ಆಪಧಾ ನಿರ್ವಹಣೆ

ಆಪಧಾ ನಿರ್ವಹಣೆ

Disaster Management

ದೇವಾತ್ಮ ಹಿಮಾಲಯದಲ್ಲಿ ಬಂದ ಭೀಷಣ ಪ್ರವಾಹದಿಂದ ಲಕ್ಷಾಂತರ ಜನರು ಪೀಡಿತರಾಗಿದ್ದಾರೆ. ಜನರ ಕಷ್ಟವನ್ನು ನೋಡಿ ದೇಶದ ಎಲ್ಲೆಡೆಯಿಂದ ಜನರು ತಮ್ಮ ಸಹಾಯ ಹಸ್ತವನ್ನು ಚಾಚಿದ್ದಾರೆ.. ಪೀಡಿತ ಜನರ ಕಷ್ಟ ಪರಿಹಾರ ಕಾರ್ಯದಲ್ಲಿ ಶಾಂತಿಕುಂಜ ಮೂಂಚೂಣಿಯಲ್ಲಿತ್ತು. ರಾಜಾಸ್ಥಾನ ಸರ್ಕಾರ ಋಶಿಕೆಷದದಲ್ಲಿ ಏರ್ಪಡಿಸಿದ ಕ್ಯಾಂಪಗೆ ಊತಾದ ವ್ಯವಸ್ಥೆಯನ್ನು ಶಾಂತಿಕುಂಜ ಮಾಡಿತ್ತು.

ಪರಿಹಾರ ಕಾರ್ಯಕ್ಕೆ ಶಾನ್ತಿಕುಂಜಗೆ ಸುತ್ತಮುತ್ತೆಲಿನ ಪ್ರದೇಶ – ಉತ್ತರ ಪ್ರದೇಶ , ಹರಿಯಾಣ , ಪಂಜಾಬ್, ರಾಜಾಸ್ಥಾನ, ಗುಜರಾತ, ಮಹಾರಾಷ್ಟ್ರದ ಶಾಖೆಗಳಿಂದ ಪರಿಹಾರ ಸಾಮಗ್ರಿ ಟ್ರಕಗಳಲ್ಲಿ ಹರಿದು ಬಂದಿತು ಇತರ ಪ್ರಾನ್ತಗಕಿಂದ ಪರಿಹಾರ ಕಾರ್ಯಕ್ಕಾಗಿ ಧನಸಹಾಯ ಬಂದು ಸೇರಿತು. ಪರಿಹಾರಕ್ಕಾಗಿ ಸಹಾಯ ಇನ್ನೂ ಬಂದು ಸೇರುತ್ತಿದೆ. ಆದರೂ ಇಲ್ಲಿ ಪರಿಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ, ಇನ್ನೂ ಹೆಚ್ಚಿನ ಸಹಾಯದ ಆವಶ್ಯಕತೆಯಿದೆ. ಉತ್ತರಾಖಂಡದ ಪರಿವಾರದ ಜನರ ವಿಶೇಷ ಸಹಕಾರದಿಂದ ಈ ಪರಿಹಾರ ಕಾರ್ಯವನ್ನು ಸಾಧಿಸಲಾಯಿತು. ಪ್ರವಾಹದ ವಿಷಯ ತಿಳಿಯುತ್ತಿದ್ದಂತೆ ಶಾಂತಿಕುಂಜ ಆಶ್ರಮದಿಂದ ಪರಿಹಾರ ಕೇಂದ್ರವಾಗಿ ಬದಲಾಯಿತು. ಪೀಡಿತ ಕ್ಷೇತ್ರದಲ್ಲಿ ಸಿಲುಕಿದ ಜನರನ್ನು ಸೈನ್ಯ ಹಾಗೂ ವಾಯು ಸೈನ್ಯದ ಸೈನಿಕರು ಕಾಪಾಡಿದರು. ರಕ್ಷಿಸಲ್ಪಟ್ಟ ಜನರನ್ನು ದೇಹರಾದೂಣ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಅಲ್ಲಿಂದ ಅವರನ್ನು ನೇರವಾಗಿ ಶಾಂತಿಕುಂಜನ ಬಸಗಳಲ್ಲಿ ಶಾಂತಿಕುಂಜಗೆ ಸೇರಿಸಲಾಗುತ್ತಿತ್ತು. ಅಲ್ಲಿ ಜನರಿಗೆ ಆಹಾರ, ಬಟ್ಟೆ, ಕಂಬಳಿ, ವೈದ್ಯಕೀಯ ಸೇವೆ ಹಾಗೂ ಅವರ ಮನೆಗೆ ಹೋಗಲು ಬೇಕಾದ ಖರ್ಚು ನೀಡಲಾಯಿತು. ಪರಿಹಾರ ಕಾರ್ಯವು ತನ್ನ ಉತ್ತುಂಗದಲ್ಲಿದ್ದಾಗ ಸುಮಾರೂ ೫೦೦೦ ಜನರು ಶಾಂತಿಕುಂಜನಲ್ಲಿ ಆಸರೆ ಪಡೆದಿದ್ದರು.

