್ತಗೊಳಿಸಿ ಸುಖ-ಸಮೃದ್ದಿಯ ಹಾದಿಯಲ್ಲಿ ಮುನ್ನಡೆಸಲು ಕಾರ್ಯಪಡೆಯನ್ನುಸಿದ್ದಗೊಳಿಸುವುದು. ಈ ಶಿಬಿರವು ಪ್ರತಿತಿಂಗಳೂ 29 ರಿಂದ 7ನೇತಾರೀಖಿನವರೆಗೆ ನಡೆಯುತ್ತದೆ. 9 ದಿವಸಗಳ ಸಾಧನಾ ಶಿಬಿರ ಹಾಗೂ1ತಿಂಗಳ ಯುಗಶಿಲ್ಪಿ ಶಿಬಿರದ ಶಿಕ್ಷಣವನ್ನು ಪಡೆದಿರುವ ಅಲ್ಲದೆ ಹಳ್ಳಿಗಳನ್ನುದತ್ತು ಸ್ವೀಕರಿಸಿ ಅವುಗಳನ್ನು ಸ್ವಾವಲಂಬಿಗೊಳಿಸಲಿಕ್ಕಾಗಿ ವಾರದಲ್ಲಿ ಕನಿಷ್ಠ1 ದಿನವಾದರೋ ಸಮಯವನ್ನು ನೀಡಿ ಕೆಲಸ ಮಾಡುವಲ್ಲಿ ಆಸಕ್ತಿಯನ್ನುಹೊಂದಿರುವ ಕಾರ್ಯಕರ್ತರಷ್ಟೇ ಈ ತರಬೇತಿ ಶಿಬಿರದಲ್ಲಿಭಾಗವಹಿಸಬಹುದಾಗಿದೆ. ಶಿಬಿರದಲ್ಲಿ ಪ್ರವೇಶವನ್ನು ಪಡೆಯುವುದಕ್ಕಾಗಿರಚನಾತ್ಮಕ ಕಾರ್ಯಾಲಯದಿಂದಲೇ ಅರ್ಜಿ ಪತ್ರ ಪಡೆದು ತಮ್ಮ ವ್ಯಕ್ತಿಗತಪರಿಚಯವನ್ನು ಕಳುಹಿಸಿ ಸ್ವೀಕೃತಿಯನ್ನು ಪಡೆಯಬಹುದಾಗಿದೆ.ಶಾಂತಿಕುಂಜ ಹಾಗೂ ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ,ನವದೆಹಲಿಯ ಸಂಯುಕ್ತ ಯೋಜನೆಯಡಿಯಲ್ಲಿ ಪ್ರತಿತಿಂಗಳು 6 ದಿವಸಗಳಸ್ವಸ್ಥ ಜನನ ಮತ್ತು ಬಾಲಸ್ವಾಸ್ಥ್ಯ (ಆರ್. ಸಿ. ಎಚ್) ಶಿಬಿರಗಳೂ ಕೂಡಪ್ರತಿ ತಿಂಗಳೂ 23 ರಿಂದ 28ನೇ ತಾರೀಖಿನವರೆಗೆ ನಿಯಮಿತ ರೂಪದಿಂದ ನಡೆಯುತ್ತಿರುತ್ತದೆ.

