ಸಂಸ್ಕಾರ

ಸಂಸ್ಕಾರ

Sanskar

ಹೊಸ ಪೀಳಿಗೆಯಲ್ಲಿ ಶ್ರೇಷ್ಠ ಮಾನವ ಯೋಗ್ಯ ಗುಣಗಳನ್ನು ತುಂಬಿರಿ.ಭಾರತ ದೇಶದ ವಿಶೇಷವೆಂದರೆ ಇಲ್ಲಿ ತನ್ನ ಪಿತ್ರಾರ್ಜಿತ ಸಂಪತ್ತಾಗಿ  ಸಾಂಸ್ಕøತಿಕ  ಆಧಾರದಲ್ಲಿಶ್ರೇಷ್ಠ ವ್ಯಕ್ತಿತ್ವವುಳ್ಳ ನರರತ್ನರನ್ನು ಬಹು ದೊಡ್ಡ ಪ್ರಮಾಣದಲ್ಲಿ ವಿಕಾಸ ಮಾಡಲಾಗುತ್ತಿದೆ. ಈಕಾರಣಕ್ಕಾಗಿಯೇ ನಮ್ಮೀ ದೇಶವನ್ನು  ಮೂವತ್ತಮೂರು ಕೋಟಿ  ದೇವಿ-ದೇವತೆಯರ ನಾಡು,ಜಗದ್ಗುರು ಇತ್ಯಾದಿಯಾಗಿ ಕರೆಯಲಾಗುತ್ತಿದೆ.ಭಾರತದ ಋಷಿ-ಮುನಿಗಳ ಅನುಭವವೆಂದರೆ ಮನುಷ್ಯರು ತಮ್ಮಲ್ಲಿ ಅಪರಿಮಿತವಾದ ಶಕ್ತಿಯನ್ನುವಿಕಾಸ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ  ಹೀಗೆ ವಿಕಾಸವಾದ ಸಾಮಥ್ರ್ಯವು ಸರಿಯಾದದಿಕ್ಕಿನಲ್ಲಿ ಹರಿದರೆ ಅದು ವ್ಯಕ್ತಿ ಮತ್ತು ಸಮಾಜಗಳೆರಡನ್ನೂ ಸಂಪನ್ನಗೊಳಿಸುತ್ತದೆ.  ಆದರೆದಿಶಾಧಾರೆಯೇ ತಪ್ಪಿದರೆ ವ್ಯಕ್ತಿ ಮತ್ತು ಸಮಾಜಗಳಿಗೆ ಹಾನಿಯನ್ನು ತರುತ್ತದೆ. ಇಲ್ಲಿ ಮುಖ್ಯಸಂಗತಿಯೆಂದರೆ ಮನುಷ್ಯನು ಇಚ್ಛಿತ ಮಾರ್ಗದಲ್ಲಿ ನಡೆಯುವಾಗ ಕೇವಲ ಹೊರಗಿನ ಒತ್ತಡಗಳೇಕೆಲಸ ಮಾಡುವುದಿಲ್ಲ. ಅವನ ಅಂತರಂಗದಲ್ಲಿ ಸರಿಯಾದ ಮಾರ್ಗದತ್ತ ನಡೆಯಲು ಉತ್ಸಾಹಮತ್ತು ಸಂಕಲ್ಪಗಳು ಏಳಬೆಕಾಗುತ್ತದೆ. ಈ ಕಾರಣದಿಂದಲೇ ಋಷಿ-ಮುನಿಗಳು ಮನುಷ್ಯನ ಗುಣ-ಕರ್ಮ-ಸ್ವಭಾವಗಳನ್ನು, ಸಮಗ್ರ ವ್ಯಕ್ತಿತ್ವವನ್ನು ಪರಿಷ್ಕøತ ಮತ್ತು ಸುಸಂಸ್ಕತಗೊಳಿಸಲು ಅತಿ ಹೆಚ್ಚಿನಮಹತ್ವವನ್ನು ನೀಡಿದರು.ಸಂಸ್ಕಾರದ ಅರ್ಥವೆಂದರೆ ಜೀವನವನ್ನು ಸುಂದರ-ಸುವ್ಯವಸ್ಥಿತಗೊಳಿಸುವದು. ಕುಶಲನಾದಮಾಲಿಯು ಗಿಡಗಳಿಗೆ ನೀರುಗೊಬ್ಬರಗಳನ್ನು ಉಣಿಸಿ ಅಗತ್ಯವಿದ್ದಲ್ಲಿ ಕತ್ತರಿಸಿ ಅದನ್ನು ಸುಂದರವಾಗಿಇರಿಸುತ್ತಾನೆ. ಮನುಷ್ಯ ಜೀವನವನ್ನು ಸುಂದರ ಮಾಡಲು ಆತನ ಭಾವ, ವಿಚಾರ, ಸಂಕಲ್ಪ, ವ್ಯವಹಾರಹಾಗೂ ಅಭ್ಯಾಸಗಳನ್ನು ಪರಿಷ್ಕಾರ ಮಾಡಬೇಕಾಗುತ್ತದೆ. ಈ ಸೂಕ್ಷ್ಮ ಹಾಗೂ ಗೂಢ ಪ್ರಕ್ರಿಯೆಯನ್ನುಎಲ್ಲರಿಗೂ ಸಹಜ-ಸುಲಭ ಮಾಡಲು ಋಷಿಗಳು ಸಂಸ್ಕಾರ ಪ್ರಕ್ರಿಯೆಯನ್ನು ವಿಕಾಸ ಮಾಡಿ ಆಚರಣೆಗೆತಂದರು. ಅವರು ಬದುಕಿನ ಪ್ರತಿಯೊಂದು ತಿರುವಿಗೂ ಒಂದೊಂದು ಸಂಸ್ಕಾರಗಳನ್ನು ನಿರ್ಧರಿಸಿದರು.ಪ್ರತ್ಯಕ್ಷ ಕ್ರಿಯೆಗಳಲ್ಲಿ ಆಧ್ಯಾತ್ಮಿಕ, ಆಧಿಭೌತಿಕ, ಮತ್ತು ಮನೋವೈಜ್ಞಾನಿಕ ಸೂತ್ರಗಳ ಪ್ರಕ್ರಿಯೆಗಳನ್ನುಕುಶಲತೆಯಿಂದ ಸೇರಿಸಿ ವಿಭಿನ್ನ ಸಂಸ್ಕಾರಗಳಿಗೆ ಪ್ರಭಾವೀ ಸ್ವರೂಪವನ್ನು ನೀಡಿದರು. ಸಂಸ್ಕಾರದ ಈಕ್ರಮವು ಗರ್ಭದಾನ ಸಂಸ್ಕಾರದಿಂದ ಹಿಡಿದು ಮರಣೋತ್ತರ ಸಂಸ್ಕಾರಗಳವರೆಗೂ ನಡೆಯುತ್ತದೆ.