        ಯಾತ್ರಿಗಳಿಗೆ ಸೌಕರ್ಯವನ್ನು ನೀಡುವ ಕಾರ್ಯದ ಜೊತೆಗೆ, ಅನೇಕ ಕ್ಷೇತ್ರಗಳಲ್ಲಿ ಸಿಲುಕಿರುವ ಯಾತ್ರಿಗಳಿಗೆ, ಹಳ್ಳಿಯ ಜನರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ಹಾಗೂ ಕಂಬಳಿಯನ್ನು ತಲುಪಿಸಲಾಯಿತು. ಈ ಕಾರ್ಯಕ್ಕಾಗಿ ಸರ್ಕಾರವು ಎರಡು ಹೆಲಿಕಾಪ್ಟರಗಳನ್ನೂ ಶಾಂತಿಕುಂಜನಿಂದ ಕಳುಹಿಸುವ ಸಾಮಾಗ್ರಿಗಳಾಗಿ ಮೀಸಲಿಟ್ಟಿತ್ತು. ಜುಲೈ ಕೊನೆಯವರಿಗೆ ೭೦೦ ಹಳ್ಳಿಗಳಲ್ಲಿ ಸಮೀಕ್ಷೆ ನಡೆಸಿ ೫೦೦೦ ಕ್ಕೂ ಹೆಚ್ಚಿನ ಜನರಿಗೆ ಪರಿಹಾರ ಸಾಮಾಗ್ರಿ ಕಿಟ್ ನೀಡಲಾಗಿತು. ಶಾಂತಿಕುಂಜನಲ್ಲಿ ಪ್ರತಿದಿನ ೨೫೦-೩೦೦ ಮಂದಿ ಸಹೋದರಿಯರು ಹಾಗೂ ಮಕ್ಕಳು ಪರಿಹಾರ ಸಮಾಗ್ರಿಯನ್ನು ಪ್ಯಾಕ್ ಮಾಡುವ ಕಾರ್ಯದಲ್ಲಿ, ಅವಶ್ಯಕತೆಯನುಸಾರ ಆಹಾರ ತಯಾರಿ ಮಾಡುವ ಕಾರ್ಯದಲ್ಲಿ ತನ್ಮಯರಾಗಿ ನಿರತರಾಗಿದ್ದಾರೆ. ಅವರಲ್ಲಿ ಪೀಡಿತ ಜನರ ಸೇವೆ ಮಾಡುವ ಸಧ್ಭಾವನೆ ಕಾಣಿಸುತ್ತಿದೆ. ಈ ಪ್ಯಾಕೆಟ್ನಲ್ಲಿ ಒಂದು ಮನೆಗೆ ಬೇಕಾಗುವ ನಿತ್ಯವಸರ ವಸ್ತುಗಳು – ಅಕ್ಕಿ, ಗೋಧಿ ಹಿಟ್ಟು, ಬೇಳೆ, ಎಣ್ಣೆ, ಉಪ್ಪು, ಮಸಾಲೆ ಪದಾರ್ಥಗಳು: ಪಾತ್ರೆಗಳಿಗಾಗಿ ಲೋಟಗಳು ಸೌಟಗಳು, ಬಟ್ಟಲುಗಳು, ಚಮಚಗಳು: ಅಡುಗೆ ಮಾಡಲು ಸ್ಟವ್, ಹೆಂಚು. ಚಪಾತಿ ಮಣೆ, ಲಟ್ಟಣಿಗೆ: ಸ್ತ್ರೀ ಪುರುಷರಿಗೆ ನಾಲ್ಕು ಜೊತೆ ಬಟ್ಟೆ , ಹೊದೆಯಲು ಕಂಬಳಿ, ಸೋರುತ್ತಿರುವ ಮಾಳಿಗೆಗಾಗಿ ಟಾರ್ಪಲೀನ್; ಬಿಸ್ಕೆಟ್, ನಮಕೀನ್, ನೀರು ಇರುತ್ತದೆ. ಇಂತಹ ಸುಮಾರು ೫೦೦-೬೦೦ ಪ್ಯಾಕೆಟ್ಗಳನ್ನೂ ತೆಗೆದುಕೊಂಡು ಸ್ವಯಂಸೇವಕರು ಪ್ರತಿದಿನ ಶಾಂತಿಕುಂಜನಿಂದ ಹಳ್ಳಿ ಹಳ್ಳಿಗೆ ಹೋಗುತ್ತಿದ್ದಾರೆ.