            ಇನ್ನಿತರ ಶಿಬಿರಗಳು

ಬೇಡಿಕೆ ಹಾಗೂ ಸಂದರ್ಭಗಳಿಗನುಸಾರವಾಗಿ ಸರಕಾರಿ ಹಾಗೂಸರಕಾರೇತರ ಸಂಸ್ಥೆಗಳ (ಕಾರ್ಪೋರೇಶನ್ ಸೆಕ್ಟರ್) ಅಧಿಕಾರಿಗಳ ಪ್ರಬಂಧಕರಮತ್ತು ಉದ್ಯೋಗಿಗಳ ನೈತಿಕ ತರಬೇತಿ ಶಿಬಿರ ಹಾಗೂ ಅನ್ಯಾನ್ಯ ವಿಶೇಷಶಿಬಿರಗಳನ್ನು ಕೂಡ ಆಯೋಜಿಸಲಾಗುತ್ತದೆ.ಎಲ್ಲಾ ವಿವಿಧ ಶಿಬಿರದ ಶಿಬಿರಾರ್ಥಿಗಳಿಗೆ ವಸತಿ, ಊಟ ಮತ್ತುಪ್ರಶಿಕ್ಷಣ ಮೊದಲಾದವುಗಳನ್ನು ಉಚಿತವಾಗಿ ಪೂರೈಸಲಾಗುತ್ತದೆ. ಈ ರೀತಿಯವ್ಯವಸ್ಥೆಯನ್ನು ಮಾಡಲು ಮುಖ್ಯ ಕಾರಣವೆಂದರೆ ಈ ಶಿಕ್ಷಣದ ಪ್ರಯೋಜನವನ್ನುಶ್ರೀಮಂತ-ಬಡವರಿಬ್ಬರೂ, ಪ್ರತಿಯೊಬ್ಬರೂ ಸಮಾನವಾಗಿ ಪಡೆಯುವಂತಾಗಲಿ,ಆರ್ಥಿಕ ಸಂಕಟದ ಕಾರಣವನ್ನೊಡ್ಡಿ ಯಾರೂ ಸಹ ಈ ಸುಯೋಗದಿಂದವಂಚಿತರಾಗದಿರಲೆಂದು. ಸಾಮಥ್ರ್ಯವಿರುವವರು ತಮ್ಮ ಶ್ರದ್ಧಾನುಸಾರ ಉದಾರಮನದಿಂದ ಸಹಯೋಗದ ರೂಪದಲ್ಲಿ ದಾನ ನೀಡಲು ಬಯಸಿದಲ್ಲಿ ಅದನ್ನುಸಹರ್ಷದಿಂದ, ಗೌರವಾದರಗಳಿಂದ ಸ್ವೀಕರಿಸಲಾಗುತ್ತದೆ. ಭಾವನಾಶೀಲರ ಈಉದಾರತೆಯಿಂದಾಗಿಯೇ ಆಶ್ರಮದ ವ್ಯವಸ್ಥೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದೆ.ಮಹಿಳೆಯರ್ಯಾರೂ ಶಿಬಿರಗಳಿಗೆ ಒಬ್ಬರೇ ಬರಬಾರದು, ಚಿಕ್ಕಮಕ್ಕಳನ್ನುಜೊತೆಗೆ ಕರೆತರಬಾರದು. ಅವರುಗಳ ಕಾರಣದಿಂದಾಗಿ ಗಮನವು ಅತ್ತಿತ್ತಹೊರಳುವಂತಾಗಬಾರದು. ಮುಪ್ಪಿನ ಮುದುಕರು, ಶಾರೀರಿಕ ಶ್ರಮದಿಂದ ಕೂಡಿದದಿನಚರ್ಯೆಯನ್ನು ಮಾಡಲು ಅಶಕ್ತರಾಗಿರುವವರು