ಸ್ವಾವಲಂಬನೆ ಚಳುವಳಿ

Self-reliance-Movement

ಗ್ರಾಮೀಣ ವಿಕಾಸ ಯೋಜನೆ
ರಾಷ್ಟ್ರದ ಬೆನ್ನೆಲುಬು ಹಳ್ಳಿಗಳೇ ಎಂಬ ಮಹಾತ್ಮಾ ಗಾಂಧೀಜಿಯವರ ಉಕ್ತಿಗೆ ಸರಿಯಾಗಿ ಹಳ್ಳಿಯನ್ನು ಪುನರ್ರಚಿಸುವ ಮಹಾ ಆಯೋಜನೆಯನ್ನು ಶ್ರೀಯುತರು ತನ್ನ ಶತಸೂತ್ರದಲ್ಲಿ ಆಳವಡಿಸಿಕೊಂಡಿರುವರು. ಗ್ರಾಮ ವಿಕಾಸದ ಒಂದು ಸುಸಜ್ಜಿತ ತರಭೇತಿ ಕೇಂದ್ರ ಶಾಂತಿಕುಂಜದಲ್ಲಿ ಸ್ಥಾಪನೆಯಾಗಿದೆ. ಪ್ರತಿ ಹಳ್ಳಿಯಲ್ಲಿ ಗೋಪಾಲನೆ ಹಾಗೂ ಗೋಮೂತ್ರದಿಂದ ೨೦ ತರಹದ ಔಷಧಿ ತಯಾರಿಸುವ ತರಬೇತಿ ಜನತೆಗೆ ನೀಡಲಾಗುತ್ತಿದೆ. ಪ್ರತಿ ಓರ್ವರು ಹಳ್ಳಿಯಲ್ಲಿ ದನ ಸಾಕುವಂತೆ ಪ್ರೋತ್ಸಾಹಿಸುತ್ತಿದೆ. ಅದಕ್ಕೆ ಬೇಕಾದ ಸಹಕಾರ ಒದಗಿಸಲಾಗುತ್ತದೆ. ವೈದಿಕ ಸಂಸ್ಕೃತಿಯಲ್ಲಿ ಗೋಪಾಲನೆಗೆ ಇರುವ ಮಹತ್ವಿಕೆ ಇದನ್ನು ಜನತೆಯಲ್ಲಿ ಜಾಗೃತಗೊಳಿಸಿ ಇದರ ಪ್ರತ್ಯಕ್ಷ ಲಾಭವನ್ನು ಜನತೆಗೆ ಮನದಟ್ಟು ಮಾಡಿಸುತ್ತಿದೆ. ಹಳ್ಳಗಳನ್ನು ಸ್ವಚ್ಛವಾಗಿ ಇಡುವ ಪಾಠ ನೀಡುತ್ತದೆ. ವೃಕ್ಷ ಸಾಂಗೋಪನೆ, ಕೃಷಿ ಭೂಮಿಯ ಮಣ್ಣನ್ನು ಸಂರಕ್ಷಿಸುವ ಸಹಜ ರೀತಿಯ ಪದ್ಧತಿಯನ್ನು ಕಲಿಸುತ್ತಾರೆ ಇಲ್ಲಿ. ಅದಲ್ಲದೆ ಸಾದಾ ಜೀವನ ಉಚ್ಚ ವಿಚಾರ ಎಂಬ ಜೀವನ ಕ್ರಮಕ್ಕೆ ಅನ್ವಯಿಸುವ ಗ್ರಾಮೋದ್ಯೋಗ, ಗುಡಿ ಕೈಗಾರಿಕೆ ಹಾಲಿನ ಉತ್ಪತ್ತಿ ಇಂತಹ ಶಿಕ್ಷಣವನ್ನು ಜನತೆಗೆ ನೀಡುತ್ತಿದ್ದಾರೆ. ಗ್ರಾಮ ವಿಕಾಸ ಪರಮಪೂಜ್ಯ ಮಹಾ ಸಂಕಲ್ಪ ಹಾಗಾಗಿ ಹಳ್ಳಿಗಳಲ್ಲಿ  (Water Shed) ಜಲಾಶಯಗಳನ್ನು ತಯಾರಿಸಿಕೊಡುತ್ತಿದ್ದಾರೆ. ಜ್ಞಾನ ಸಂವರ್ಧನೆಗಾಗಿ ಹಳ್ಳಿಗಳಲ್ಲಿ ಜ್ಞಾನ ಮಂದಿರಗಳನ್ನು ಶಾಂತಿಕುಂಜ ನಿರ್ಮಾಣಗೊಳಿಸಿದೆ. (ಅಂದರೆ ಪುಸ್ತಕಾಲಯದ ಏರ್ಪಾಡು ಮಾಡಿರುವರು). ಗುಜರಾತಿನ ಭೂಕಂಪದಿಂದ ನೆಲಸಮವಾದ ಜನತೆಗೆ ವಸತಿಯನ್ನು ನಿರ್ಮಿಸಿ ಕೊಡುವಲ್ಲಿ ಶಾಂತಿಕುಂಜ 5 ಲಕ್ಷ ರೂಪಾಯಿ ವ್ಯಯಮಾಡಿದ್ದೇ ಅಲ್ಲದೆ ಶಾಂತಿಕುಂಜದ ಸ್ವಯಂ ಸೇವಕರು ಸ್ವತಃ ಬೆವರು ಸುರಿಸಿ ದುಡಿದು ಮನೆಗಳನ್ನು ನಿರ್ಮಿಸಿಕೊಟ್ಟಿರುವರು. ಹಳ್ಳಿಗಳಲ್ಲಿ ಸಾಕ್ಷರತೆಯ ಪ್ರಸಾರ- ಅಂಧ ಶ್ರದ್ಧೆಯ ನಿವಾರಣೆ- ಜಾತ್ಯಾತೀತ ವಿಷಮತೆಯನ್ನು ಅಲ್ಲಗಳೆಂದು ಏಕಾತ್ಮ ಭಾವನೆಯ ಕೌಟುಂಬಿಕ ವಿಚಾರವನ್ನು ಪ್ರೋತ್ಸಾಹಿಸುತ್ತಿರುವರು. ಬೂತ, ಮೂಢ ನಂಬಿಕೆ, ಪ್ರೇತ, ಬಾಲಿ ಪದ್ಧತಿಯನ್ನು ನಿಷೇಧಿಸಿರುವರು. ಗೋ, ಗೀತೆ, ಗುರು, ಗಂಗಾ, ಗಾಯಿತ್ರೀ – ವೈದಿಕ ಸಂಸ್ಕೃತಿಯ ಈ ಮಹಾ ಐದು ತತ್ವಗಳಿಂದ ಹಳ್ಳಿಯ ಜನಮಾನಸ ಕ್ಷೇತ್ರವನ್ನು ಅತ್ಯುನ್ನತ  ಜ್ಞಾನ ಶಿಖರದತ್ತ ತಲಪಿಸುವ ಯೋಜನೆಯಲ್ಲಿ ಶಾಂತಿಕುಂಜದ ನಿರಂತರ ಪ್ರಯತ್ನ ಸಾಹಸ-ಇದು ಇತಿಹಾಸಕ್ಕೊಂದು ಮೈಲುಗಲ್ಲು. ಹಳ್ಳಿಯವರಿಗೆ ತರಬೇತಿ ನೀಡುವುದರೊಂದಿಗೆ ಶಾಂತಿಕುಂಜಕ್ಕೊಮ್ಮೆ ಸರ್ವರೂ ಬಂದು ಪರಿಪಕ್ವತೆಯನ್ನು ಪಡೆಯುವಂತೆ ಪ್ರೋತ್ಸಾಹಿಸುತ್ತಿದೆ. ಹಳ್ಳಿಯ ಜನತೆಯ ದುರಾಭ್ಯಾಸ ಮತ್ತೆ ಅಂಧಶ್ರದ್ಧೆ ದುಶ್ಚಟ ಇದರ ನಿವಾರಣೆಗಾಗಿ ಶ್ರಮಿಸುತ್ತಿದೆ.

