ಸಾಧನಾ ಆಂದೋಳನ

ಸಾಧನಾ ಆಂದೋಳನ-ಒಂದು ನೋಟ

Sadhana Andolan
ದಿನ ವಿಶ್ವವ್ಯಾಪಿ ಸಮಸ್ಯೆ:
ವರ್ತಮಾನ ಪರಿಸ್ಥಿತಿಯು ಜಗತ್ತನ್ನು ಸಂಕಟಮಯಗೊಳಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇಂದು ನಾಲ್ಕೂ ದಿಕ್ಕುಗಳಲ್ಲಿ ಶೋಷಣೆ,ಅತ್ಯಾಚಾರ, ಅನಾಚಾರಗಳ ಏಕಚಕ್ರಾಧಿಪತ್ಯವು ನಡೆದಿದೆ. ಪ್ರತಿಯೊಬ್ಬವ್ಯಕ್ತಿಯೂ ಅಶಾಂತನಾಗಿದ್ದಾನೆ. ಸಮಚಿತ್ತತೆ ಕಳೆದುಕೊಂಡಿದ್ದಾನೆ.ಅತ್ಯಾಚಾರಿಯಾಗಿದ್ದಾನೆ. ಹಾಗೆಯೇ ಸ್ವತ: ಪೀಡಿತನೂ ಆಗಿದ್ದಾನೆ. ಪ್ರಕೃತಿಮತ್ತು ಮಾನವರಿಬ್ಬರೂ ಉಗ್ರತೆಯ ಚರಮಸೀಮೆಯನ್ನು ಮುಟ್ಟಿದ್ದಾರೆ.ಈ ಉಗ್ರತೆಯು ವ್ಯಕ್ತಿಯ ವಿಚಾರ ನಡವಳಿಕೆಗಳನ್ನು ಬದಲಾಯಿಸಿದೆ.ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ಬದುಕಿನ ಉದ್ದೇಶವೇತಿರುವುಮುರುವುಗೊಂಡಿದೆ. ಒಮ್ಮೊಮ್ಮೆ ನಾವೆಲ್ಲರೂ ಉರಿಯುತ್ತಿರುವ ನರಕದಲ್ಲಿದ್ದೇವೇನೋ ಎಂದೆನಿಸುತ್ತಿದೆ.

ನಿವಾರಣೆ ಹೇಗೆ ?
ಈ ಭಯಂಕರ ಸಮಸ್ಯೆಯ ನಿವಾರಣೆಗೆಂದು  ಪ್ರಯತ್ನವನ್ನಂತೂ ಮಾಡಲಾಗುತ್ತಿದೆ. ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಸ್ತರಗಳಲ್ಲಿಅನೇಕ ಸ್ವಯಂ ಸೇವಾ ಸಂಸ್ಥೆಗಳು ಇದಕ್ಕಾಗಿ ಕಾರ್ಯನಿರತವಾಗಿವೆ.ಆದರೆ ಎಲ್ಲಿಯೂ ಸ್ಥಾಯಿಯಾದ ಸಮಾಧಾನ ಕಂಡು ಬರುತ್ತಿಲ್ಲ. ಮನುಷ್ಯನ ವಿನಾಶಕಾರಿಯಾದ ಪ್ರವೃತ್ತಿಯು ಜಯಿಸಲು ಅಸಾಧ್ಯ ಎಂಬುದು ಸಿದ್ಧವಾಗುತ್ತಿದೆ.ಇಂತಹ ವಿಷಮಯ ವಿಪರೀತ ಪರಿಸ್ಥಿತಿಯಲ್ಲಿಯೂ ಯುಗನಿರ್ಮಾಣಕ್ಕಾಗಿ ಸಂಕಲ್ಪಿತವಾದ ನಮ್ಮ ಮಿಶನ್ ದೃಢವಾದ ವಿಶ್ವಾಸದೊಂದಿಗೆ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದೆ. ನಮ್ಮ ವಿಚಾರ ಮತ್ತು ಕಾರ್ಯ ಪದ್ಧತಿಯು ಇನ್ನಿತರ ಸಂಸ್ಥೆಗಳಿಗಿಂತ ಭಿನ್ನವಾಗಿದೆ. ನಮ್ಮಅಭಿಪ್ರಾಯದಲ್ಲಿ ಹೊರಗೆ ತೋರಿಬರುತ್ತಿರುವ ಸಮಸ್ಯೆಗಳ ಮೂಲವು ಮಾನಸಿಕ ವಲಯದಲ್ಲಿದೆ.  