ನಮ್ಮ ಆರ್ಷಗ್ರಂಥ ಹಾಗೂ ಧರ್ಮಸೂತ್ರಗಳಲ್ಲಿ  ಒಟ್ಟು ನಲ್ವತ್ತಾರು ಸಂಸ್ಕಾರಗಳಿವೆ. ಆದರೆಬಹಳ ದೀರ್ಘ ಸಮಯದಿಂದಲೂ ಷೋಡಶ ಸಂಸ್ಕಾರಗಳ ಪ್ರಚಲನೆಯು  ನಡೆದುಬಂದಿದೆ. ಈಸಂಸ್ಕಾರಗಳ ಪುಣ್ಯ ಪರಂಪರೆಯು ಯಾವುದೇ ಅಡ್ಡಿ-ಆತಂಕಗಳಿಲ್ಲದೆ ನಡೆದಷ್ಟು ಕಾಲವೂ ನರರತ್ನರನ್ನುವಿಕಾಸ ಮಾಡುವ ಕಾರ್ಯವು ತಡೆರಹಿತವಾಗಿ ಸಾಗಿತು. ಯಾವಾಗ ಈ ಪರಂಪರೆಯೇ ಲುಪ್ತವಾಯಿತೋ,ಮರೆಯಾಗಿ ಹೋಯಿತೋ ಅಂದಿನಿಂದ ಜನರ ವ್ಯಕ್ತಿತ್ವವು ಅತ್ಯಂತ ಕುಬ್ಜವಾಗಿ, ನಿರಾಶಜನಕವಾಗಿ,ನಿರ್ಜೀವ, ಸಂಕೀರ್ಣ ಸ್ವಾರ್ಥಗಳಿಗೆ ಒಳಗಾಗಿ ಒಬ್ಬರು ಇನ್ನೊಬ್ಬರನ್ನು ಶೋಷಿಸುವ ವ್ಯಕ್ತಿತ್ವಗಳಸಂಖ್ಯೆಯೆ ಹೆಚ್ಚಿತು. ಚಿಹ್ನಪೂಜೆಯ ರೂಪದಲ್ಲಿ ಸಂಸ್ಕಾರಗಳು ಇಂದಿಗೂ ಅಲ್ಲಲ್ಲಿ ಕಂಡುಬರುತ್ತವೆ.ಆದರೆ ಇದರಿಂದ ವಿಶೇಷ ಪ್ರಯೋಜನವಿಲ್ಲ. ಏಕೆಂದರೆ ಅವುಗಳಲ್ಲಿ ವ್ಯಕ್ತಿತ್ವಕ್ಕೆ ಪ್ರೇರಣೆಕೊಡುವಂತಹಪ್ರಭಾವವುಳ್ಳ ಲೋಕಶಿಕ್ಷಣ ಇಲ್ಲ.  ಇವುಗಳ ಹೆಸರಲ್ಲಿ ಮಾಡುವ ದುಂದುವೆಚ್ಚವು ಅನಗತ್ಯ ಹೊರೆಆಗುತ್ತಿದೆ.ಯುಗ ಋಷಿಯವರು (ವೇದಮೂರ್ತಿ ತಪೋನಿಷ್ಠ ಪಂ. ಶ್ರೀರಾಮ ಶವರ್i ಆಚಾರ್ಯ) ಈಯುಗದ ಎಲ್ಲಾ ಸಮಸ್ಯೆಗಳನ್ನು ಅಧ್ಯಯನ ಮಾಡಿದರು. ಇವುಗಳಿಗೆ ಸಮಯೋಚಿತ ಪರಿಹಾರವನ್ನುಕಂಡುಹಿಡಿದರು. ಈ ನಿಟ್ಟಿನಲ್ಲಿ ಅವರು ಸಂಸ್ಕಾರ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸಿ ಅಭಿಯಾನವನ್ನುಹುಟ್ಟುಹಾಕಿದರು. ಅವರು ಸಂಸ್ಕಾರಗಳಿಗೆ ವಿವೇಕ ಮತ್ತು ವಿಜ್ಞಾನ ಸಮ್ಮತ ಸ್ವರೂಪ ನೀಡಿದರು.ಜೊತೆಗೆ ಪ್ರಖರವಾದ ಜನಶಿಕ್ಷಣವನ್ನು ಸೇರಿಸಿದರು. ಕರ್ಮಕಾಂಡಗಳು ಎಲ್ಲರಿಗೂ ಸುಲಭವಾಗುವಂತೆ,ಪ್ರಭಾವಿ ಮತ್ತು ಕಡಿಮೆ ವೆಚ್ಚದ್ದಾಗುವಂತೆ ರೂಪಿಸಿದರು. ಯುಗನಿರ್ಮಾಣ ಅಭಿಯಾನದಡಿಯಲ್ಲಿಇದರ ಸಫಲ ಪ್ರಯೋಗವು ಬಹು ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಇದಕ್ಕಾಗಿ ಅವರು ಪ್ರಚಲಿತ ಸಂಸ್ಕಾರಗಳಲ್ಲಿ ವರ್ತಮಾನ ಸಮಯಕ್ಕೆ ಅನುಕೂಲವಾಗುವಂತೆ ಕೇವಲ ಹನ್ನೆರಡು ಸಂಸ್ಕಾರಗಳು(ಪುಂಸವನ, ನಾಮಕರಣ, ಚೂಡಾಕರ್ಮ- ಶಿಖಾ ಸ್ಥಾಪನೆ, ಅನ್ನಪ್ರಾಶನ, ವಿದ್ಯಾರಂಭ, ದೀಕ್ಷೆ, ಯಜ್ಞೋಪವೀತ,ವಿವಾಹ, ವಾನಪ್ರಸ್ಥ, ಅಂತ್ಯೇಷ್ಠಿ, ಮರಣೋತ್ತರ, ಜನ್ಮದಿವಸೋತ್ಸವ ಮತ್ತು ವಿವಾಹ ದಿವಸೋತ್ಸವ)ಸಾಕಾಗುವುದೆಂದು ತಿಳಿಸಿದ್ದಾರೆ. ಈ ಸಂಸ್ಕಾರಗಳನ್ನು ಸರಿಯಾದ ಸಮಯದಲ್ಲಿ  ಸರಿಯಾದ ವಾತಾವರಣದಲ್ಲಿಮಾಡುವುದರಿಂದ, ಮಾಡಿಸಿಕೊಳ್ಳುವುದರಿಂದ  ಜನರಿಗೆ ಅಸಾಧಾರಣ ಲಾಭವಾಗುತ್ತದೆ. ಇದರ ಸಂಕ್ಷಿಪ್ತವಿವರಣೆ ಹೀಗಿದೆ.