ಒಂದು ವರ್ಷದ ತರಬೇತಿ ಕಾರ್ಯಗಾರದಲ್ಲಿ ಸ್ವಾವಲಂಬನೆ ನೈತಿಕ ವಿದ್ಯೆಯ ಜೊತೆಗೆ ಧಾರ್ಮಿಕ ಪುನರುತ್ಥಾನವನ್ನು ಅಖಿಲ ವಿಶ್ವ ಗಾಯತ್ರಿ ಪರಿವಾರವು ಗಾಯತ್ರಿ ತಪೋಭೂಮಿ ಮಥುರಾದಲ್ಲಿ ನಡೆಸುತ್ತಿದ್ದು ಇದರಿಂದ ಅಸಂಖ್ಯಾತ ಸ್ತ್ರೀ ಪುರುಷರು ಇದರ ಲಾಭ ಪಡೆದರು ಶಿಸ್ತಿನಿಂದ ಕಲಿತು, ಕಲಿಸಿ ವಿಶ್ವದ ಸಾಂಸ್ಕೃತಿಕ ಬೆಳವಣಿಗೆಗೆ ಬದ್ಧರಾಗಿದ್ದಾರೆ. ಪ್ರತಿಭಾವಂತ ಯುವಕ ಯುವತಿಯರು ಇದರಲ್ಲಿ ತ್ಯಾಗ ಭಾವದಿಂದ ಸೇವಾ ಮನೋಭಾವದಿಂದ ತೊಡೆಗಿಸಿ ಕೊಂಡಿದ್ದಾರೆ. ವಿದ್ಯೆಕಲಿತವರು ನಿರುಧ್ಯೋಗಿಗಳು ಸರ್ಕಾರದ ಹಾಗೂ ಇತರ ಉಧ್ಯೋಗಗಳಾಗಿ ಕಾತ್ತರಿಸುತ್ತ ಇರುವವರು ಈ ಸ್ವಾವಲಂಬನೆ ವಿದ್ಯೆಯ ಮೂಲಕ ಹೊಸ ಮಾರ್ಗದರ್ಶನ ಪಡೆದು ಕಷ್ಟ ತೊಂದರೆ ಖಿನ್ನತೆಯಿಂದ ಹೊರಬರುತ್ತಿದ್ದಾರೆ. ಭಾರತೀಯ ಗ್ರಾಮಗಳು ಸ್ವಾವಲಂಬನೆಯ ಅಭಿವೃದ್ಧಿಯನ್ನು (ಆದರ್ಶ ಗ್ರಾಮ ತೀರ್ಥ ಯೋಜನೆ) ಅಡಿಯಲ್ಲಿ ನಡೆಸಲಾಗುತ್ತಿದೆ. ವಿಶೇಷ ಶ್ರಮಧಾನ ಸಾಮೂಹಿಕ ಶ್ರಮಧಾನ ಕಾರ್ಯಗಳನ್ನು ಗುಡ್ಡ ಕಾಡಿನಲ್ಲಿ ಮತ್ತು ಕಾಡಿನ ಒಳ ಪ್ರವೇಶದಲ್ಲಿ ಅಖಿಲ ವಿಶ್ವ ಗಾಯತ್ರಿ ಪರಿವಾರದ ಕಾರ್ಯಕರ್ತರು ನಡೆಸುತ್ತಿದ್ದು ಮಾಡುವುದರ ಮೂಲಕ ಕಲಿಯುವುದು ಎಂಬ ಘೋಷಣೆ ನಡೆಸಲಾಗಿದೆ. ಆರೋಗ್ಯ ಮತ್ತು ಸ್ವಾಸ್ಥ್ಯ ಅನಕ್ಷರತೆ ಮತ್ತು ಸ್ವಾಸ್ಥ್ಯ ಅನಕ್ಷರತೆ ಮತ್ತು ಕ್ರಿಯಾತ್ಮಕ ಚಟುವಟಿಕೆ ಗ್ರಾಮಸ್ಥಮ ಇವುಗಳಲ್ಲಿ ಭಾಗವಹಿಸಲು ಉತ್ತೇಜನ ನೀಡುವುದನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಮುದಾಯದ ಸೇವೆಗಳನ್ನು ಸಾಮಾಜಿಕ ಉತ್ಸವಗಳು ಮೂಲಕ ಜನ ಸಮೂಹವು ಇದರಲ್ಲಿ ಭಾಗವಹಿಸುವಂತೆ ಮಾಡಿ ವ್ಯವಸಾಯ ಮತ್ತು ಸಣ್ಣ ಕೈಗಾರಿಕೆ ಈ ಕಾರ್ಯಕ್ರಮದ ಅಡಿಯಲ್ಲಿ ವೃದ್ಧಿಸಲಾತ್ತಿದೆ. ಪಶು ಮೂಲದ ವಸ್ತುಗಳ ಉಪಯೋಗ ಮತ್ತು ಇತರ ಸ್ಥಳೀಯ ವಸ್ತುಗಳನ್ನು ಉಪಯೋಗಿಸುವ ವಿದ್ಯೆಗಳನ್ನು ಕಲಿಸಲಾಗುತ್ತದೆ. ದೇಶದ ಸಂತಸವು ನಾಗರೀಕರ ಸ್ವಾವಲಂಬನೆಯ ಮೇಲೆ ಆಧಾರಿತವಾಗಿದೆ. ಭಾರತವು ವ್ಯವಸಾಯ ಆಧಾರಿತ ದೇಶವಾಗಿರುವದರಿಂದ ಅದರ ಅಭಿವೃದ್ಧಿ ಕೇಂದ್ರಗಳನ್ನು, ರಚನಾತ್ಮಕ ಪ್ರಕೊಷ್ಟಗಳನ್ನು ಆರಂಭಿಸುವ ಮೂಲಕ ಹಲವಾರು ಕಾರ್ಯ ಯೋಜನೆಗಳನ್ನು ನಡೆಸುತ್ತಿದೆ. ಒಂದು ವರ್ಷದ ಸ್ವಾವಲಂಬನೆ ಶಿಕ್ಷಣವನ್ನು ಗಾಯತ್ರಿ ತಪೋಭೂಮಿ ಮಥುರಾದಲ್ಲಿ ನೀಡಲಾಗುತ್ತಿದೆ.