ಆದ್ದರಿಂದ ಮೂಲ ಕಾರಣವನ್ನು ಗುರುತಿಸಿಯೇನಾವು ಕಾರ್ಯರಂಗಕ್ಕಿಳಿಯ ಬೇಕಾಗಿದೆ. ಪ್ರಕೃತಿಯ ಉಗ್ರತೆ ಮತ್ತು ವಿಶ್ವವ್ಯಾಪಿ ಸಮಸ್ಯೆಯ ಮೂಲ ಕಾರಣವೆಂದರೆ ಮಾನವನ ಮನಸ್ಸಿನ ಉಗ್ರತೆ. ಈ ಉಗ್ರತೆಯನ್ನು ನಿವಾರಿಸಿ ಮಾನವ ಮನಸ್ಸಿನ ಪುನರ್ ನಿರ್ಮಾಣ ಮಾಡುವುದೇ ಮಾನವ ಜನಾಂಗದ ಉಜ್ವಲ ಭವಿಷ್ಯಕ್ಕೆ ಏಕಮಾತ್ರ ಅಮೋಘ ಉಪಾಯ ಆಗಬಹುದಾಗಿದೆ. ಈ ರೀತಿಯ ಪುನರ್ ನಿರ್ಮಾಣಕಾರ್ಯವು ಮನೋವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆಗಳಿಂದಲೇ ಸಾಧ್ಯ ಎಂಬುದು ಸ್ಪಷ್ಟವಾಗಿದೆ.

ಸಾಧನಾ – ಆಂದೋಳನದ ಅವಶ್ಯಕತೆ:
ಯಾವುದೇ ಅನೈಚ್ಛಿಕ ಸಂಗತಿಗಳು ವ್ಯಾಪಕ ಪ್ರಮಾಣದಲ್ಲಿ ಸಂಕಟಮಯ ಪರಿಸ್ಥಿತಿ ಉಂಟು ಮಾಡುತ್ತಿದ್ದರೆ ಆಗ ಅವುಗಳ ವಿರುದ್ಧ ಒಂದಾಗುವುದು ಮತ್ತು ಅವುಗಳನ್ನು ಎದುರಿಸಲು ಅಗತ್ಯವಾದ ಶಕ್ತಿಯನ್ನು ಒಂದುಗೂಡಿಸಿ ಕಾರ್ಯೋನ್ಮುಖರಾಗುವುದು ಅನಿವಾರ್ಯವಾಗುತ್ತದೆ. ಇದನ್ನೇ‘ಆಂದೋಳನ’ ಎಂದು ಕರೆಯಲಾಗುತ್ತದೆ. ವರ್ತಮಾನದ ವಿಶ್ವವ್ಯಾಪೀ ಸಮಸ್ಯೆಯನ್ನು ನಿವಾರಿಸಲು ಸಾಧನಾ ಆಂದೋಳನದಂತಹ ಪ್ರಬಲ ಜಾಗರಣಾ ಅಭಿಯಾನದ ಅವಶ್ಯಕತೆ ತೋರಿಬರುತ್ತಿದೆ. ಇದರ ನಾಡಿ-ಮಿಡಿತವನ್ನುಯುಗ ನಿರ್ಮಾಣ ಮಿಶನ್ ಗುರುತಿಸಿದೆ. ಇದಕ್ಕೆ ಉಚಿತವಾದ ಪರಿಹಾರವನ್ನುನಿರ್ಧರಿಸಿದೆ, ಸಾಧನಾ ಆಂದೋಳನದ ಧ್ಯೇಯವೆಂದರೆ “ಉಪಾಸನೆ-ಸಾಧನೆ-ಆರಾಧನೆಗಳ ಮುಖಾಂತರ(1) ಪ್ರತಿಯೊಬ್ಬ ವ್ಯಕ್ತಿಯನ್ನುಸಮಚಿತ್ತನನ್ನಾಗಿಸುವುದು. (2) ಮಾನವ ಮನಸ್ಸನ್ನು ರಚನಾತ್ಮಕ ದಿಶೆಯಲ್ಲಿ ಕ್ರಿಯಾಶೀಲಗೊಳಿಸುವುದು. (3) ಈ ಎರಡೂ ಜನ ಅಭಿಯಾನವನ್ನುವ್ಯಾಪಕವಾಗಿ ಪ್ರಚಾರ ಮಾಡಿ ವಿಶ್ವದಲ್ಲಿ ಮಾನವನ ಮನಸ್ಸಿನ ಉಗ್ರತೆಯನ್ನು ಶಾಂತಗೊಳಿಸುವುದು. ಮಾನವ ಶಕ್ತಿಯನ್ನು ಸೃಜನಾತ್ಮಕ ಕಾರ್ಯದಲ್ಲಿತೊಡಗಿಸುವುದು”.ನಮ್ಮ ಈ ಅಭಿಪ್ರಾಯದ ಬಗ್ಗೆ ಪ್ರಾಯಶ: ನೀವೂ ಸಹಮತ ಹೊಂದಿರುತ್ತೀರಿ. ಮನುಷ್ಯನ ಮನಸ್ಸಿನ ಪುನರ್ ನಿರ್ಮಾಣದಂತಹ ಕಠಿಣವಾದ ಅದ್ಭುತ ಕೆಲಸವನ್ನು ಕೇವಲ ವಾಸ್ತವಿಕ ಧರ್ಮ ಮಾತ್ರಮಾಡಲು ಸಾಧ್ಯವಿದೆ. ವಾಸ್ತವಿಕ ಧರ್ಮವೆಂದರೆ ಈಶ್ವರನ ಮೂರು ಆಜ್ಞೆಗಳಪಾಲನೆ. ಅಂದರೆ,-1. ಪವಿತ್ರ ವಿಚಾರ (2) ಸಕಲರ ಹಿತದ ಭಾವನೆ ಮತ್ತು (3) ಕರ್ತವ್ಯ ನಿಷ್ಠೆ.ಈ ಈಶ್ವರೀಯ ಆಜ್ಞೆಯನ್ನು ವಿಶ್ವವ್ಯಾಪಿ  ಜಾರಿಗೊಳಿಸುವ ಮಹಾನ್‍ಉದ್ದೇಶದೊಂದಿಗೆ ಯುಗ ನಿರ್ಮಾಣ ಮಿಶನ್ 2001 ನೇ ಇಸವಿಯವಸಂತ ಉತ್ಸವದಲ್ಲಿ ಸಪ್ತ ಆಂದೋಳನದ ಘೋಷಣೆ ಮಾಡಿತು. ಇದರಲ್ಲಿಸಾಧನಾ ಆಂದೋಳನವು ಮೊದಲ ಸ್ಥಾನದಲ್ಲಿದೆ. ಏಕೆಂದರೆ ಇದು ಸ್ವತ:ಪೂರ್ಣತೆ ಹೊಂದಿರುವುದಲ್ಲದೆ ಇನ್ನುಳಿದ ಆರೂ ಆಂದೋಳನಗಳಿಗೆ ಪೋಷಣೆ ನೀಡುವ ಸಾಮಥ್ರ್ಯವನ್ನು ಹೊಂದಿದೆ.
“ಸಾಧನೆ”ಯ ವ್ಯಾಪಕ ಅರ್ಥ:
ಸಾಮಾನ್ಯವಾಗಿ ‘ಸಾಧನೆ’ಯ ಅರ್ಥವೆಂದರೆ “ಸಾಧಿಸಿತೋರಿಸುವುದು”. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇದರ ಅರ್ಥ “ಜೀವನವನ್ನು ಸಾಧನೆಯಲ್ಲಿಡುವುದು”. ವ್ಯಕ್ತಿಯ ವಿಚಾರ, ಭಾವ ಮತ್ತು ಕರ್ಮಗಳೇ ಆತನ ಒಳ್ಳೆಯ ಮತ್ತು ಕೆಟ್ಟ ಸಂಸ್ಕಾರಗಳ ಮೂಲ.  ಒಳ್ಳೆಯ ಮತ್ತು ಕೆಟ್ಟ ಜೀವನ ಇದರದೇ ಪರಿಣಾಮ. ಆದ್ದರಿಂದ ವಿಚಾರ, ಭಾವನೆ ಮತ್ತು ಕರ್ಮಗಳ ಸ್ತರಗಳು ಕೆಳಗಿಳಿಯದಿರುವಂತೆ ಜಾಗೃತವಾಗಿರುವುದೇ ಜೀವನ ಸಾಧನೆಯಾಗಿದೆ.