ಶಿಬಿರಕ್ಕೆ ಬರಬಾರದು. ಮಕ್ಕಳು,ರೋಗಿಗಳು, ವ್ಯಸನಿಗಳು, ಸೋಮಾರಿಗಳು, ಆಲಸೀ ವ್ಯಕ್ತಿಗಳು ಯಾವುದೇಕಾರಣಕ್ಕೂ ಶಿಬಿರಕ್ಕೆ ಬರಬಾರದು. ಯಾವುದೇ ಜಾತಿಯ ವ್ಯಕ್ತಿಗಳು ಶಿಕ್ಷಿತ ಸ್ತ್ರೀ,ಪುರುಷರು ಶಿಬಿರದಲ್ಲಿ ಸಮಾನರೂಪದಲ್ಲಿ ಪಾಲ್ಗೊಳ್ಳಬಹುದಾಗಿದೆ.ಬಂಗಾರದೊಡವೆಗಳನ್ನು ಧರಿಸಿಯಾಗಲೀ ಅಥವಾ ಇನ್ನ್ಯಾವುದೇ ಬೆಲೆ ಬಾಳುವವಸ್ತುಗಳನ್ನಾಗಲೀ ಜೊತೆಯಲ್ಲಿ ತೆಗೆದುಕೊಂಡು ಬರಬಾರದು. ಸಾರ್ವಜನಿಕಸ್ಥಳಗಳಲ್ಲಿ ವಿಶೇಷ ಎಚ್ಚರಿಕೆಯು ಅನಿವಾರ್ಯ!ಹರಿದ್ವಾರದಲ್ಲಿ ತುಂಬಾ ಚಳಿಯಾಗಬಹುದೆಂದು ಭಯ ಪಡುವಅಗತ್ಯವಿಲ್ಲ. ಉತ್ತರ ಭಾರತದ ಇನ್ನಿತರೆ ಸ್ಥಳಗಳಾದ ದೆಹಲಿ, ಹರಿಯಾಣಗಳಂತೆಯೇಇಲ್ಲಿಯೂ ಚಳಿಯಿರುತ್ತದೆ. ಮುಖ್ಯವಾಗಿ ಗಮಿನಿಸಬೇಕಾದುದ್ದೆಂದರೆ ಸೆಪ್ಟೆಂಬರ್ ಮಧ್ಯದಿಂದಾರಂಭಿಸಿ ಮಾರ್ಚ ತಿಂಗಳವರೆಗೂ ಬೆಚ್ಚಗಿನ ಉಡುಪಿನಅವಶ್ಯಕತೆಯಿರುತ್ತದೆ. ಬಿಸಿನೀರಿನ ಸ್ನಾನದ ಅಗತ್ಯವಿದ್ದವರಿಗೆ ಇದರ ವ್ಯವಸ್ಥೆಯಿದೆ.ಹಾಸಿಗೆ ಹೊದಿಕೆಗಳು ದೊರೆಯುತ್ತವೆ.ಎಲ್ಲೆಲ್ಲಿ ಪ್ರಜ್ಞಾಮಂಡಳ, ಮಹಿಳಾ ಮಂಡಳಗಳು ಸ್ಥಾಪನೆಯಾಗಿವೆಯೋಅಲ್ಲಿನ ಸದಸ್ಯರು ಅವಶ್ಯವಾಗಿ ಚಿಕ್ಕ-ದೊಡ್ಡ ಶಿಬಿರಗಳನ್ನು ಮಾಡಲೇಬೇಕು.ಇದರಿಂದ ಅವರ ಶ್ರದ್ಧೆ ಮತ್ತು ಪ್ರತಿಭೆಯಲ್ಲಿ ಪ್ರಗತಿಯುಂಟಾಗುವುದು.  ಹಾಗೂ ಅವರು ಹೊಸ-ಹೊಸ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಲುಸಮರ್ಥರಾಗುವರು.