1. ಪುಂಸವನ (ಗರ್ಭ ಸಂಸ್ಕಾರ)-ಸಂಸ್ಕಾರ ಪರಂಪರೆಯಡಿಯಲ್ಲಿ ಭಾವಿ ತಂದೆ-ತಾಯಿಯರಿಗೆ ಅವರುಶಾರೀರಿಕವಾಗಿ, ಮಾನಸಿಕವಾಗಿ ಪರಿಪಕ್ವರಾದ ನಂತರವೇ ಸಮಾಜಕ್ಕೆ ಶ್ರೇಷ್ಠ, ತೇಜಸ್ವಿ ಹೊಸ ಪೀಳಿಗೆಯನ್ನುಕೊಡುವ ಸಂಕಲ್ಪದೊಂದಿಗೆ ಸಂತಾನ ಉತ್ಪತ್ತಿಗೆ ಹೆಜ್ಜೆಯಿರಿಸಬೇಕೆಂದು ತಿಳಿಸಲಾಗುತ್ತದೆ. ಗರ್ಭವುನಿಂತ ನಂತರ ಭಾವಿ ತಾಯಿಯು ಆಹಾರ, ಆಚಾರ, ವ್ಯವಹಾರ, ಚಿಂತನೆ, ಭಾವನೆಗಳೆಲ್ಲವೂ ಶ್ರೇಷ್ಠಮತ್ತು ಸಮತೋಲನದಲ್ಲಿರುವಂತೆ ಪ್ರಯತ್ನ ನಡೆಸಬೇಕು. ಇದಕ್ಕಾಗಿ ಅನುಕೂಲಕರ ವಾತಾವರಣವನ್ನುನಿರ್ಮಿಸಬೇಕು. ಗರ್ಭದ ಮೂರನೇ ತಿಂಗಳಿನಲ್ಲಿ ಪುಂಸವನ ಸಂಸ್ಕಾರವನ್ನು ವಿಧಿವತ್ತಾಗಿ ಮಾಡಬೇಕು.ಏಕೆಂದರೆ ಈ ಸಮಯದಲ್ಲಿ ಗರ್ಭಸ್ಥ ಶಿಶುವಿನ ವಿಚಾರ ವ್ಯವಸ್ಥೆಯು ವಿಕಾಸವಾಗಲಾರಂಭಿಸುತ್ತದೆ.ವೇದ ಮಂತ್ರಗಳು, ಯಜ್ಞದ ವಾತಾವರಣ, ಮತ್ತು ಸಂಸ್ಕಾರ ಸೂತ್ರಗಳ ಪ್ರೇರಣೆಗಳು ಶಿಶುವಿನ ಮನದಮೇಲೆ ಪ್ರಭಾವ ಬೀರುತ್ತದೆ.  ಜೊತೆಗೇ ಅದರ ಪಾಲಕರು ಮತ್ತು ಬಂಧುಗಳು ಭಾವಿ ತಾಯಿಯನ್ನುಒಳ್ಳೆಯ ಮನಸ್ಥಿತಿಯಲ್ಲಿ ಉತ್ತಮ ವಾತಾವರಣದಲ್ಲಿ ಪೋಷಿಸುವಂತೆ ಪ್ರೇರಣೆ ನೀಡುತ್ತದೆ.