ಗ್ರಾಮ ಅಭಿವೃದ್ಧಿ ಯೋಜನೆ
•    9 ದಿನಗಳ ರಚನಾತ್ಮಕ ತರಬೇತಿ ಕಾರ್ಯಕ್ರಮ
•    45 ದಿನಗಳ ಸ್ವಾವಲಂಬನೆ ಗ್ರಾಮಾಭಿವೃದ್ಧಿ ಯೋಜನೆ
•    6 ತಿಂಗಳ ಗ್ರಾಮ ವ್ಯವಸ್ಥೆ ಪ್ರಬಂಧ ಮತ್ತು ಕೋರ್ಸ್ಗಳು ದೇವಸಂಸ್ಕೃತಿ ವಿಶ್ವವಿದ್ಯಾಲಯ

೧. ಪ್ರಾಥಮಿಕ ಸ್ವಾವಲಂಭನೆ  – 1 ತಿಂಗಳು ಯುಗ ಶಿಲ್ಪಿ ಕಾರ್ಯಕ್ರಮದಲ್ಲಿ ಬೇಕರಿ, ಅಗರಬತ್ತಿ, ಮೇಣದ ಬತ್ತಿ, ಮುದ್ರಣಕಲೆ, ಪ್ಲಾಸ್ಟಿಕ ಅಚ್ಚ ಲ್ಯಾಮಿನಶನ್, ತೋಟಗಾರಿಕೆ, ಫಾಲ ಸಂರಕ್ಷಣಗಳ ವಿಧಾನಗಳಿವೆ.
೨. ಸಂಗೀತ ತರಬೇತಿ – 3 ತಿಂಗಳು ತರಬೇತಿ ಶಾತಿಕುಂಜ ಹರಿದ್ವಾರದಲ್ಲಿ ನೀಡಲಾಗುತ್ತದೆ
೩. ಗೋ ಸಂಸ್ಕೃತಿ , ಗೋಮಾಳ ಸ್ವಾವಲಂಭನೆಯ ತರಬೇತಿಗಳು 15 ದಿನಗಳು ವಿಶೇಷ ತರಬೇತಿಯನ್ನು DSVV ಯಲ್ಲಿ ಗೋವಿನ ಯಾಜ್ಯ ವಸ್ತುಗಳನ್ನು ಉಪಯೋಗಕರವಾಗಿ ಬಳಸುವ ವಿಧಾನಗಳನ್ನು ಕಲಿಸಲಾಗುವುದು.
೪. ತ್ಯಾಜ್ಯ ವ್ಯವಸ್ಥೆ ವರ್ಮಿ ಕಾಮ್ಪೋಸೆದ್ ಇದರ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ.
೫. ಜಲದ ಉಪಯೋಗ : 6 ತಿಂಗಳ ತರಬೇತಿ ಜಲ ರಕ್ಷಣೆಗಳ ಉಪಯೋಗದ ಬಗ್ಗೆ
೬. ವ್ಯಕ್ತಿತ್ವ ವಿಕಾಸದ ತರಬೇತಿ ಇದನ್ನು ಸಮೂಹವಾಗಿ ಕೋರಿಕೆ ಮೇಲೆ ನೀಡಲಾಗುತ್ತಿದೆ.