          ವಿಶೇಷ ಕೋರಿಕೆ

1. ಯಾವುದೇ ಶಿಬಿರಕ್ಕೆ ಬರುವ ಮುನ್ನ ಅನುಮತಿಯನ್ನು ಪಡೆಯುವುದುಅನಿವಾರ್ಯವಾಗಿದೆ. ಕೇವಲ ಬರುವವರ ಸಂಖ್ಯೆಯನ್ನಷ್ಟೇ ಬರೆದರೆ ಅನುಮತಿಯನ್ನುನೀಡಲಾಗುವುದಿಲ್ಲ. ಆದ್ದರಿಂದ ಇಲ್ಲಿಗೆ ಆಗಮಿಸುವವರ ವಿವರಗಳನ್ನು ಸ್ಪಷ್ಟವಾದಅಕ್ಷರಗಳಲ್ಲಿ ಬರೆದು ಕಳುಹಿಸಬೇಕು.

2. ಪತ್ರ ಕಳುಹಿಸಿದವರಿಗೆ ಅನುಮತಿಯು ದೊರಕದಿದ್ದಲ್ಲಿ ತೀವ್ರವಾದನಿರಾಶೆಯುಂಟಾಗುವುದು. ಸ್ವೀಕೃತಿ ಪತ್ರವು ತಲುಪದಿರಲು ಅನೇಕ ಕಾರಣಗಳಿರುವಸಾಧ್ಯತೆಯಿದೆ. ಪತ್ರವು ವಿಳಂಬವಾಗಿ ತಲುಪುವುದು, ಸ್ಥಾನವು ತಪ್ಪಾಗಿಬರೆಯಲ್ಪಟ್ಟಿರುವುದು, ಪತ್ರದಲ್ಲಿ ವಿಳಾಸ ಬರೆಯದಿರುವುದು, ಅಸ್ಪಷ್ಟ ಬರಹಅಥವಾ ಕೆಟ್ಟದ್ದಾಗಿ ಬರೆದ ಕಾರಣದಿಂದ ವಿಷಯವೇನೆಂದು ಓದಿ ತಿಳಿದುಕೊಳ್ಳಲುಸಾಧ್ಯವಾಗದಿರುವುದು, ಇತ್ಯಾದಿ. ಆದ್ದರಿಂದ ನಿಮ್ಮ ವಿಳಾಸವನ್ನು ಸ್ಪಷ್ಟ ಅಕ್ಷರಗಳಲ್ಲಿಮತ್ತು ಪೂರ್ಣವಾಗಿ ಬರೆಯಿರಿ. ಒಮ್ಮೊಮ್ಮೆ ಅಂಚೆ-ಕಛೇರಿ ತಪ್ಪಿನಿಂದಾಗಿಯೂಪತ್ರವು ತಲುಪುವುದಿಲ್ಲ.
3. ತೀರ್ಥ ಸೇವನೆ, ಅಥವಾ ವಿಭಿನ್ನ ಪ್ರಕಾರದ ಸಂಸ್ಕಾರ, ಪುಂಸವನ, ನಾಮಕರಣ,ಅನ್ನಪ್ರಾಶನ, ಮುಂಡನ, ವಿದ್ಯಾರಂಭವೇ ಮೊದಲಾದ ದೀಕ್ಷೆಯನ್ನು ಮಾಡಿಸುವಉದ್ದೇಶದಿಂದ 2-3 ದಿನಗಳಿಗಾಗಿ ಬಂದು ಹೋಗಲು ಇಚ್ಫಿಸುವವರು ಯಾವಾಗಬೇಕಾದರೂ ಬರಬಹುದಾಗಿದೆ. ತಮ್ಮ ಆಗಮನದ ಬಗ್ಗೆ ಪೂರ್ವ ಸೂಚನೆನೀಡಿದರೆ ಒಳ್ಳೆಯದು.
4. ಕೊಠಡಿಗಳನ್ನು ಮೊದಲೇ ಅರಕ್ಷಣೆ ಮಾಡಲಾಗುವುದಿಲ್ಲ ಅಗಂತುಕರ ಸಂಖ್ಯೆಯಆಧಾರದ ಮೇಲೆಯೇ ವಸತಿ ವ್ಯವಸ್ಥೆಯು ಪ್ರತ್ಯೇಕವಾಗಿಯಾಗಲಿ ಅಥವಾ ಸಾಮೂಹಿಕವಾಗಿಯಾಗಲೀ ಆಗುತ್ತದೆ.ಬೇಸಿಗೆಯ ದಿನಗಳಲ್ಲಿ ಸಂಖ್ಯೆಯುಆಧಿಕವಾಗಿರುವುದರಿಂದ ವಸತಿ ಹಾಗೂ ಇತರೆ ವ್ಯವಸ್ಥೆಗಳಲ್ಲಿಅನಾನೂಕೂಲತೆಗಳುಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಯಾರಿಗೆ ಬೇರೆತಿಂಗಳುಗಳಲ್ಲಿ ನಡೆಯುವ ಶಿಬಿರಗಳಿಗೆ ಬರಲು ಅವಕಾಶವಿದೆಯೋ ಅಂತಹವರುಮೇ-ಜುಲೈ ತಿಂಗಳುಗಳಲ್ಲಿ ಬರದಿರುವುದು ಒಳ್ಳೆಯದು.
5.2-3 ತಿಂಗಳುಗಳಿಗೆ ಮೊದಲೇ ಶಿಬಿರಕ್ಕೆ ಬರುವುದರ ಬಗ್ಗೆ ಮಾಹಿತಿನೀಡಿ ಅನುಮತಿ ಪಡೆಯಬೇಕು. ನಿವೇದನಾ ಪತ್ರದ ನಮೂನೆಯನ್ನು ಮುಂದಿನಪುಟದಲ್ಲಿ ನೀಡಲಾಗಿದೆ. ಇದೇ ಮಾದರಿಯಲ್ಲಿಯೇ ವಿವರಗಳನ್ನು ಭರ್ತಿ ಮಾಡಿಕಳುಹಿಸಿರಿ. ಇದರದೇ ಫೋಟೋ ಕಾಪಿಯಾಗಲೀ ಅಥವಾ ಸುಂದರವಾದ ಸ್ಪಷ್ಟವಾದಕೈಬರಹದಿಂದಾಗಲೀ ಬರೆದು ಕಳುಹಿಸಬಹುದು.