2. ನಾಮಕರಣ:- ಮಗುವಿಗೆ ಹೆಸರನ್ನಿಡುವುದು ಕೇವಲ ಅದನ್ನು ಗುರುತಿಸಲೆಂದು ಮಾತ್ರವಲ್ಲ.ಮನೋವಿಜ್ಞಾನಿಗಳು ಮತ್ತು ಅಕ್ಷರ ವಿಜ್ಞಾನಿಗಳ ಅಭಿಪ್ರಾಯದಲ್ಲಿ ವ್ಯಕ್ತಿಯ ಸ್ಥೂಲ ಮತ್ತು ಸೂಕ್ಷ್ಮವ್ಯಕ್ತಿತ್ವದ ಮೇಲೆ ಹೆಸರು ಆಳವಾದ ಪ್ರಭಾವವನ್ನು ಬೀರುತ್ತದೆ. ಸರಿಯಾಗಿ ಯೋಚಿಸಿ ಹೆಸರನ್ನು ಆಯ್ಕೆಮಾಡಬೇಕು. ಹಾಗೆಯೇ ಆ ಹೆಸರನ್ನು ಬೆಳಗುವಂತಹ ಗುಣವನ್ನು ವಿಕಾಸ ಮಾಡುವುದರತ್ತಲೂಗಮನ ಹರಿಸಬೇಕು. ನಾಮಕರಣ ಸಂಸ್ಕಾರದಲ್ಲಿ ಈ ಶ್ರೇಷ್ಠ ಸೂತ್ರಗಳಿವೆ.

3. ಚೂಡಾಕರ್ಮ (ಚೌಲ, ಜುಟ್ಟು, ಶಿಖೆ.) :-ಸಾಮಾನ್ಯ ದೃಷ್ಟಿಯಿಂದ ಮಗು ಹುಟ್ಟುವಾಗ ಇದ್ದ ಕೂದಲನ್ನುತೆಗೆದು ತಲೆಬುರುಡೆಯನ್ನು ಶುದ್ಧಿ ಮಾಡಬೇಕಾಗುತ್ತದೆ. ಸೂಕ್ಷ್ಮವಾಗಿ ನೋಡಿದರೆ ಮಗುವಿಗೆ ವ್ಯವಸ್ಥಿತವಾದಬೌದ್ಧಿಕವಿಕಾಸ, ಕೆಟ್ಟಸಂಸ್ಕಾರಗಳ ಉಚ್ಚಾಟನೆ ಹಾಗೂ ಶ್ರೇಷ್ಠ ವಿಚಾರಗಳ ವಿಕಾಸಗಳು ಅವಶ್ಯಕವಾಗಿದೆ.ಸ್ಥೂಲ ಮತ್ತು ಸೂಕ್ಷ್ಮ ಉದ್ದೇಶಗಳೆರಡನ್ನೂ ಒಟ್ಟುಗೂಡಿಸಿ ಈ ಸಂಸ್ಕಾರವನ್ನು ಮಾಡಲಾಗುತ್ತದೆ.ಇದರೊಂದಿಗೆ ಶಿಖೆ (ಜುಟ್ಟು)ಯನ್ನು ಬಿಡುವುದೂ ಸೇರಿದೆ. ನಾವು ಶ್ರೇಷ್ಠ ಋಷಿಸಂತತಿಯಅನುಯಾಯಿಗಳಾಗಿದ್ದೇವೆ. ನಾವು ಶ್ರೇಷ್ಠವಾದ ಆದರ್ಶಗಳಲ್ಲಿ ನಿಷ್ಠೆಯನ್ನು ಇರಿಸಲಿಕ್ಕಾಗಿ ನಿರಂತರಪ್ರಯತ್ನಿಸಬೇಕಾಗಿದೆ. ಈ ಸಂಕಲ್ಪವನ್ನು ಸದಾ ನೆನಪಿನಲ್ಲಿಡಲೆಂದು ಪ್ರತೀಕದ ರೂಪದಲ್ಲಿ ದೇಹದಸವೋಚ್ಛಭಾಗವಾದ ತಲೆಯ ಮೇಲೆ ಸಂಸ್ಕತಿಯ ಧ್ವಜದ ರೂಪದಲ್ಲಿ ಜುಟ್ಟನ್ನು ಇಡಲಾಗುತ್ತದೆ.

