ನಾರೀ ಜಾಗರಣೆ

ನಾರೀ ಜಾಗರಣೆ

Women Awakening Movement
ಪರಮ ವಂದನೀಯ ಮಾತಾಜಿ ಮಾತಾ ಭಗವತಿ ದೇವಿ ಶರ್ಮಾ ಪರಮಪೂಜ್ಯರ ಧರ್ಮ ಪತ್ನಿ ಯಜ್ಞೀಯ ಹಾಗೀ ಪರಮ ತಪಸ್ವಿಯ ಜೀವನ ನಿರ್ವಹಣೆ ಮಾಡುತ್ತಾ ನಾರೀ ಜಾಗರಣೆಗಾಗಿ ಹೋರಾಡಿದರು. ಪತಿಯ ಪಾಲಿಗೆ ಬಂದ 2000 ಎಕ್ರೆ ಜಮೀನನ್ನೇ ಅನಾಥ ಹಾಗೂ ಶೋಷಿತ  ವರ್ಗದ ಸ್ತ್ರೀಯರಿಗಾಗಿ ಮಿಸಲಾಗಿರಿಸಿದರು. ಅವರನ್ನು ಓಟ್ಟುಗೂಡಿಸಿ ದೇವಪರಿವಾರ ಹೆಸರಿನಿಂದ ಆ ದೇವ ಕನ್ಯೆಯರಿಂದ ಗಾಯತ್ರೀ ಅನುಷ್ಥಾನ ವರ ಜಪ ಸಂಪನ್ನಗೊಳಿಸಿದರು. ಅಂತೆಯೇ ವೈದಿಕ ಸಂಸ್ಕೃತಿಯ ಮಹಾ ವಿದ್ಯಾಲಯವನ್ನು ಸ್ಥಾಪಿಸಿದರು ಅವರಿಗಾಗಿ. ಇದನ್ನು ಕನ್ಯಾಮಠವೆಂದು ಹೆಸರಿಸಿದರು. ಇಲ್ಲಿ ವಿದ್ಯೆ, ಬುದ್ಧ, ಸಂಸ್ಕಾರ, ಜಾತ್ಯಾತೀತ ಧರ್ಮಾರ್ಥ ವಿವಾಹ, ವಿಧವಾ ವಿವಾಹ ಹೀಗೆ ಸಮಾಜದ ಶೋಷಿತ ವರ್ಗದ ನಾರಿಯರ ಸರ್ವತೋಮುಖ ವಿಕಾಸಕ್ಕಾಗಿ ಅಹಿರ್ನಿಶಿ ಹೋರಾಡಿದರು. (ಇದು ಆಗ್ರಾ ಜಿಲ್ಲೆಯ ಆವಲ್ ಖೇಡಾ ಗ್ರಾಮದಲ್ಲಿದೆ)(ಇದೇ ಪರಮಪೂಜ್ಯದ ಜನ್ಮ ಸ್ಥಾನ.)ಇದೀಗ ಅಲ್ಲಿ ಕಾಲೇಜು ಸ್ಥಾಪನೆಯಾಗಿದೆ. ಅಲ್ಲದೆ ಮಾತಾ ಭಗವತಿ ದೇವಿ ಎಂಬ ಹೆಸರಿನ ಸ್ತ್ರೀಯರ ಆಸ್ಪತ್ರೆಯೂ ತಲೆ ಎತ್ತಿ ನಿಂತಿದೆ. ಜೀವನದಲ್ಲಿ ಕಂಗೆಟ್ಟ ಸ್ತ್ರೀಯರಿಗೆ ವಂದನೀಯ ಮಾತಾಜಿಯವರು ಅಪಾರ ಪ್ರೇಮ ಸ್ನೇಹ, ಮಮತೆ ಕೊಟ್ಟದ್ದೇ ಅಲ್ಲದೆ ಪ್ರತಿ ಓರ್ವರ ಅಂತಃಕರಣವನ್ನು ತನ್ನ ಕರುಣೆ ಸುಲಲಿತ ಹೃದಯದಿಂದ, ಭ್ಹವ ಸಂವೇದನೆಯಿಂದ ಸ್ಪಂದಿಸಿರುವರು. ಮಾತಾಜಿಯವರು ಸಾನಿಧ್ಯ ತಲುಪಿದವರು ಧನ್ಯರಾಗಿರುವರು, ಕೃತಾರ್ಥರಾಗಿರುವರು. ಜೀವನವನ್ನು ಸಾರ್ಥಕಗೊಳಿಸುವ ಧರೆಯ ಮೇಲಿನ ಈ ಭಾಗ್ಯವನ್ನು ಪಡೆದವರು ಖಂಡಿತವಾಗಿಯೂ ಅನುಪಮ ಭಾಗ್ಯಶಾಲಿಗಳು. ಶಚಿ, ಯಮಿ, ಭಾರತೀದೇವಿ, ಗೋಧಾ, ಅಹಲ್ಯಾ, ಅರುಂಧತಿ, ಅಪಲಾ ವೇದ ರಚಾಯಿತ ಬ್ರಹ್ಮವಾದಿನಿಯವರನ್ನು ಮಾತಾಜಿಯವರು ತಯಾರಿಸಿರುವರು. ಆಧ್ಯಾತ್ಮಿಕದ ಉನ್ನತ ಶಿಖರದತ್ತ ಅವರನ್ನು ತಲುಪಿಸಿರುವರು. ಆ ಪ್ರೇಮವನ್ನು ವರ್ಣಿಸಲು ಇಲ್ಲಿ ಶಬ್ದಗಳಿಲ್ಲ. ಮೌನವೇ ಬಂಗಾರ, ಮಾತು ಬೆಳ್ಳಿ ಎಂಬ ಭಾಸ ಕವಿಯ ಉಕ್ತಿಯೊಂದಿಗೆ ಪೂರ್ಣ ವಿರಾಮ ನೀಡಬೇಕಾಗಿದೆ. ಇಲ್ಲಿ. “ಮಹಿಳಾ ಜಾಗೃತಿ ಅಭಿಯಾನ್” ಇದು ಮಾತಾಜಿಯವರ ಅಂತಃಕರಣದ ಘೋಷಣೆ. ಇದಕ್ಕಾಗಿಯೇ ಅವರ ಜೀವನ ತರ್ಪಣೆ. ಉದ್ವಿಗ್ನರಾಗಿ ಅತ್ಯಂತ ದುಃಖ ಪೀಡಿತರಾಗಿ ಮಾತಾಜಿಯವರು ಕೆಲವೊಮ್ಮೆ ಹೇಳುತ್ತಿದ್ದರು. ಜನ್ಮ ಜನ್ಮಾಂತರಗಳು ನಾರೀ ಮುಕ್ತಿಯ ಹೋರಾಟದಲ್ಲಿ ಕಳೆದು ಹೋದರೂ ಚಿಂತೆ ಇಲ್ಲ; ಆದರೆ ನಾನು ಅದನ್ನು ಬಿಟ್ಟುಕೊಡಲಾರೆ ಎಂದು. ಅದೇ ಅಲ್ಲ ಮಾತಾಜಿಯವರ ಭೋಜನಶಾಲೆಯಲ್ಲಿ ಪ್ರತಿದಿನ ಕನಿಷ್ಠ ಐದು ಸಾವಿರ ಜನತೆ ಊಟ ಮಾಡುತ್ತಿರುವರು. ಶಾಂತಿಕುಂಜದಲ್ಲಿ ವಸತಿ ಗೃಹ, ಭೋಜನ, ವಿದ್ಯುತ್ ನೀರು ಸರ್ವವೂ ಧರ್ಮಾರ್ಥ. ವಿದ್ಯಾರ್ಥಿಗಳಿಗೆ ನಿಶುಲ್ಕ ವಿದ್ಯಾಭ್ಯಾಸ ಅಂತೆಯೇ ವಸತಿ ಗೃಹಕ್ಕೂ ಏನೂ ತೆರಬೇಕಾಗಿಲ್ಲ. ಇಂತಹ ಧರ್ಮ ಸಂಸ್ಥೆ ಗಾಯಿತ್ರಿ ಸಾಧಕರ ಅಂಶದಾನ ಮತ್ತೆ ಸಮಯ ದಾನದೊಂದಿಗೆ ಕಳೆದ ೫೫ ವರ್ಷಗಳಿಂದ ನಡೆದುಕೊಂಡು ಬಂದಿದೆ.