ಕೋಲೊಂದನ್ನು ನೇರವಾಗಿ ನಿಲ್ಲಿಸಬೇಕೆಂದಿದ್ದರೆ ಅದನ್ನು ಗಟ್ಟಿಯಾಗಿ ಹಿಡಿದಿಡಬೇಕಾಗುತ್ತದೆ. ಇಲ್ಲದಿದ್ದರೆ ಪೃಥ್ವಿಯ ಆಕರ್ಷಣೆ ಬಲವಾಗಿರುವುದರಿಂದ ಕೋಲು ಜಾರಿ ಕೆಳಗೆ ಬೀಳುತ್ತದೆ. ಇದೇ ರೀತಿ ನಮ್ಮಂತಹ ಸಾಧಾರಣರಾದ ಸಾಮಾನ್ಯ ಜನರಿಗೆ ವಿಚಾರ, ಭಾವನೆ,ಕರ್ಮಗಳಿಗೆ ಗಟ್ಟಿಯಾದ ಅವಲಂಬನೆ ಸಿಗದಿದ್ದರೆ ನಾವು ತೃಷ್ಣೆ ಮತ್ತು ವಾಸನೆಗಳಂತಹ ಸಾಂಸಾರಿಕ ಜಾಲಕ್ಕೆ ಸಿಲುಕಿ ಪಶು ಸಮಾನರಾಗಿ ಅಧೋಗತಿ ಹೊಂದುತ್ತೇವೆ. ನಮ್ಮನ್ನು ಇಂತಹ ಪತನಕಾರಿ ಆಕರ್ಷಣೆಯಿಂದರಕ್ಷಿಸಬಲ್ಲವನು ಈಶ್ವರನೊಬ್ಬನೆ. ಆದ್ದರಿಂದ ಸಾಧನೆಯನ್ನುಆರಂಭಿಸುವುದಕ್ಕೂ ಮುನ್ನ  ಈಶ್ವರನ ಸರ್ವವ್ಯಾಪಕತೆ ಮತ್ತು ಅವನಕರ್ಮಫಲದ ನಿಯಮವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕ.ಹೀಗೆ ಮೊದಲನೆಯ  ಮೆಟ್ಟಿಲು ‘ಉಪಾಸನೆ’ಯಾದರೆ ಎರಡನೆಯಮೆಟ್ಟಿಲು ‘ಸಾಧನೆ’ಯಾಗಿದೆ. ಉಪಾಸನೆಯನ್ನು ಆಧಾರವಾಗಿ ಇಟ್ಟುಕೊಂಡುಸ್ವಚ್ಛ  ಮತ್ತು ಸಂತುಲಿತ ಬದುಕನ್ನು ನಡೆಸಿದರೆ ಆಗ ‘ಸಾಧನೆ’ಯುಸಹಜವಾಗಿಯೇ ಸಿದ್ಧಿಸುತ್ತದೆ.
ಒಮ್ಮೆ ಸಾಧನೆಯಲ್ಲಿ ಪರಿಣತಿ ಸಾಧಿಸಿದರೆ, ಮುಂದುವರಿಯುತ್ತಾ ಹೋದಂತೆ ಸದ್ಭಾವನೆಯು ಜಾಗೃತವಾಗುತ್ತದೆ. ಉಪಾಸನೆ-ಸಾಧನೆಗಳಿಂದಾಗಿ ನಮ್ಮ ಜೀವನವು ಬೆಳಕಿನ ಹಾದಿಯಲ್ಲಿ ಸಾಗಿದಂತೆ ನಮ್ಮ ಬಂಧು-ಬಾಂಧವರು, ಪರಿಚಿತ ಜನರೂ ಈ ಮಾರ್ಗದಲ್ಲಿ ನಮ್ಮೊಡನೆ ಸೇರಿಸಿಕೊಳ್ಳಲೆಂಬ ಅಪೇಕ್ಷೆ ಹುಟ್ಟುತ್ತದೆ. ಇದನ್ನೇ ಒಂದು ದೀಪದಿಂದ ಮತ್ತೊಂದು ದೀಪವನ್ನು ಹೊತ್ತಿಸುವುದೆನ್ನುವುದು. ಪರೋಪಕಾರಿ ಭಾವನೆಯನ್ನು ಮತ್ತು ಸೇವಾ ಕಾರ್ಯವನ್ನು ಈಶ್ವರನ ‘ಆರಾಧನೆ’ಯೆಂದು ಕರೆಯಲಾಗಿದೆ. ಇದು ಸಾಧನೆಯ ಅತ್ಯುನ್ನತ ಸ್ಥಿತಿಯಾಗಿದೆ. ಈ ಪ್ರಕಾರವ್ಯಾಪಕವಾದ ಅರ್ಥದಲ್ಲಿ ‘ಸಾಧನೆ’ಯೆಂದರೆ ಉಪಾಸನೆ- ಸಾಧನೆ-ಆರಾಧನೆಗಳ ತ್ರಿಪುಟಿಯೇ ಆಗಿದೆ.