4.ಅನ್ನಪ್ರಾಶನ:- ಮಗುವಿಗೆ ಹಲ್ಲು ಬರಲಾರಂಭಿಸಿದೆಯೆಂದರೆ ಪ್ರಕೃತಿಯು ಮಗುವಿಗೆ ಗಟ್ಟಿ ಆಹಾರ,ಅನ್ನವನ್ನು ತಿನ್ನಲು ಒಪ್ಪಿಗೆ ಕೊಟ್ಟಿದೆ ಎಂದರ್ಥ. ಸ್ಥೂಲ ಶರೀರದ(ಅನ್ನಮಯಕೋಶ) ವಿಕಾಸಕ್ಕಾಗಿವಿಜ್ಞಾನ ಸಮ್ಮತ ಆಹಾರದ ಅರಿವು ಇರಬೇಕು. ಇದು ಎಲ್ಲರೂ ತಿಳಿದಿರುವ ವಿಷಯ. ಸೂಕ್ಷ್ಮವಿಜ್ಞಾನದ ಪ್ರಕಾರ ಅನ್ನದ ಸಂಸ್ಕಾರದ ಪ್ರಭಾವವು ವ್ಯಕ್ತಿಯ ಮನಸ್ಸಿನ ಮೇಲೂ ಆಗುತ್ತದೆ. ಏನನ್ನುತಿನ್ನಲಾಗಿತ್ತೋ ಅದೇ ಮನವಾಯಿತು ಎಂಬ ಉಕ್ತಿಯೂ ಇದೆ. ಆದ್ದರಿಂದ ಆಹಾರವು ಸತ್ವಯುತಆಗಿರುವುದರ ಜೊತೆಗೆ ಶುದ್ಧ ಮತ್ತು ಸಂಸ್ಕಾರಪೂರ್ಣವೂ ಆಗಿರಬೇಕು. ಇದಕ್ಕಾಗಿ ಮಗುವಿನ ಪಾಲಕರು,ಬಂಧುಗಳನ್ನು ಜಾಗೃತ ಮಾಡುವುದು ಅಗತ್ಯ. ಅನ್ನವನ್ನು ವ್ಯಸನದಂತೆ ಅಲ್ಲ, ಔಷಧಿ ಮತ್ತು ಪ್ರಸಾದಗಳರೂಪದಲ್ಲಿ ಸ್ವೀಕರಿಸಲಿ ಎಂಬ ಸಂಕಲ್ಪದೊಂದಿಗೆ ಅನ್ನಪ್ರಾಶನ ಸಂಸ್ಕಾರವನ್ನು ಮಾಡಲಾಗುತ್ತದೆ.

5.ವಿದ್ಯಾರಂಭ :-ಮಕ್ಕಳು ಶಿಕ್ಷಣವನ್ನು ಪಡೆಯಲು ಯೋಗ್ಯವಾದ ವಯಸ್ಸಿಗೆ ಬಂದಂತೆ ವಿದ್ಯಾರಂಭಸಂಸ್ಕಾರವನ್ನು ಮಾಡಿಸಲಾಗುತ್ತದೆ. ಇಲ್ಲಿ ಉತ್ಸವದ ಮೂಲಕ ಮಗುವಿನಲ್ಲಿ ಅಧ್ಯಯನದ ಬಗ್ಗೆಉತ್ಸಾಹವನ್ನು ಹುಟ್ಟುಹಾಕಲಾಗುತ್ತದೆ. ಪಾಲಕರು ಮತ್ತು ಶಿಕ್ಷಕರುಗಳಿಗೆ ಮಗುವಿಗೆ ಅಕ್ಷರ ಜ್ಞಾನ,ವಿಷಯ ಜ್ಞಾನಗಳ ಜೊತೆಗೇ ಶ್ರೇಷ್ಠ ಜೀವನದ ಸೂತ್ರಗಳನ್ನು ತಿಳಿಸಬೇಕೆಂಬ ಅವರ ಹೊಣೆಗಾರಿಕೆಯನ್ನು ನೆನಪಿಸಲಾಗುತ್ತದೆ.

6. ದೀಕ್ಷೆ-ಯಜ್ಞೋಪವೀತ :-ಮಕ್ಕಳು ತಮ್ಮ ವಿಕಾಸವನ್ನು ಸ್ವತಃ ಮಾಡಿಕೊಳ್ಳಲು ಯೋಗ್ಯವಾಗುವಂತಹಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯ ಹಂತಕ್ಕೆ ಬಂದಾಗ ಅವರು ಶ್ರೇಷ್ಠ ಆಧ್ಯಾತ್ಮಿಕ ಹಾಗೂಸಾಮಾಜಿಕ ಅನುಶಾಸನಗಳಿಗೆ ಒಳಪಡಲೆಂಬ ಉದ್ದೇಶದಿಂದ ಈ ಸಂಕಲ್ಪವನ್ನು ಮಾಡಿಸಲಾಗುತ್ತದೆ.ದೀಕ್ಷೆಯ ಅರ್ಥವೆಂದರೆ ಯಾವುದಾದರೋ ಶ್ರೇಷ್ಠ ಧ್ಯೇಯವನ್ನು ತಲುಪುವವರೆಗೆ ಸುನಿಶ್ಚಿತ ಸಂಕಲ್ಪದೊಂದಿಗೆನಿರ್ಧಾರಿತ ಸಾಧನೆಯಲ್ಲಿ ತೊಡಗುವುದು. ಮನುಷ್ಯನು ಸಾಂಸಾರಿಕ ಕೆಲಸಗಳಲ್ಲಿ ಸಿಕ್ಕಿಕೊಂಡು ಜೀವನದಶ್ರೇಷ್ಠ ಲಕ್ಷ್ಯವನ್ನು ಮರೆಯದಿರಲಿ, ಲೌಕಿಕವಲ್ಲದೆ ಆಧ್ಯಾತ್ಮಿಕ ಗುರಿಯತ್ತಲೂ ಜಾಗರೂಕನಾಗಿರಲಿ ಎಂಬದೃಷ್ಟಿಯಿಂದ ದೀಕ್ಷಾ ಸಂಸ್ಕಾರವನ್ನು ಮಾಡಲಾಗುತ್ತದೆ. ತನ್ನ ಬದುಕಿನಲ್ಲಿ ಕರ್ಮಗಳನ್ನು ಶ್ರೇಷ್ಠವಾದಯಜ್ಞೀಯ ಭಾವನೆಯಿಂದ ಮಾಡಲಿ ಎಂಬ ಸಂಕಲ್ಪದಿಂದ  ಯಜ್ಞೋಪವೀತ ಸಂಸ್ಕಾರವನ್ನು ಮಾಡಿಸಲಾಗುತ್ತದೆ.ಪುರಾತನ ಕಾಲದಲ್ಲಿ ಈ ಎರಡೂ ಸಂಸ್ಕಾರಗಳು ಗುರುಕುಲಗಳಲ್ಲಿ ಏಕಕಾಲದಲ್ಲಿ ಆಗುತ್ತಿದ್ದಿತು. ಇಂದುಪರಿಸ್ಥಿತಿ ಮತ್ತು ಮನಃಸ್ಥಿಗಳಿಗೆ ಅನುಸಾರವಾಗಿ ಇವುಗಳನ್ನು ಬೇರೆ-ಬೇರೆಯಾಗಿ ಅಥವಾ ಒಟ್ಟಾಗಿಮಾಡಲಾಗುತ್ತದೆ.