ವಿದ್ಯಾರ್ಥಿಗಳಿಗಾಗಿ: ಪ್ರವಾಹ ಪೀಡಿತ ಹಳ್ಳಿಗಳಲ್ಲಿಯ ಶಾಲೆಗಳು ಸಾಧ್ಯವಾದಷ್ಟು ಬೇಗ ಪ್ರಾರಮ್ಭಾವಾಗುದಕ್ಕೆ ಸಹಾಯವನ್ನು ನೀಡಲಾಗುತ್ತಿದೆ. ಅನೇಕ ಶಾಲೆಗಳಿಗೆ ಶಾಂತಿಕುಂಜ ವತಿಯಿಂದ ಬೆಂಚ, ಪುಸ್ತಕ ಹಾಗೂ ಇತರ ಅವಶ್ಯಕ ಸಾಮಾಗ್ರಿಗಳನ್ನು ಕಳುಹಿಸಲಾಯಿತು.

ಶಾಂತಿಕುಂಜನ ಕಾರ್ಯಕರ್ತರು ಹಗಲೂ ಇರೂಳೂ ಬಹಳ ಕಷ್ಟ ಪಟ್ಟು ಶ್ರಮಿಸಿದ್ದಾರೆ. ಆ ಶ್ರಮದಲ್ಲಿಯೂ ಸ್ವಯಂ ಸೇವಕರ ಮುಖದಲ್ಲಿ ಮುಗುಳ್ನಗೆ, ಪೀಡಿತರ ಬಗ್ಗೆ ಪ್ರೇಮ, ಆತ್ಮೀಯತೆ ಹಾಗೂ ಸಹಾನುಭೂತಿಯಿದೆ. ಈ ಸೇವೆಯನ್ನು nಆವು ಎಂದಿಗೂ ಮರೆಯುವುದಿಲ್ಲ ಹಳ್ಳಿಗಳ ವಿಕಾಸದ ಬಗ್ಗೆ ಶಾಂತಿಕುಂಜನ ಯೋಜನೆಗಳಿಂದ ಬಹಳಷ್ಟು ಕಲಿತ್ತಿದ್ದೇವೆ.