ಸಾಧನಾ ಅಂದೋಳನದ ಈ ಮೂರು ಮುಖಗಳ ಪ್ರಸಾರದಿಂದ ನಿಶ್ಚಯವಾಗಿಯೂ ವಿಶ್ವಸ್ತರದಲ್ಲಿ ಮನುಷ್ಯನ ಮನಸ್ಸಿನ ಉಗ್ರತೆಯನ್ನು ಶಾಂತ ಮಾಡುವ ಧ್ಯೇಯವು ಪೂರ್ಣಗೊಳ್ಳಬಹುದಾಗಿದೆ. ಮನುಷ್ಯನ ಅಂತರಂಗದೊಳಗೆ ಮಲಗಿರುವ ದೇವತೆಯನ್ನು ಜಾಗೃತಗೊಳಿಸುವ ಮತ್ತು ಭೂಮಿಯ ಮೇಲೆ ಸ್ವರ್ಗವನ್ನು ನಿರ್ಮಿಸುವ ಈ ವಿಧಾನವು ಈ ಹಿಂದೆಯೂ ಸಾರ್ಥಕತೆ ಮತ್ತು ಸಫಲತೆಯನ್ನು ಹೊಂದಿದೆ. ಋಷಿ ಪ್ರಣೀತ ಈ ಯೋಜನೆಯು ಇಂದೂ ಕೂಡ ಯಶಸ್ವಿಯಾಗುವುದೆಂದು ನಾವು ವಿಶ್ವಾಸಹೊಂದಬಹುದಾಗಿದೆ.
ವಿಶಾಲವಾಗಿರುವ ಇಡೀ ಜಗತ್ತಿನ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ.ಇದು ಋಷಿ ಸತ್ತೆಯ ಚಿಂತೆಯ ವಿಷಯವಾಗಿದೆ. ನಮ್ಮ ಕುಟುಂಬದ ಜನರ ಹಾಗೂ ನಮ್ಮ ಸುತ್ತ-ಮುತ್ತಲಿನ ಪ್ರಭಾವೀ ಕ್ಷೇತ್ರದ ಜನತೆಗಳವರೆಗೇ ನಮ್ಮ-ನಿಮ್ಮೆಲ್ಲರ ಸಂಚಾರವಿದೆ. ಆದ್ದರಿಂದ ನಮ್ಮೆಲ್ಲರ ಕರ್ತವ್ಯವೆಂದರೆ ಸಾಧನೆಯ ಈ ಮೂರೂ ಮೆಟ್ಟಿಲುಗಳನ್ನು ಕ್ರಮಶಃ ಏರುತ್ತಾ ಈಶ್ವರನ ಬೆಳಕಿನಡೆಗೆ ಮುನ್ನಡೆಯುವುದು ಮತ್ತು ನಮ್ಮ ಸುತ್ತಲಿನ ಈ ಜಗತ್ತುಕೂಡ ಸಾಧನೆಯ ಪ್ರಕಾಶದಿಂದ ಬೆಳಗುವಂತೆ ಸೇವೆಯನ್ನು ಮಾಡುವುದು.
ಈ ಶ್ರೇಷ್ಠ ಮಾರ್ಗದಲ್ಲಿ ಹೆಜ್ಜೆಯನ್ನು ಮುಂದಿರಿಸಲು ಭಗವಂತನುನಮ್ಮೆಲ್ಲರಿಗೂ ಪ್ರೇರಣೆಯನ್ನು ನೀಡಲಿ.