ವಿವಾಹ :-ಸದ್ಗಹಸ್ಥರಾಗಿ ಕುಟುಂಬದ ನಿರ್ಮಾಣ ಮತ್ತು ನಿರ್ವಹಣೆಯನ್ನು ಮಾಡಲು ಯೋಗ್ಯವಾದಶಾರೀರಿಕ, ಮಾನಸಿಕ ಪರಿಪಕ್ವತೆಯು ಬಂದಾದ ನಂತರ ಯುವಕ/ ಯುವತಿಯರಿಗೆ ವಿವಾಹ ಸಂಸ್ಕಾರಗಳನ್ನುಮಾಡಲಾಗುತ್ತದೆ. ಇಲ್ಲಿ ದಾಂಪತ್ಯಕ್ಕೆ ಒಂದು ಶ್ರೇಷ್ಠ ಆಧ್ಯಾತ್ಮಿಕ ಸಾಧನೆಯ ರೂಪವನ್ನು ನೀಡಲಾಗಿದೆ.ಆದ್ದರಿಂದಲೇ ‘ಧನ್ಯೋ ಗೃಹಸ್ಥಾಶ್ರಮಃ‘ ಎಂದು  ಹೇಳಲಾಗಿದೆ. ಸದ್ಗøಹಸ್ಥರೇ ಸಮಾಜಕ್ಕೆ ಅನುಕೂಲಕರವಾದವ್ಯವಸ್ಥೆ ಮತ್ತು ವಿಕಾಸಗಳಿಗೆ ಸಹಾಯಕರಾಗುವುದರೊಂದಿಗೆ ಹೊಸ ಪೀಳಿಗೆಯನ್ನು ನಿರ್ಮಾಣ ಮಾಡುತ್ತಾರೆ.ಅವರು ತಮ್ಮ ಸಂಪನ್ಮೂಲಗಳಿಂದ ಬ್ರಹ್ಮಚರ್ಯ, ವಾನಪ್ರಸ್ಥ ಮತ್ತು ಸಂನ್ಯಾಸ ಆಶ್ರಮಗಳಿಗೆ ಅಗತ್ಯವಾದಅನುಕೂಲಗಳನ್ನು ಒದಗಿಸುತ್ತಿರುತ್ತಾರೆ. ಇಂತಹ ಸದ್ಗಹಸ್ಥರ ನಿರ್ಮಾಣಕ್ಕಾಗಿ ವಿವಾಹದಲ್ಲಿ ನುಸುಳಿರುವಕೆಟ್ಟ ರೂಢಿಗಳನ್ನು ತೊಡೆದು ಹಾಕಿ ಶ್ರೇಷ್ಠ ಸಂಸ್ಕಾರದ ರೂಪದಲ್ಲಿ ಇದರ ಪುನರ್ ಪ್ರತಿಷ್ಠಾಪನೆಮಾಡಬೇಕಾಗಿದೆ. ಯುಗ ನಿರ್ಮಾಣ ಅಭಿಯಾನದ ವಿವಾಹ ಸಂಸ್ಕಾರವು ಕುಟುಂಬದ ಸ್ತರದಲ್ಲಿ ಅಥವಾಸಾಮೂಹಿಕವಾಗಿ ಬಹಳ ಪ್ರಯೋಜನಕಾರಿಯೆಂದು ಸಿದ್ಧವಾಗಿದೆ.