ನಿವೇದನಾ ಪತ್ರ
(ಒಂದು ತಿಂಗಳ ಯುಗಶಿಲ್ಪಿ/ ಪರಿವ್ರಾಜಕ ಶಿಬಿರಕ್ಕಾಗಿ)

(ಸುಂದರವಾದ ಅಕ್ಷರಗಳಲ್ಲಿ ಬರೆದಾಗಲೀ ಅಥವಾ ಫೋಟೋ ಕಾಪಿಯಲ್ಲಾಗಲೀಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ತುಂಬಿ ಕಳುಹಿಸಬೇಕು.)
ಅ. ಕೇವಲ ಪುರುಷರಷ್ಟೇ ಅರ್ಜಿಯನ್ನು ಕಳುಹಿಸಬಹುದು. ಮಹಿಳೆಯರುಮತ್ತು ಅವಿವಾಹಿತ ಕನ್ಯೆಯರು ತಮ್ಮ ಪೋಷಕರೊಂದಿಗೆ ಬರಬೇಕು.
ಬ. ಪರಿವ್ರಾಜಕ ಶಿಬಿರಕ್ಕೂ ಮೊದಲು 1 ತಿಂಗಳ ಯುಗಶಿಲ್ಪಿ ಶಿಬಿರವನ್ನುಪೂರೈಸುವುದು ಕಡ್ಡಾಯ.
ಕ. ಶಿಬಿರದ ಸ್ವೀಕೃತಿ ಪತ್ರವನ್ನು ಪ್ರತ್ಯೇಕವಾಗಿ ಅಪೇಕ್ಷಿಸುವವರು ತಮ್ಮ-ತಮ್ಮ ನಿವೇದನಾ ಅರ್ಜಿಯನ್ನು ಬೇರೆ ಬೇರೆಯಾಗಿಯೇ ಭರ್ತಿ ಮಾಡಿ ಒಂದೇಲ ಕೋಟೆಯಲ್ಲಿಟ್ಟು ಕಳುಹಿಸಬಹುದು.
South centre’s Contact No.
Banglore: Yug Shakti Gayatri Kendra  (080)  23526694, 09341341498
Hyderabad:     (040)  55448494,  09392506888,
Chennai: (044) 5543122, 30976764   Vishakpatnam: (0891)  2760873,
Vijayawada : (0866)  5516570   Madhurai: (0452) 5372349, 9894198822
Coimbatore:   (0422) 5533653,    09842255206

ನಿವೇದನಾ ಪತ್ರ
1.    ಹೆಸರು : …………………………………………………………………………………………….
2.    ತಂದೆಯ / ಪತಿಯ ಹೆಸರು ………………………………………………………………

ಪತ್ರ ವ್ಯವಹಾರದ ಪೂರ್ಣ ವಿಳಾಸ   ಗ್ರಾಮ: ………………………………ಅಂಚೆ : ………………………………………………..