8.ವಾನಪ್ರಸ್ಥ :- ಗೃಹಸ್ಥಾಶ್ರದ ಹೊಣೆಗಾರಿಕೆಯನ್ನು ಆದಷ್ಟೂ ಬೇಗ ಪೂರ್ಣ ಮಾಡಿ ಉತ್ತರಾಧಿಕಾರಿಗಳಿಗೆತಮ್ಮ ಜವಾಬ್ದಾರಿಯನ್ನು ಒಪ್ಪಿಸಿ ತಾವು ಕ್ರಮೇಣ ಸಾಮಾಜಿಕ ಹೊಣೆಗಾರಿಕೆ ಮತ್ತು ಪಾರಮಾರ್ಥಿಕಕಾರ್ಯಗಳಲ್ಲಿ ಪೂರ್ಣ ಪಾಲ್ಗೊಳ್ಳುವುದು. ಇದಾದಾಗಲೇ ಸಮಾಜಕ್ಕೆ ಪರಿಪಕ್ವ ಜ್ಞಾನ ಮತ್ತು ಅನುಭವಸಂಪನ್ನರಾದ ನಿಸ್ಪøಹ ಸಮಾಜಸೇವಕರು ದೊರಕುತ್ತಾರೆ. ಸಮಾಜದಲ್ಲಿ ವ್ಯಾಪಿಸಿರುವ ಕೆಟ್ಟ ದುಷ್ಪ್ರವೃತ್ತಿಗಳನ್ನು,ಕೆಟ್ಟ ಅಭ್ಯಾಸಗಳನ್ನು ನಿವಾರಿಸಿ ಸತ್ಪ್ರವೃತ್ತಿ, ಸತ್ಕರ್ಮಗಳನ್ನು ವಿಕಾಸ ಮಾಡುವ ಜವಾಬ್ದಾರಿಯನ್ನುಚೆನ್ನಾಗಿ ನಿರ್ವಹಿಸಬಹುದಾಗಿದೆ. ಇದೇ ಶ್ರೇಷ್ಠ ಸ್ತರದ ಸಮಾಜ ಸೇವೆಯಾಗಿದೆ. ಪರಮಾರ್ಥವನ್ನುಮಾಡುವುದರಿಂದ ಉನ್ನತ ಮಟ್ಟದ ಆಧ್ಯಾತ್ಮಿಕ ಲಾಭಗಳೂ ಪ್ರಾಪ್ತಿಯಾಗುತ್ತವೆ.

9. ಮರಣ ಜೀವನದ ನಿಶ್ಚಿತ ಸತ್ಯ. ಇದನ್ನು ಮುಪ್ಪಾಗಿ ಜೀರ್ಣಗೊಂಡ ಬದುಕನ್ನು  ಹೊಸದಾದ ಸ್ಫೂರ್ತಿಯುತಜೀವನದಲ್ಲಿ ಪರಿವರ್ತಿಸುವ ಮಹಾನ್ ದೇವತೆಯೆಂದೂ ಕರೆಯಬಹುದು. ಜೀವ ಚೇತನವು ಯಜ್ಞೀಯಪ್ರಕ್ರಿಯೆಯಲ್ಲಿ ಪಂಚ ತತ್ತ್ವಗಳೊಡನೆ ಸೇರಿಕೊಂಡು ಜೀವನದ ದೃಶ್ಯ ರೂಪವನ್ನು ಹೊಂದುತ್ತದೆ.ಪಂಚತ್ತ್ವಗಳೊಡನೆ ಅದು ಬೀಳ್ಕೊಳ್ಳುವಾಗಲೂ ದೇವ ಸಂಸ್ಕøತಿಯು ಅದಕ್ಕೆ ಯಜ್ಞೀಯ ರೂಪವನ್ನುನೀಡಿದೆ. ಇದನ್ನು ಗೌರವಯುತ ರೀತಿಯಲ್ಲಿ ಆಚರಿಸಬೇಕು.

10.ಮರಣೋತ್ತರ (ಶ್ರಾದ್ಧ ಸಂಸ್ಕಾರ):-ಬದುಕು ಒಂದು ತಡೆರಹಿತ ಪ್ರವಾಹವಾಗಿದೆ. ದೇಹವು ಅವಸಾನಗೊಂಡನಂತರವೂ ಜೀವದ ಯಾತ್ರೆಯು ನಿಲ್ಲುವುದಿಲ್ಲ. ಮುಂದಿನ ಚಲನೆಯೂ ಸರಿಯಾದ ದಿಕ್ಕಿನಲ್ಲಿ ಇರಲೆಂದುಮರಣೋತ್ತರ ಸಂಸ್ಕಾರವನ್ನು ಮಾಡಲಾಗುತ್ತದೆ.  ವಿಜ್ಞಾನಿಗಳು ಸೂಕ್ಷ್ಮ ವಿದ್ಯುತ್ ತರಂಗಗಳ ಮೂಲಕದೂರಸ್ಥ ಉಪಕರಣಗಳನ್ನು (ರಿಮೋಟ್ ಕಂಟ್ರೋಲ್) ಚಲಾಯಿಸುತ್ತಾರೆ. ಶ್ರಾದ್ಧವು ಇವುಗಳಿಗಿಂತಲೂಹೆಚ್ಚಿನ ಶಕ್ತಿಯುಳ್ಳ ತರಂಗಗಳನ್ನು ಕಳಿಸುವ ಸಾಮಥ್ರ್ಯ ಹೊಂದಿದೆ. ಮರಣೋತ್ತರ ಸಂಸ್ಕಾರದ ಮುಖಾಂತರ ಈ ಸಾಮಥ್ರ್ಯವನ್ನು ಪ್ರಯೋಗ ಮಾಡಿ ತಮ್ಮ ಪಿತೃಗಳಿಗೆ ಸದ್ಗತಿ ನೀಡಿ ಅವರಿಂದ ಆಶೀರ್ವಾದಪಡೆಯಲೆಂದು ಈ ಸಂಸ್ಕಾರ ಮಾಡಲಾಗುತ್ತದೆ.

11. ಜನ್ಮದಿವಸೋತ್ಸವ :-ಮನುಷ್ಯನನ್ನು ಇತರೆಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನೆಂದು ಭಾವಿಸಲಾಗಿದೆ. ನಮಗೆಈ ಶ್ರೇಷ್ಠ ಜೀವನದ ಪದವಿಯು ದೊರೆತ ಪವಿತ್ರ ದಿನ ಜನ್ಮದಿನೋತ್ಸವ. ಸೃಷ್ಟಿಕರ್ತನು ಶ್ರೇಷ್ಠಜೀವನವನ್ನು ಕರುಣಿಸಿರುವುದರ ಜೊತೆಗೇ ಅದರಿಂದ ಶ್ರೇಷ್ಠ ಆಚರಣೆಯನ್ನೂ ಅಪೇಕ್ಷಿಸುತ್ತಾನೆ. ನಾವುಆತನನ್ನು ನಿರಾಶೆಗೊಳಿಸದೆ ಕ್ರಮವಾಗಿ ಮಾನವರಿಗೆ ಉಚಿತವಾದ ಉತ್ತಮ ಸಂಸ್ಕಾರಗಳನ್ನು ವಿಕಾಸಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ತಮ್ಮ ಇಷ್ಟಮಿತ್ರರ ಬಂಧುಗಳ ಶುಭಕಾಮನೆಗಳನ್ನೂ ಸ್ವೀಕರಿಸಬೇಕು.ಯುಗಋಷಿಯವರು ಜನ್ಮದಿನಕ್ಕೆ ವಿವೇಕ ಸಮ್ಮತ ಸಂಸ್ಕಾರದ ರೂಪ ಕೊಟ್ಟಿದ್ದಾರೆ.

12. ವಿವಾಹ ದಿವಸೋತ್ಸವ:- ಹುಟ್ಟಿನಿಂದ ಬದುಕಿನ ಆರಂಭವು ಆಗುವಂತೆ ಪರಿವಾರದ ಆರಂಭವುವಿವಾಹದಿಂದ ಆಗುತ್ತದೆ. ಶ್ರೇಷ್ಠ ಕುಟುಂಬ ಮತ್ತು ಈ ಮೂಲಕ ಶ್ರೇಷ್ಠ ಸಮಾಜವನ್ನು ನಿರ್ಮಿಸುವಶುಭ ಪ್ರಯೋಗವು ವಿವಾಹ ಸಂಸ್ಕಾರದಿಂದ ಪ್ರಾರಂಭವಾಗುತ್ತದೆ. ಎರಡು ಶರೀರಗಳು ಸೇರಿ ಒಂದುಪ್ರಾಣವಾಗುವ ಸಾಧನೆಯು ಈ ದಿನದಿಂದಲೇ ಪ್ರಾರಂಭವಾಗುತ್ತದೆ. ಆದ್ದರಿಂದಲೇ ವಿವಾಹದಿವಸೋತ್ಸವವನ್ನು ಒಂದು ಶ್ರೇಷ್ಠ ಹಬ್ಬವೆಂದು ಪರಿಗಣಿಸಿ ಆ ದಿನ ಯುಗ ಋಷಿಗಳು ಸೂಚಿಸಿರುವಸಂಸ್ಕಾರವನ್ನು ಆಚರಿಸಿ ಲಾಭ ಪಡೆಯಬೇಕು.ಭಾರತವು ಪುನಃ ಮಹಾನ್ ರಾಷ್ಟ್ರವಾಗಬೇಕಾಗಿದೆ. ವಿಶ್ವಗುರುವಿನ ಸ್ಥಾನವನ್ನು ಅಲಂಕರಿಸಬೇಕಾಗಿದೆ.ಇದಕ್ಕಾಗಿ  ಶ್ರೇಷ್ಠ ವ್ಯಕ್ತಿತ್ವವುಳ್ಳ ಜನರು  ಬಹುದೊಡ್ಡ ಸಂಖ್ಯೆಯಲ್ಲಿ ಅಗತ್ಯವಾಗಿದ್ದಾರೆ. ಅವರ ವಿಕಾಸಮಾಡಲಿಕ್ಕಾಗಿ ಈ ಸಂಸ್ಕಾರ ಪ್ರಕ್ರಿಯೆಯು ಬಹಳ ಉಪಯುಕ್ತವೆಂದು ಸಿದ್ಧವಾಗ ಬಹುದಾಗಿದೆ. ಪ್ರತಿಯೊಬ್ಬವಿಚಾರವಂತ ಮತ್ತು ಭಾವನಾಶೀಲ ಜನರು ಈ ಕಾರ್ಯದಲ್ಲಿ ಕೈಜೋಡಿಸಬೇಕಾಗಿದೆ. ಶಾಂತಿಕುಂಜಹರಿದ್ವಾರ, ಗಾಯತ್ರೀ ತಪೋಭೂಮಿ ಮಥುರಾವೂ ಸೇರಿದಂತೆ ಎಲ್ಲಾ ಶಕ್ತಿಪೀಠಗಳು, ಗಾಯತ್ರೀಚೇತನಾ ಕೇಂದ್ರಗಳು, ಪ್ರಜ್ಞಾಪೀಠಗಳು ಮತ್ತು ಪ್ರಜ್ಞಾ ಸಂಸ್ಥಾನಗಳಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.ಪ್ರತಿಯೊಂದು ವರ್ಗಗಳಲ್ಲೂ ಯುಗ ಪುರೋಹಿತರನ್ನು ವಿಕಾಸಗೊಳಿಸಲಾಗುತ್ತಿದೆ. ತಿಳಿದವರು, ಶ್ರದ್ಧಾವಂತರುಇದರ ಲಾಭವನ್ನು ಪಡೆಯಲಿ. ಜನ-ಜನರವರೆಗೂ ಇದನ್ನು ಕೊಂಡೊಯ್ಯಲು ಸಂಪೂರ್ಣ ತತ್ಪರರಾಗಲಿ.