ಜಿಲ್ಲೆ : ………………………………… ಪಿನ್ ಸಂ………………………………………….

ಪ್ರಾಂತ : ……………………………………………………………………………………..   ಎಸ್.ಟಿ.ಡಿ.ಸಂ: ……………………..

ಫೋನ್ ನಂ: ………………………..
3.     ವಯಸ್ಸು …………………….ಶಿಕ್ಷಣ …………………………………………………………

ವೃತ್ತಿ ………………………………………………………
4.    ಭಾಗವಹಿಸಲು ಆಯ್ಕೆ ಮಾಡಿದ ತಿಂಗಳು 1 ……………. ಅಥವಾ 2…………… ಅಪೇಕ್ಷಿತ ಶಿಬಿರ(?) (ಯುಗಶಿಲ್ಪಿ/ ಪರಿವ್ರಾಜಕ)
5.    ಗಾಯತ್ರಿ ಮಂತ್ರದ ದೀಕ್ಷೆಯನ್ನು  ಪಡೆದ ವರ್ಷ…………… ಸ್ಥಳ……………..
6.    ಉಪಾಸನಾ- ಸಾಧನೆಯ ನಿಯಮಿತ ಕ್ರಮ ಹೇಗೆ ನಡೆದಿದೆ?
7.    ಇದುವರೆಗೆ ಮಾಡಿದ ಅನುಷ್ಠಾನಗಳು …………………………………………………. ಎಷ್ಟು ಬಾರಿ ಮಾಡಲಾಗಿದೆ?
8.    ಶಾಂತಿಕುಂಜದಲ್ಲಿ ಯಾವ್ಯಾವ ಶಿಬಿರಗಳಲ್ಲಿ ಯಾವ್ಯಾವಾಗ ಭಾಗವಹಿಸಿದ್ದೀರಿ? ( 9 ದಿನಗಳ ಸಾಧನಾ ಶಿಬಿರ, ಯುಗ ಶಿಲ್ಪಿ, ಪರಿವ್ರಾಜಕ, ಅಂತಃ ಊರ್ಜಾ ಜಾಗರಣ, ರಚನಾತ್ಮಕ ……………………………………)
9.    ಮಿಶನ್ನಿನ ಯಾವ ಪತ್ರಿಕೆಗಳಿಗೆ ಚಂದಾದಾರರಾಗಿದ್ದೀರಿ?  ಎಂದಿನಿಂದ ?( ಅಖಂಡ ಜ್ಯೋತಿ, ಯುಗ ನಿರ್ಮಾಣ ಯೋಜನೆ, ಪ್ರಜ್ಞಾ ಅಭಿಯಾನ ಪಾಕ್ಷಿಕ, ಯುಗಶಕ್ತಿ ಗಾಯತ್ರಿ, ಯುಗ ಸಾಧನಾ ಮೊದಲಾದವುಗಳು).
10. ಕ್ಷೇತ್ರದಲ್ಲಿ ಮಿಶನ್ನಿನ ಚಟುವಟಿಕೆಗಳಲ್ಲಿ ನಿಮ್ಮ ಸಹಯೋಗಹೇಗಿದೆ?……………………………………………………………..
ಶಿಬಿರದ ಎಲ್ಲಾ ಕಠಿಣ ಅನುಶಾಸನವನ್ನು ಪಾಲಿಸುತ್ತೇನೆ.ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಆರೋಗ್ಯವಾಗಿದ್ದೇನೆಂದು ಆಶ್ವಾಸನೆಯನ್ನುನೀಡುತ್ತೇನೆ.
ಆವೇದಕರಹೆಸರು : ……………………………………….
ದಿನಾಂಕ  : …………………………….            ಸಹಿ……………………………